ಪುಟ:ಸಂತಾಪಕ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೨೫



ದುವು.ಆಗಂತುಕನು ಅದನ್ನು ತೆಗೆದುಕೊಂಡು ಒಂದು ಕಬ್ಬಿಣದ ಪೆಟ್ಟಿ
ಗೆಯ ಬಾಗಿಲನ್ನು ತೆರೆದನು.ಅದರಲ್ಲಿ ಅನೇಕಾಭರಣಗಳೂ ಕೆಲವು
ನಾಣ್ಯಗಳೂ ಇದ್ದುವು.ಆಗಂತುಕನು ಕೆಲವು ನಾಣ್ಯಗಳನ್ನು ತೆಗೆದು
ಕೊಂಡು, ಮೊದಲಿನಂತೆ ಪೆಟ್ಟಿಗೆಯ ಬಿಯಗವನ್ನು ಹಾಕಿ ಭದ್ರಪಡಿಸಿ ಬಿಯ
ಗದೆಸಳುಗಳನ್ನು ಕಾಲುಮಣೆಯಮೇಲಿಟ್ಟು ಗವಾಕ್ಷದಿಂದ ಹೊರಕ್ಕೆ
ಬಂದನು.ದತ್ತನ ಮನೆಯನ್ನು ಬಿಟ್ಟು ಹೊರಕ್ಕೆ ಬರಬೇಕಾದರೆ ಉಪ
ವನದ ಮಾರ್ಗವಾಗಿ ಬರಬೇಕಾಗಿದ್ದಿತು. ಆಗಂತುಕನು ಆ ಉಪವನ
ದಲ್ಲಿ ಬೇಗ ಬೇಗ ಬರುತ್ತಿದ್ದಾಗ, ಯಾರೋ ಇವನನ್ನು ಅನುಸರಿಸಿ ಬರು
ತ್ತಿದ್ದಂತೆ, ಹೆಜ್ಜೆಯ ಶಬ್ದವಾಯಿತು. ಆಗಂತುಕನು ತಟ್ಟನೆ ನಿಂತು ನಾಲ್ಕು
ದಿಕ್ಕುಗಳನ್ನೂ ನೋಡಿದನು. ಯಾರೂ ಇರಲಿಲ್ಲ. ಮತ್ತೆ ಮುಂದೆ ಹೊರ
ಟನು. ತಿರುಗೀ ಮೊದಲಿನಂತೆಯೇ ಶಬ್ಬವಾಯಿತು. ಆಗಂತುಕನು ತಿರುಗೀ
ನಿಂತು ನೋಡಿದನು. ಏನೂ ತಿಳಿಯಲಿಲ್ಲ. ಆಗಂತುಕನು ಸ್ವಲ್ಪಹೊತ್ತು
ಆಲೋಚಿಸಿ ಮುಂದೆ ಹೊರಟು ಉಪವನದ ಬಾಗಿಲನ್ನು ಹಾದು ರಾಜಬೀದಿಗೆ
ಬಂದನು. ಆಗ ಮಧಾಹ್ನ ಹನ್ನೆರಡು ಗಂಟೆಯಾಗಿದ್ದಿತು. ರಾಜಬೀದಿಯಲ್ಲಿ
ಯಾರೂ ತಿರುಗಾಡುತ್ತಿರಲಿಲ್ಲ. ಸೂರ್ಯದೇವನು ತೀಕ್ಷ ತರವಾದ ತನ್ನ
ಕಿರಣಧಾರೆಗಳಿಂದ ಲೋಕವನ್ನೆಲ್ಲ ಭಸ್ಮಮಾಡುತ್ತಿದ್ದನು. ಬಿಸಲ ವೇಗ
ವನ್ನು ಸೈರಿಸಲಾರದೆ ಒಂದು ಕೋಗಿಲೆಯು ರಸಾಲವೃಕ್ಷದ ಶಾಖೆಯಮೇಲೆ
ಎಲೆಗಳಮಧ್ಯದಲ್ಲಿ ಕುಳಿತುಕೊಂಡು ತನ್ನ ಅವ್ಯಕ್ತಮಧುರವಾದ ಪಂಚಮ
ಸ್ವರದೊಡನೆ ಒಂದು ಬಾರಿ “ ಕುಹೂ" ಎಂದು ಕೂಗಿತು. ಪಾಠಕಮಹಾ
ಶಯರೇ ! ಈ ಕುಹೂಶಬ್ದವು ಮನೋಹರವಾದುದೇ ಅಹುದಾದರೂ
ಎಷ್ಟೋ ಸ್ಥಳಗಳಲ್ಲಿ ನೀವೇ ಅದನ್ನು ಕಿವಿಯಾರೆ ಕೇಳಿರುವಿರಾದುದರಿಂದ
ಗ್ರಂಥವಿಸ್ತಾರಕ್ಕೆ ಅವಕಾಶವನ್ನು ಕೊಟ್ಟು ಅದನ್ನು ವರ್ಣಿಸಲು ನಮಗಿ
ಷ್ಟವಿಲ್ಲ. ಅಪರಿಚಿತನಾದ ಆಗಂತುಕನು ಆ ಶಬ್ದವನ್ನು ಕೇಳಿ ಮತ್ತೆ
ಅಲ್ಲಿ ನಿಂತು ನಾಲ್ಕು ದಿಕ್ಕುಗಳನ್ನೂ ನೋಡಿ ತನ್ನ ಮುಖದಮೇಲಣ ಬಟ್ಟೆ
ಯನ್ನು ತೆಗೆದುಹಾಕಿ ಬೇಗಬೇಗನೆ ಮುಂದೆ ಹೋದನು. ಈ ರಾಜಮಾರ್ಗ
ದಲ್ಲಿ ಇನ್ನೂ ಮುಂದೆ ಹೋಗಿ ಬಲಗಡೆಗೆ ತಿರುಗಿದರೆ ಒಂದು ಅಂಗಡಿ
ಬೀದಿಯು ಕಾಣಿಸುವುದು.ಅಪರಿಚಿತನು ಅಂಗಡಿ ಬೀದಿಯ ಕಡೆಗೆ ತಿರುಗಿ
ಒಂದು ದೊಡ್ಡ ಉಪ್ಪರಿಗೆಯ ಮನೆಯನ್ನು ಪ್ರವೇಶಿಸಿದನು. ಆ ಮನೆಯ