ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಕರ್ಣಾಟಕ ಚಂದ್ರಿಕೆ.

ವಿಲಾಸಭವನದಲ್ಲಿ ಕುಳಿತಿರಲು, ಮಂದಿರಾಂತದಲ್ಲಿ ಯಾರೋ ಮಾತ
ನಾಡುತ್ತಿದಂತೆ ಕೇಳಿಸಿತು. ವಿಜಯವರ್ಮನು ಅತ್ತ ಕಡೆ ಕಿವಿಗೊಟ್ಟು
ಕೇಳಿದನು. ಅದು ಕನುಲಕುಮಾರಿಯ ವಿಚಾರವಾಗಿದ್ದಿತು. ವಿಜಯ
ವರ್ಮನು ಉತ್ಸುಕಿತನಾಗಿ ಎದ್ದು ಬಾಗಿಲ ಬಳಿಗೆ ಹೋಗಿ ನೋಡಿ
ದನು. ಇಬ್ಬರು ಯವ್ವನಸ್ಥರು ಮಾತನಾಡಿಕೊಳ್ಳುತ್ತಿದ್ದರು. ಅವರು
ಮೆಲ್ಲನೆಮಾತನಾಡಿಕೊಳ್ಳುತ್ತಿದ್ದುದರಿಂದ ಆ ಸಂಭಾಷಣೆಯೆಲ್ಲವೂ
ನಮಗೆ ವಿಶದವಾಗಿ ತಿಳಿಯಲಿಲ್ಲ. ನನಗೆ ಕೇಳಿಸಿದ ಒಂದೆರಡು
ಮಾತುಗಳಿಂದ ಅವರಿಬ್ಬರೂ ಕಮಲಕುಮಾರಿಯನ್ನು ಅಪಹರಿಸಿಕೊಂಡು
ಹೋಗಬೇಕೆಂದು ಆಲೋಚನೆ ಮಾಡುತ್ತಿದ್ದರೆಂದು ತಿಳಿಯಿತು. ವಿಜಯ
ವರ್ಮನು ಇನ್ನು ಸೈರಿಸಲಾರದವನಾದನು. ಅವರ ಕಂಠಸ್ವರವನ್ನೂ.
ಚರ್ಯೆಯನ್ನೂ ಕಂಡು ಸಂತಾಪಕನೂ ಅವನ ಮಿತ್ರನೂ ಅಲ್ಲಿಗೆ ಬಂದಿರು
ವರೆಂದು ನಿಶ್ಚಯಿಸಿದನು. ಮಾರ್ಗದಲ್ಲಿ ಅವರು ತನಗೆ ಮಾಡಿದ
ಆಸನಾನಕ್ಕೆ ತಕ್ಕ ಪ್ರತೀಕಾರವನ್ನು ತತ್ ಕ್ಷಣವೇ ಮಾಡಬೇಕೆಂದು
ಬಯಸಿದನು. ಅವನ ಮನಸ್ಸಿನಲ್ಲಿ ಬಗೆಬಗೆಯ ಭಾವಗಳು ಅಂಕುರಿಸಿ
ದುವ, ಕಣ್ಣುಗಳು ಕೆಂಪೇರಿದುವು. ತುಟಗಳು ಚಲಿಸಿದುವು. ಹುಲ್ಲು
ಗಳು ವಕ್ರವಾದುವು. ವಿಜಯವರ್ಮನು ಅವರಿಬ್ಬರನ್ನೂ ಆಕ್ರಮಣಮಾಡ
ಬೇಕೆಂದು ಮುಂದುವರಿದನು. ಯಥಾಕಾಲದಲ್ಲಿ ಕಮಲಾಕರದತ್ತನೂ
ಅಲ್ಲಿಗೆ ಬಂದನು. ವಿಜಯವರ್ಮನು ತಾಳ್ಮೆಯನ್ನು ವಹಿಸಿ ಮುಂದೆ
ಬ೦ದು ಕಮಲಾಕರದತ್ತನಿಗೆ ಅಭಿವಂದಿಸಿದನು. ಈರ್ವರಿಗೂ ಕುಶಲಪ್ರಶ್ನೆ
ಗಳು ನಡೆದುವು. ಬಳಿಕ ವಿಜಯವರ್ಮನು ಕಮಲಾಕರದತ್ತನನ್ನು ರಹಸ್ಯ
ವಾಗಿ ಕರೆದು ಅವರಿಬ್ಬರೂ ಯಾರೆಂದು ಪ್ರಶ್ನೆ ಮಾಡಿದನು. ದತ್ತನು ಹಸ
ನ್ಮುಖಿಯಾಗಿ ಅವರಿಬ್ಬರೂ ತನ್ನ ಮಿತ್ರರೆಂದೂ, ತನ್ನ ಅಭಿಪ್ರಾಯಾನುಸಾರ
ವಾಗಿ ಬಂದಿರುವರೆಂದೂ ದೃಢವಾಗಿ ತಿಳಿಸಿದನು. ವಿಜಯವರ್ಮನ ಮನಸ್ಸು
ಡೋಲಾಯಮಾನವಾಯಿತು. ಎಷ್ಟೆಷ್ಟು ಬಗೆಯಲ್ಲಿ ಪ್ರಶ್ನೆ ಮಾಡಿದರೂ
ದತ್ತನಿಗೆ ಅವರ ವಿಷಯದಲ್ಲಿ ಸ್ವಲ್ಪವಾದರೂ ಅನುಮಾನವುಂಟಾಗಲಿಲ್ಲ.
ವಿಜಯವರ್ಮನ ಮಾತಿನಲ್ಲಿ ಅವನಿಗೆ ನಂಬುಗೆಯೂ ಹುಟ್ಟಲಿಲ್ಲ. ವಿಜಯ
ವರ್ಮನು ಉದಾಸೀನನಾಗಿ ತನ್ನ ಮದುವೆಯ ವಿಚಾರವನ್ನು ಕುರಿತು