ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೨
ಕರ್ಣಾಟಕ ಚಂದ್ರಿಕೆ.

ವಿಜಯ :- "ನಸ್ತ್ರೀಸ್ವಾತಂತ್ರ್ಯಮರ್ಹತಿ " ಎಂದಿರುವುದರಿಂದ ಇದು
ಒಪ್ಪತಕ್ಕುದಲ್ಲ.
ಕಮಲೆ :- ನಮ್ಮ ಜನಕನೂ ಅನುಮತಿಸಿರುವನು.
ವಿಜಯ :- ಕಮಲೇ ! ನೀನು ಯಾವನನ್ನು ಮದುವೆಯಾಗಬೇ
ಕೆಂದಿರುವೆಯೋ ಅವನ ಯೋಗ್ಯತೆಯನ್ನು ಬಲ್ಲೆಯಾ ?
ಕಮಲೆ :- ಚೆನ್ನಾಗಿ ಬಲ್ಲೆನು.
ವಿಜಯ :- ಅವನು ಘಾತುಕ. ಪ್ರತ್ಯಕ್ಷರಾಕ್ಷಸ. ಅಂಥವನನ್ನು
ಮದುವೆಯಾಗುವೆಯಾ !
ಕಮಲೆ :- ನೀನು ಉನ್ಮತ್ತನಾಗಿರುವ೦ತೆ ತೋರುವುದು. ನೀನು
ಅವನನ್ನು ಮನಸ್ವಿಯಾಗಿ ನಿಂದಿಸುವುದಕ್ಕೆ ಕಾರಣವಿಲ್ಲ. ಇಲ್ಲಿಂದ
ಹೊರಟುಹೋಗು.
ವಿಜಯ :- ಕಮಲೇ ! ಸಂತಾಪಕನೆಂಬುವನನ್ನು ಕೇಳಿಬಲ್ಲೆಯಾ ?
ಅವನೇ ಈ ನೀಚನು. ವೇಷಾಂತರದಿಂದ ಬಂದು ನಿನ್ನನ್ನು ಮರುಳು
ಮಾಡಿರುವನು.
ಕಮಲೆ :- ಅವನು ಸಂತಾಪಕನಲ್ಲ. ನನ್ನ ತಂದೆಗೆ ಪರಮಾಪ್ತ
ನಾದ ವಿನಯಚಂದ್ರದತ್ತನ ಮಗ. ಇದನ್ನು ನಾನು ಬಲ್ಲೆನು. ಭೇದೋ
ಪಾಯದಿಂದ ನನ್ನ ಮನಸ್ಸನ್ನು ವಶಮಾಡಿಕೊಳ್ಳಬೇಕೆಂದು ಅಪೇಕ್ಷಿಸಿ
ರುವ ನೀನೇ ಸ೦ತಾಪಕನು, ನಿನ್ನೊಡನೆ ನಾನು ಒಂಟಿಯಾಗಿ ನಿಲ್ಲುವುದು
ಉಚಿತವಲ್ಲ.
ಹೀಗೆ ಹೇಳಿ ಕುಮಾರಿಯು ಅಲ್ಲಿ ನಿಲ್ಲದೆ ಹೊರಟುಹೋದಳು.
ವಿಜಯವರ್ಮನ ಪ್ರಾರ್ಥನೆಯೆಲ್ಲ ವಿಫಲವಾಗಿ ಹೋಯಿತು. ಅವನು
ಕುಮಾರಿಯನ್ನು ಕಣ್ಣಿಗೆ ಮರೆಯಾಗುವವರೆಗೂ ನಿಂತು ನೋಡುತ್ತಿದ್ದನು.
ಅವಳು ಮನೆಯೊಳಕ್ಕೆ ಹೊರಟುಹೋದಬಳಿಕ ದೊಡ್ಡದಾದ ಒಂದು
ನಿಶ್ವಾಸವನ್ನು ಬಿಟ್ಟು ಸ್ವಗೃಹಾಭಿಮುಖನಾಗಿ ಹೊರಟುಹೋದನು.

——————