ಪುಟ:ಸಂತಾಪಕ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಕರ್ಣಾಟಕ ಚ೦ದ್ರಿಕೆ.




ಬಲಗಡೆ ಮೇಲ್ಭಾಗಕ್ಕೆ ಹತ್ತಿಹೋಗುವ ಹಂತವಿದ್ದಿತು. ಅಪರಿಚಿತನು
ಉಪ್ಪರಿಗೆಯಮೇಲೆ ಹತ್ತಿ ಸುಸಜ್ಜಿತವಾಗಿದ್ದ ಒಂದು ಹಜಾರದೊಳಕ್ಕೆ
ಹೋದನು. ಆ ಹಜಾರದ ಉತ್ತರ ಪಾರ್ಶ್ವದಲ್ಲಿ ಒಂದೆರಡು ಹಂಸತೂಲಿಕಾ
ತಲ್ಪಗಳೂ ಒಂದು ದೊಡ್ಡದಾದ ಕಾಲುಮಣೆಯೂ ಕಣ್ಗೊಳಿಸುತ್ತಿದ್ದುವು.
ಇದಿರುಗೋಡೆಯಲ್ಲಿ ಒಂದು ದೊಡ್ಡ ಗಡಿಯಾರವಿದ್ದಿತು. ಅಪರಿಚಿತನು
ಕಾಲುಮಣೆಯ ಬಳಿಯಲ್ಲಿದ್ದ ಒಂದು ಉನ್ನತಾಸನದಮೇಲೆ ಕುಳಿತು
ಕೊಂಡನು. ಇವನು ಕುಳಿತುಕೊಂಡ ಉತ್ತರಕ್ಷಣದಲ್ಲಿಯೇ ಒಬ್ಬ
ಭೃತ್ಯನು ಒಂದು ಸೀಷೆಯನ್ನೂ ಒಂದು ಗಾಜಿನ ಬಟ್ಟಲನ್ನೂ ತಂದು ಕಾಲು
ಮಣೆಯ ಮೇಲಿಟ್ಟನು. ಅಪರಿಚಿತನು ತಾನು ಧರಿಸಿದ್ದ ಉಡುಪುಗಳನ್ನೆಲ್ಲ
ತೆಗೆದು ಹಂಸತೂಲಿಕಾತಲ್ಪದಮೇಲಿರಿಸಿ ಸಾಮಾನ್ಯವಾದ ಒಂದು ಬಿಳಿಯ
ಕವಚವನ್ನು ತೊಟ್ಟು ಕಾಲುಮಣೆಯ ಬಳಿಗೆ ಬಂದನು. ಪಾಠಕಮಹಾ
ಶಯರೇ! ಈಗ ನೋಡಿ, ಇವನು ಯಾರು.? ಇವನನ್ನು ನೀವು ಎರಡು
ಬಾರಿ ನೋಡಿರುವಿರಿ. ಆದರೂ ಮರೆತುಬಿಡಬಹುದೇ ? ನಮ್ಮ ಕಥಾನಾ
ಯಕನ ಆಪ್ತನಾದ ನಂದಕುಮಾರಮಿತ್ರನೇ: ಇವನಲ್ಲವೆ? ನಂದಕುಮಾರನಿಗೆ
ಮದ್ಯಪಾನದಲ್ಲಿ ಬಹಳ ಅಭಿರುಚಿ. ನಂದಕುಮಾರನು ತನ್ನ ಉಡುಪನ್ನು
ತೆಗೆದ ತತ್ಕ್ಷಣವೇ ಸೀಷೆಯಿಂದ ಮದ್ಯವನ್ನು ಬಟ್ಟಲಿಗೆ ಸ್ವಲ್ಪ ಹಾಕಿ ಪಾನ
ಮಾಡಿದನು. ಆ ವೇಳೆಗೆ ಸರಿಯಾಗಿ ಭೃತ್ಯನು ಮಾವು, ರಸಬಾಳೆ, ದ್ರಾಕ್ಷೆ
ಮೊದಲಾದ ಕೆಲ ಹಣ್ಣುಗಳನ್ನು ತಂದು ಕಾಲ್ಮಣೆಯ ಮೇಲಿಟ್ಟು ದೂರದಲ್ಲಿ
ನಿಂತುಕೊಂಡನು. ನಂದಕುಮಾರನು ಒಂದೆರಡು ಹಣ್ಣುಗಳನ್ನು ತಿಂದು
ಮತ್ತೆ ಸ್ವಲ್ಪ ಮದ್ಯವನ್ನು ಬಟ್ಟಲಿಗೆ ಹಾಕಿಕೊಂಡು ಪಾನಮಾಡಿದನು.
ಸುರಾದೇವಿಯು ಪ್ರಸನ್ನಳಾದಳು. ಇತರ ದೇವತಾರ್ಚನೆಗಳಿಗಿಂತ ಸುರಾ
ದೇವತೆಯ ಅರ್ಚನೆಯು ಕ್ಷಿಪ್ರಫಲದಾಯಕವಾದುದು, ಸುರೆಯು ತನ್ನ
ಭಕ್ತರ ಬಯಕೆಯನ್ನೆಲ್ಲ ಅ೦ತರ೦ಗದಲ್ಲಿಯೇ ಸಲ್ಲಿಸಿಬಿಡುವಳು.ತನ್ನ
ಭಕ್ತರಿಗೆ ಧೈರ್ಯವನ್ನೂ ಬುಧ್ಧಿಯನ್ನೂ ಸಂತೋಷವನ್ನೂ ವೈರಾಗ್ಯವನ್ನೂ
ಇಷ್ಟಾನುಸಾರವಾಗಿ ದಯಪಾಲಿಸುವಳು. ನಮ್ಮ ನಂದಕುಮಾರನಂಥವ
ರನೇಕರು ಈಕೆಯ ಅನುಗ್ರಹಕ್ಕೋಸ್ಕರ ತಮ್ಮ ತನುವನ್ನೂ ಧನವನ್ನೂ
ಮಾನವನ್ನೂ ಮುಖ್ಯವಾಗಿ ಸರ್ವಸ್ವವನ್ನೂ ಒಂದೊಂದುವೇಳೆ ಪ್ರಾಣ
ವನ್ನೂ ತೃಣೀಕರಿಸಿರುವರು. ಇಂತಹ ವಿಚಿತ್ರಮಹಿಮಾನ್ವಿತಳಾದ ಸುರೆಯು