ಎಂದ್ರೂಷಣ. ಕೊಟ್ಟನು, ಅದನ್ನು ಕೇಳಿದವಳೇ ಬಿಬೀಸಾಹೇಬಳು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಅನುಷ್ಠಾನಕ್ಕೆ ಕೂತಿದ್ದ ಬ್ರಾಹ್ಮಣರ ಮೈಮೇಲೆ ಹೋದಳು. ಆಗ ಅಲ್ಲಿ ಅನುಷ್ಠಾನಕ್ಕೆ ಕುಳಿತಿದ್ದ ಬ್ರಾಹ್ಮಣರು ತಮ್ಮ ತಮ್ಮ ಜೀವವನ್ನು ಉಳಿಸಿಕೊಳ್ಳುವದಕ್ಕಾಗಿ ದಿಕ್ಕು ದಿಕ್ಕಿಗೆ ಓಡಲಾರಂಭಿಸಿದರು, ಆದನ್ನು ನೋಡಿ ಬಿಬೀಸಾಹೇಬಳು ವಿದ್ಯಾ ನಾಹೇಬನ ಬಳಿಗೆ ಬಂದು-* ಹಜರತ ಸಬ್ ಬನ್ನುನ್ ಭಾಗಗಯ, ಅಬ್ಬಿ ಕ್ಯಾ ಕರನಾ ' ಎಂದು ಕೇಳಿದಳು, ಅದಕ್ಕೆ ಮಿಯಾಸಾಹೇಬನು- ಅಛಾ ಹೈ! ಏಕದೋ ಖಡೇಸೋ ಕಾಟೋ ಎಂದು ಹೇಳಿದನು, ಅದರಂತೆ ಅವಳು ಕೈಯಲ್ಲಿ ಚೂರಿಯನ್ನು ತಕ್ಕೊಂಡು ಇನಃ ಅಲ್ಲಿಗೆ ಬಂದು ಸಮರ್ಥರ ಮೈಮೇಲೆ ಹೋಗಲಾಗಿ ಸಮರ್ಥರು ತಮ್ಮ ಕುತ್ತಿಗೆಯ ಅವಳ ಮುಂದೆ ಚಾಚಿದರು ಅವಳು ಸಮರ್ಥರ ಶಿಷ್ಯನಾದ ಕಲ್ಯಾಣನ ಮೈಮೇಲೆ ಹೆಗಲಾಗಿ ಅವನೂ ತನ್ನ ಕುತ್ತಿಗೆಯನ್ನು ಅವಳ ಮುಂದ ಚಾಚಿದನು, ಇದನ್ನು ಕಂಡು ದತ್ತಾತ್ರೆಯನು ತನ್ನ ನಿಜಸ್ವರೂಪವನ್ನು ಪ್ರಕಟ ಮಾಡಿ ಸಮರ್ಥರಿಗೆ ಅಪ್ಪಿಕೊಂಡನು. ಇದು ಶಕೆ ೧೫೬೪ ರಲ್ಲಿ ವರ್ತಿಸಿತ್ತು. ತೈಲಂಗಣದೇಶಕ್ಕೆ ಬಿಜಯವಾಡಿದ್ದು-ಸಮರ್ಥರು ತೀರ್ಥ ಯಾತ್ರೆಯನ್ನು ಮಾಡುತ್ತಾ ಮಾತಾಪುರದಿಂದ ತೈಲ೦ಗಣ ದೇಶಕ್ಕೆ ಹೋದರು, ಅಲ್ಲಿ ಸಂಚರಿಸುತ್ತಾ ಒಂದು ದಿವಸ ಸಾರಂಗಪುರದ ಸಮೀಪಕ್ಕೆ ಇರುವ ಇಂದೂರ ಎಂಬ ಊರಿಗೆ ಹೋಗಿ ಮುಟ್ಟಿದರು ಆ ಊರ ಹೊರಗೆ ಒಂದು ದೊಡ್ಡ ಕೆರೆ ಇದ್ದು ಅದರ ಸುತ್ತಲು ಗುಡ್ಡ ಗಾಡು ಇತ್ತು, ಆ ಕರೆಯಲ್ಲಿ ೬೦ ಮಂದಿ ಬ್ರಾಹ್ಮಣರು ನಾಭಿಯ ಪರಿಯಂತರ ನೀರೊಳಗೆ ನಿಂತು ಪರ್ಜನ್ಯದ ಬಗ್ಗೆ ಅನುಷ್ಠಾನವನ್ನು ಮಾಡುತ್ತಿದ್ದರು. ಅವರನ್ನು ಕಂಡು ಸಮರ್ಥರು * ನೀವೆಲ್ಲರು ನೀರೊಳಗ ಇಷ್ಟೊತ್ತಿತನಕ ಯಾಕೆ ನಿಂತಿದ್ದೀರಿ?” ಎಂದು ಕೇಳಿದರು, ಅದಕ್ಕೆ ಅವಳು “ ನವ ಸರ್ಜನ್ಯದ ಗೋಸ್ಕರ ಅನುಷ್ಠಾನವನ್ನು ನಡಿಸಿರುತ್ತೇವೆ” ಎಂದು ಹೇಳಿದರು, ಆಗ ಸಮರ್ಥರು-' ನಾನು ಹೇಳಿದಂತೆ ನೀವೆಲ್ಲರು ಮಾಡಿದರೆ ಈ ವೊತ್ತು ಒಂಭತ್ತು ತಾಸಿಗೆ ಪರ್ಜನ್ಯ ವಾಗುವದು. ಎಂತ ಕೇಳಿದರು, ಅದನ್ನು ಕೇಳಿ ಅವರೆಲ್ಲರು “ ಏನು ಅಪ್ಪಣಿ ಯಾಗುತ್ತದೆ? ಎಂತ ಪ್ರಶ್ನೆ ಮಾಡಿದರು, ಆಗ ಸವರ್ಧರು “ ನೀವೆಲ್ಲರು ನೀರೊಳಗಿಂದ ಹೊರಟು ಬರಿ” ಎಂದು ಹೇಳಿದರು. ಸಮರ್ಥರ ಅಪ್ಪಣತಂತೆ ಬ್ರಾಹ್ಮಣರೆಲ್ಲರು ನೀರೊಳಗಿಂದ ಮೇಲಕ್ಕೆ ಹೊರಟು ಬರಲಾಗಿ, ಸವ.ರ್ಥರು ಒಂದು ಕಲ್ಲನ್ನು ತಕ್ಕೊಂಡು ಅದರ ಮೇಲೆ ಇದ್ದಲಿಯಿಂದ ಹನುಮಂತ ದೇವರ ಚಿತ್ರವನ್ನು ಬರೆದು ಆ ಕಲ್ಲಿನ ಮೇಲೆ ಒಂದು ವದ್ದೆಯ ಶಾಲನ್ನು ಹಚ್ಚಿ ಆ ಬ್ರಾಹ್ಮಣರೆಲ್ಲರಿಗೆ ಅದಕ್ಕೆ ರುದ್ರಾಭಿಷೇಕ ಮಾಡಿರೆಂದು ಹೇಳಿದರು, ಆಗ ಆ ಬ್ರಾಹ್ಮಣರು ಸಮರ್ಥರ ಅಪ್ಪಣಿಯಂತ ಅಭಿಷೇಕ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೪
ಗೋಚರ