ಪುಟ:ಸಂತಾಪಕ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪

ಕರ್ಣಾಟಕ ಚಂದ್ರಿಕೆ.

ವೆಯೇ ಕಾರಣ. ಕುಮಾರಿಗೆ ತಾನು ಪ್ರೀತಿಸಿ ವಾಗ್ದಾನಮಾಡಿದ ವರನ
ವಿಷಯದಲ್ಲಿ ಸಂಶಯವುಂಟಾಗಿರುವುದು. " ಅವನು ಕುಮುದೀನಿಚಂದ್ರನೋ
ಸಂತಾಪಕನೋ ತಿಳಿಯದು. ಅವನು ಕುಮುದಿನೀಚಂದ್ರನೇ ಆಗಿದ್ದ
ಪಕ್ಷದಲ್ಲಿ ಸಂತಾಪನೆಂದೇಕೆ ಹೇಳುತ್ತಿದ್ದನು ? ಅವನು ಸಂತಾಪಕನೇ ಸರಿ.
ವಿನಯಚಂದ್ರದತ್ತನು ಬರೆದ ಪತ್ರಿಕೆಯು ಅವನಿಗೆ ಹೇಗೆ ಸಿಕ್ಕಿತು ? ಅದೂ
ಕೃತ್ರಿಮಸಂಧಾನವೇ ಆಗಿರಬಹುದೇ ? ಎಂದು ಮೊದಲಾಗಿ ಅವಳ ಮನ
ಸ್ಸಿನಲ್ಲಿ ಅನೇಕಾನೇಕ ಪ್ರಶ್ನೆಗಳು ತಲೆದೋರುತ್ತಿರುವುವು. ಕುಮಾ
ರಿಯು ಈ ವಿಷಯವನ್ನೆಲ್ಲ ದತ್ತನಿಗೆ ತಿಳಿಸಬೇಕೆಂದು ತಟ್ಟನೆದ್ದಳು.
" ಕಮಲೆ ! ನೀನು ಆ ಯುವಕನಿಗೆ ಮಾಡಿರುವ ವಾಗ್ದಾನವನ್ನು ಸ್ಮರಿ
ಸಿಕೊ ಅವನ ರಹಸ್ಯವನ್ನು ಪ್ರಕಾಶಪಡಿಸುವುದು ನಿನಗೆ ಯುಕ್ತವೆ? "
ಎಂದು ಯಾರೋ ಪ್ರಶ್ನೆಮಾಡಿದಂತೆ ಅವಳ ಕಿವಿಗೆ ಕೇಳಿಸಿತು. ಕುಮಾ
ರಿಯು ಮತ್ತೆ ಕುಳಿತುಬಿಟ್ಟಳು. ಏನೇನೋ ಆಲೋಚಿಸಿದಳು. ಮತ್ತೆ
ಎದ್ದುನಿಂತಳು, ಮೊದಲಿನಂತೆ ಯಾರೋ ಅವಳ ಕಿವಿಯಲ್ಲಿ " ಅ೦ತಹ
ಸೌಂದರ್ಯಶಾಲಿಯು ಸಂತಾಪಕನೆಂದರೇನು ? ವಿಜಯವರ್ಮನು ಅಸೂ
ಯೆಯಿ೦ದ ಹೀಗೆ ಹೇಳಿದನು. " ಎಂದು ಸಂತವಿಸಿದಂತೆ ಬೋಧೆಯಾಯಿತು.
ಕುಮಾರಿಯು ಉಪವನದಲ್ಲಿ ನಡೆದ ವಿಷಯಗಳನ್ನೆಲ್ಲ ಮತ್ತೆ ಸ್ಮರಿಸಿಕೊ೦
ಡಳು. ಕುಮುದಿನೀಚ೦ದ್ರನು ತನ್ನ ಮನಸ್ಸನ್ನು ಪರೀಕ್ಷಿಸಬೇಕೆಂಬ
ಉದ್ದೇಶದಿಂದಲೇ ಅಸತ್ಯವನ್ನಾಡಿರುವನೆಂದು ನಿಶ್ಚಯ ಮಾಡಿಕೊಂಡಳು.
ಆಗ ಕಿರುಮನೆಯ ಬಲಗಡೆಯಿದ್ದ ಗವಾಕ್ಷದಿಂದ ಯಾರೋ ಅತ್ತಕಡೆ
ಓಡಾಡುತ್ತಿದ್ದಂತೆ ಮೈನೆಳಲು ಕಾಣಿಸಿತು. ಕುಮಾರಿಯು ಎದ್ದು ಹೋಗಿ
ನೋಡಿದಳು. ಅಲ್ಲಿ ಯಾರೂ ಇರಲಿಲ್ಲ. ಕುಮಾರಿಯು ಮತ್ತೆ ಬಂದು
ಕುಳಿತುಕೊಂಡಳು. ಆಗ ಚಂಚಲೆಯು ಒಳಕ್ಕೆ ಬಂದು ಕುಮಾರಿಯನ್ನು
ಊಟಕ್ಕೆ ಕರೆದಳು. ಕುಮಾರಿಯು ಗವಾಕ್ಷದ ಬಾಗಿಲನ್ನು ಮುಚ್ಚಿ ತನ್ನ
ಪೆಟ್ಟಿಗೆಗಳ ಬಿಯಗದ ಕೈಗಳನ್ನು ಕಿರುಮನೆಯಲ್ಲಿದ್ದ ಕಾಲುಮಣೆಯಮೇ
ಲಿಟ್ಟು ಹೊರಟುಹೋದಳು. ಕುಮಾರಿಯು ಹೊರಟು ಹೋದ ಉತ್ತರಕ್ಷಣ
ದಲ್ಲಿಯೇ ಗವಾಕ್ಷದ ಬಾಗಿಲು ಮತ್ತೆ ತೆರೆಯಲ್ಪಟ್ಟಿತು. ವಸ್ತ್ರಾವಕುಂಠಿತ
ಶೀರ್ಷನಾದ ಒಬ್ಬ ಪುರುಷನು ಗವಾಕ್ಷವನ್ನು ಹತ್ತಿ ಒಳಕ್ಕೆ ಬಂದನು.
ಕಾಲುಮಣೆಯಮೇಲಿದ್ದ ಬಿಯಗದ ಕೈಗಳು ಇವನ ದೃಷ್ಟಿಗೆ ಗೋಚರಿಸಿ