ಪುಟ:ಸಂತಾಪಕ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೩೧


ದಿಲ್ಲವೆಂದು ತನ್ನ ದೀರ್ಘವಾದ ಲಾಂಗೂಲದಿಂದ ಅವರನ್ನು ನಿವಾರಿಸಿಬಿಡು
ವನು. ಮತ್ತೊಂದುಬಾರಿ ಆಲೋಚಿಸಿ ನೋಡುವೆನೆಂದು ತಲೆಯನ್ನು ಕುಣಿ
ಸುವನು. ಈ ಸಭೆಗೆ ಸ್ವಲ್ಪ ದೂರದಲ್ಲಿ ಒಂದೆರಡು ನಾಯಿಗಳು ಆಹಾರಾ
ಭಾವದಿಂದ ಗಾಂಭೀರ್ಯವನ್ನು ಹೊಂದಿ ಮಲಗಿದ್ದುವು. ನಿದ್ರಾಂಗನೆಯಿಂದ
ಮುಗ್ಧನಾದ ಒಬ್ಬ ಯಾಮಿಕನು ಮೆಲ್ಲನೆ ಬರುತ್ತಿರುವಾಗ ಅವನ ಕೈಯ
ಲ್ಲಿದ್ದ ದಂಡವು ಜಾರಿ ಕೆಳಕ್ಕೆ ಬಿದ್ದುಹೋಯಿತು. ಗಾಂಭೀರ್ಯವನ್ನು
ತಾಳಿದ್ದ ನಾಯಿಗಳು ಈ ಶಬ್ದವನ್ನು ಕೇಳಿ ಕೋಪದಿಂದ ಗರ್ಜಿಸತೊಡಗಿ
ದುವು. ಇದನ್ನು ತಿಳಿದು ಮತ್ತೊಂದು ಬೀದಿಯಲ್ಲಿದ್ದ ನಾಯಿಗಳೂ ಗರ್ಜಿ
ಸುತ್ತ ಓಡಿ ಬಂದುವು. ಯಾಮಿಕನು ಅವುಗಳನ್ನು ನಿವಾರಿಸಿ ನಿದ್ರಾಂಗನೆಯ
ಸೌಖ್ಯದಿಂದ ತನ್ನನ್ನು ವಿರಹಿತನನ್ನಾಗಿ ಮಾಡಿದುದಕ್ಕೋಸುಗ ಅವುಗಳನ್ನು
ಬಯ್ಯುತ್ತ ಮುಂದೆ ಬಂದನು. ಈ ಕೋಲಾಹಲದಿಂದ ವೃಷಭರಾಜನಿಗೆ
ಬೇಸರವುಂಟಾಗಿ ಸಭೆಯು ಭಗ್ನವಾಯಿತು. ಯಾಮಿಕನು ಕಾಲೆಳೆದುಹಾಕಿ
ಕೊಂಡು ಮತ್ತೊಂದು ಬೀದಿಗೆ ಹೊರಟುಹೋದನು. ಈ ಬೀದಿಯ ಉತ್ತರ
ಪಾರ್ಶ್ವದಲ್ಲಿ ಸುವರ್ಣಕಲಶಗಳಿ೦ದ ಕಣ್ಗೊಳಿಸುವ ಗಗನಚುಂಬಿಯಾದ
ಒಂದು ಸೌಧವಿದ್ದಿತು. ಅದರ ಸುತ್ತಲೂ ದೊಡ್ಡದಾದ ಉಪವನ. ಅಲ್ಲಲ್ಲಿ
ಪರಿಮಳಯುಕ್ತವಾದ ಹೂಗಿಡಗಳು. ಸೌಧದ ಉಭಯಪಾರ್ಶ್ವಗಳಲ್ಲಿಯೂ
ದೊಡ್ಡದಾದ ಗವಾಕ್ಷಗಳು. ಸೌಧದ ಒಳಭಾಗದಲ್ಲಿಟ್ಟಿದ್ದ ದೀಪದ ಬೆಳಕು
ಗವಾಕ್ಷಗಳ ಮೂಲಕ ಉಪವನದ ಗಿಡಗಳಮೇಲೆ ಬಿದ್ದು ಅವುಗಳ ಕಾ೦ತಿ
ಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಿತು. ಮನೆಯನ್ನು ನೋಡಿದರೆ ಒಬ್ಬ
ದೊಡ್ಡ ಅಧಿಕಾರಿಯ ಮನೆಯೆಂದು ತೋರುವುದು. ದ್ವಾರಪಾಲಕರೆಲ್ಲರೂ
ನಿದ್ರಾಂಗನೆಗೆ ಮೈಗೊಟ್ಟಿದ್ದರು. ಆಕಸ್ಮಿಕವಾಗಿ ಒಳಗಿದ್ದ ದೀಪಗಳೆಲ್ಲವೂ
ಆರಿಹೋದುವು. ಒಂದೆರಡು ನಿಮಿಷಗಳೊಳಗಾಗಿ ಆ ಸೌಧದ ಪಶ್ಚಿಮ
ಪಾರ್ಶ್ವದ ಗವಾಕ್ಷದಿಂದ ಬೆಂಕಿಯ ಕಿಡಿಗಳುದುರುವುದಕ್ಕೆ ಮೊದಲಾಯಿತು.
ಎರಡನೆಯ ಗವಾಕ್ಷದಲ್ಲಿಯೂ ಉಪಕ್ರಮವಾಯಿತು. ಮನೆಯೊಳಗೆ ಮಲ
ಗಿದ್ದವರೆಲ್ಲರೂ ಒಟ್ಟಾಗಿ ಅರಿಚಿಕೊಂಡರು. ಬಾಗಿಲಲ್ಲಿ ಮಲಗಿದ್ದ
ಸೇವಕರಿಗೆ ಎಚ್ಚರವಾಯಿತು. ಮನೆಯ ನಾಲ್ಕು ದಿಕ್ಕುಗಳಲ್ಲಿಯೂ ಉರಿ
ಯೆದ್ದಿತು. ಸೇವಕರು ಒಳಕ್ಕೆ ಹೋಗುವುದಕ್ಕೆ ಅವಕಾಶವಿಲ್ಲ. ಎಲ್ಲರೂ