ಗೋಳಾಡತೊಡಗಿದರು. ಯಜ್ಞೇಶ್ವರನು ಕ್ರಮವಾಗಿ ಮನೆಯನ್ನೆಲ್ಲ
ಆಕ್ರಮಿಸಿ ತನ್ನ ಅಪ್ರತಿಹತವಾದ ಯವ್ವನವನ್ನು ಪ್ರಕಾಶಗೊಳಿಸುತ್ತಿದ್ದನು.
ಐದು ನಿಮಿಷಗಳೊಳಗಾಗಿ ಮನೆಯಲ್ಲೆಲ್ಲ ಉರಿಯೆದ್ದಿತು. ಬಾಗಿಲಲ್ಲಿ -
ಮಲಗಿದ್ದ ಒಬ್ಬಿಬ್ಬರು ಸೇವಕರು ವಿನಾ ಮನೆಯೊಳಗಿದ್ದವರನ್ನು ಬದುಕಿಸ
ಬೇಕೆಂದು ಪ್ರಯತ್ನ ಪಟ್ಟವರೆಲ್ಲರೂ ಅಗ್ನಿದೇವನಿಗೆ ಆಹುತಿಯಾಗಿ
ಹೋದರು. ಈ ಕೋಲಾಹಲವನ್ನು ಕೇಳಿ ನಮ್ಮ ನಿದ್ರಾಲಸನಾದ
ಯಾಮಿಕನೂ ಅಲ್ಲಿಗೆ ಬಂದನು. ಯಾರೂ ಮನೆಯೊಳಗಿದ್ದವರನ್ನು
ಬದುಕಿಸಲಾರದೆ ಹೋದರು. ಯಾಮಿಕನು ಜಾಗ್ರತೆಯಾಗಿ ಹೋಗಿ ತಮ್ಮ
ಅಧಿಪತಿಯನ್ನು ಕರೆತಂದನು. ಪಟ್ಟಣದ ಮುಖ್ಯಾಧಿಕಾರಿಗಳೆಲ್ಲರೂ
ಬಂದರು. ಎಲ್ಲರೂ ಸೇರುವುದರೊಳಗಾಗಿ ಮನೆಯು ಕುಸಿದು ಬಿದ್ದಿತು.
ಮನೆಯ ಅಧಿಕಾರಿಯ ಹೆಸರು ಪಲ್ಲವಕ. ಪಲ್ಲವಕನು ವಿಮಲನಗರದ
ಮುಖ್ಯ ಮಂತ್ರಿಯಾಗಿದ್ದನು. ಇವನಿಗೆ ತಾರಾಮಾಲಿನಿಯೆಂಬ ಹೆಂಡ
ತಿಯೂ ನಿರುಪಮಕುಮಾರಿಯೆಂಬ ಒಬ್ಬ ಮಗಳೂ ಇದ್ದರು. ಈದಿನ ಆ
ಮೂವರೂ ಪರಿವಾರಸಹಿತರಾಗಿ ಅಗ್ನಿದೇವನಿಗೆ ಆಹುತಿಯಾದರು. ಈ ವಿಷ
ಯವು ರಾಜನಾದ ವಿಕ್ರಮಸಿಂಹನಿಗೆ ತಿಳಿಯಿತು. ವಿಕ್ರಮಸಿಂಹನು ಪಾದ
ಚಾರಿಯಾಗಿ ಅಲ್ಲಿಗೆ ತಾನೇ ಬಂದನು. ಮನೆಗೆ ಕಿಚ್ಚು ಹೇಗೆ ತಗಲಿತೆ೦
ಬುದು ಗೊತ್ತಾಗಲಿಲ್ಲ. ಗುಣಶಾಲಿಯಾಗಿಯೂ ಧರ್ಮಾತ್ಮನಾಗಿಯೂ
ಇದ್ದ ಪಲ್ಲವಕನ ಮರಣಕ್ಕೋಸ್ಕರ ಎಲ್ಲರೂ ದುಃಖಿಸಲಾರಂಭಿಸಿದರು.
ಯಾಮಿಕಾಧಿಪತಿಯಾದ ಭುಜಂಗಶೇಖರನು ಮನೆಗೆ ಕಿಚ್ಚುಬಿದ್ದ ವಿಚಾರ
ದಲ್ಲಿ ಯಾರೋ ದ್ರೋಹಿಗಳು ಮನಃಪೂರ್ವಕವಾಗಿ ಈ ಅನಾಹುತವನ್ನು
ನಡೆಯಿಸಿರುವರೆಂದು ವಾದಿಸಿದನು. ದ್ರೋಹಿಗಳಾರೆಂಬುದು ಮಾತ್ರ
ತಿಳಿಯಲಿಲ್ಲ. ಅವರಿಗಾದ ಫಲವೂ ಗೊತ್ತಾಗಲಿಲ್ಲ. ದ್ರೋಹಿಗಳನ್ನು
ಹುಡುಕಿ ಹಿಡಿದು ತರುವಂತೆ ಯಾಮಿಕರಿಗಾಜ್ಞೆಯಾಯಿತು. ವಿಕ್ರಮಸಿಂಹ
ಮಹಾರಾಜನು ಪ್ರಾಸಾದಾಭಿಮುಖನಾಗಿ ಹೊರಟುಹೋದನು. ಅನಂತರ
ಎಲ್ಲರೂ ಒಬ್ಬೊಬ್ಬರಾಗಿ ತಂತಮ್ಮ ನಿವಾಸಗಳಿಗೆ ಹಿಂತಿರುಗಿ ಹೋದರು.
ಪುಟ:ಸಂತಾಪಕ.djvu/೩೮
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೩೨
ಕರ್ಣಾಟಕ ಚಂದ್ರಿಕೆ.