ಪುಟ:ಸಂತಾಪಕ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೨೭




ನಂದಕುಮಾರನನ್ನು ಕಡೆಗಣ್ಗಳಿಂದ ನೋಡಿ ನಕ್ಕಳು.ತರುವಾಯ
ಸಮೀಪಕ್ಕೆ ಬಂದಳು. ಮೆಲ್ಲನೆ ಅವನ ಅ೦ಗಸ್ಪರ್ಶವನ್ನು ಮಾಡಿ ಚುಂಬಿ
ಸಿದಳು. ಬಳಿಕ ತನ್ನ ಬಾಹುಲತೆಗಳಿಂದ ಅವನನ್ನು ದೃಢವಾಗಿ ಆಲಿಂಗಿಸಿ
ದಳು. ನಂದಕುಮಾರನ ಸ್ಥಿತಿಯನ್ನು ಇನ್ನು ನಾವು ವಿವರಿಸಬೇಕೇ ?
ಅವನು ತನ್ನಲ್ಲಿ ಅನುರಕ್ತಳಾದ ಸುರೆಯನ್ನು ಆದರಾತಿಶಯದಿಂದ ಸನ್ಮಾ
ನಿಸಿ ಆ ಸೀಷೆಯಲ್ಲಿ ಮೂರ್ತಿಮತ್ತಾಗಿರ್ದ ಸುರೆಯನ್ನು ತನ್ನ ಜಠರದಲ್ಲಿ
ಧಾರಣ ಮಾಡಿಕೊಂಡನು. ಇಬ್ಬರೂ ಪರಸ್ಪರಾನುರಕ್ತರಾಗಿ ಸ್ವಲ್ಪಕಾಲ
ಸಂಭಾಷಣೆಗೆ ಮೊದಲುಮಾಡಿದರು. ಸುರೆಯ ಮೃದುಮಧುರ ವಚನಗ
ಳಿ೦ದ ನಂದ ಕುಮಾರಮಿತ್ರನು ಆನಂದಪರವಶನಾಗಿ ಕಣ್ಣುಗಳನ್ನು ಮುಚ್ಚಿ
ಕೊಂಡನು. ತತ್ ಕ್ಷಣವೇ ಅವನಿಗೆ ಒಂದು ದೊಡ್ಡ ಅಂಧಕಾರವು ಕಾಣಿ
ಸಿತು. ಕಣ್ತೆರೆದು ನೋಡಿದನು. ಏನೂ ಇರಲಿಲ್ಲ. ನಂದಕುಮಾರನಿಗೆ
ಬಹು ಸಂತೋಷವಾಯಿತು. ಮತ್ತೊಂದುಬಾರಿ ಕಣ್ಣುಗಳನ್ನು ಮುಚ್ಚಿ
ಕೊಂಡನು. ದೇವತಾಸ್ವರೂಪಿಣಿಯಾದ ಒಬ್ಬ ಕನ್ಯಯು ಕಾಣಿಸಿದಳು.
ನಂದಕುಮಾರನು ಅವಳನ್ನು ಕರೆದನು. ಅವಳು ಮಾತನಾಡಲಿಲ್ಲ. ಧನ
ದಾಸೆಯನ್ನು ತೋರಿಸಿದನು. ತನ್ನಲ್ಲಿ ದಯೆಯಿಡಲೆಂದು ಎಷ್ಟೋ ಸಾಹಸ
ಗಳನ್ನು ಮಾಡಿದನು. ಎಲ್ಲಾ ವಿಫಲವಾಯಿತು. ಅವಳು ಎಲ್ಲಿಗೋ ಹೊರ
ಟುಹೋದಳು. ನಂದಕುಮಾರನು ಕಣ್ತೆರೆದನು. ಏನೂ ಇರ
ಲಿಲ್ಲ. ಕಾಲ್ಮಣೆಯ ಮೇಲಿದ್ದ ಸೀಷೆಯನ್ನು ತೆಗೆದು ನೋಡಿದನು. ಅದರ
ಲ್ಲಿಯೂ ಏನೂ ಇರಲಿಲ್ಲ. ಇದಿರಾಗಿದ್ದ ಭೃತ್ಯನನ್ನು ಕರೆದು ಮತ್ತೊಂದು
ಸೀಷೆಯ ಮದ್ಯವನ್ನು ತಾರೆಂದು ಹೇಳಿದನು. ಭತ್ಯನು ಒಡನೆಯೇ
ಒಳಕ್ಕೆ ಹೋಗಿ ಒಂದು ಸೀಷೆಯನ್ನೂ ಒಂದು ಕಾಗದವನ್ನೂ ತಂದು
ನಂದಕುಮಾರನಿಗೆ ಕೊಟ್ಟನು.
ನಂದಕುಮಾರ :- ಈಕಾಗದವೇನು ?
ಭೃತ್ಯ :- ತಾವು ನಮ್ಮ ಯಜಮಾನನಿಗೆ ಕೊಡಬೇಕಾಗುವ
ಹಣದ ಲೆಕ್ಕ.
ನಂದಕುಮಾರ :- ಎಷ್ಟು ಕೊಡಬೇಕೋ ಓದಿಹೇಳು.