ಪುಟ:ಸಂತಾಪಕ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂತಾಪಕ.

೩೩


ಒಂಭತ್ತನೆಯ ಪರಿಚ್ಛೇದ.

ವಿಮಲನಗರದಲ್ಲಿ ಪಲ್ಲವಕನ ಮನೆಯು ಹತ್ತಿ ಉರಿದುಹೋದ
ನಾಲ್ಕೈದು ದಿನಗಳಾದಬಳಿಕ ಒಂದಾನೊಂದು ಸಾಯಂಕಾಲ ಕಿಂಶುಕಾಟ
ವಿಯ ಸರೋವರದ ಬಳಿಯಲ್ಲಿ ಇಬ್ಬರು ವೃದ್ಧರು ಕುಳಿತು ಮಾತನಾಡು
ತ್ತಿದ್ದರು. ಅವರಲ್ಲಿ ಒಬ್ಬನು ಕಾವಿಯಬಟ್ಟೆಯನ್ನು ಧರಿಸಿ, ಕೈಯಲ್ಲಿ
ದೊಡ್ಡದಾದ ಒಂದು ದಂಡವನ್ನಿಟ್ಟುಕೊಂಡಿದ್ದನು. ಮತ್ತೊಬ್ಬನು ಸಾಧಾ
ರಣವಾದ ಬಿಳಿಯ ಉಡುಪನ್ನು ಹಾಕಿಕೊಂಡು ಒಂದು ಖಡ್ಗವನ್ನು ಧರಿಸಿ
ದ್ದನು. ಇಬ್ಬರೂ ಬಲುಹೊತ್ತು ಮಾತನಾಡುತ್ತೆ ಕುಳಿತಿದ್ದರು. ಅವರು
ಯಾವ ವಿಚಾರವನ್ನು ಕುರಿತು ಮಾತನಾಡುತ್ತಿದ್ದರೆಂಬುದು ಮಾತ್ರ
ತಿಳಿಯಲಿಲ್ಲ. ಕ್ರಮವಾಗಿ ರಾತ್ರಿಯಲ್ಲಿ ಅರ್ಧ ಭಾಗವು ಕಳೆದುಹೋ
ಯಿತು. ಆದರೂ ಅವರ ಮಾತುಗಳು ಕೊನೆಗಾಣಲಿಲ್ಲ. ಅವರು ಕುಳಿತಿದ್ದ
ಪ್ರದೇಶಕ್ಕೆ ದಕ್ಷಿಣಭಾಗದಲ್ಲಿ ಒಂದು ಕುಟೀರವಿದ್ದಿತು. ಅಲ್ಲಿ ಯಾರೋ
ನರಲುತ್ತಿದ್ದಂತೆ ಶಬ್ದವು ಕೇಳಿಬರುತ್ತಿದ್ದಿತು. ಖಡ್ಗಪಾಣಿಯಾಗಿದ್ದ
ಯುವಕನು ತನ್ನ ಸಂಗಡಿಗನೊಡನೆ ಎದ್ದು ಆ ಕುಟೀರದ ಬಳಿಗೆ ಹೋಗಿ
ಬಾಗಿಲನ್ನು ತೆರೆದನು. ಅಲ್ಲಿ ಹಗ್ಗದಿಂದ ಬಂಧಿತಳಾಗಿದ್ದ ಒಬ್ಬ ಸುಂದ
ರಿಯು ಕೈಕಾಲುಗಳನ್ನಲುಗಾಡಿಸುವುದಕ್ಕೂ ಅವಕಾಶವಿಲ್ಲದೆ ನಿಟ್ಟುಸಿರನ್ನು
ಬಿಡುತ್ತೆ ಅರ್ಧನಿಮೀಲಿತನಯನೆಯಾಗಿ ಬಿದ್ದಿದ್ದಳು. ಖಡ್ಗಪಾಣಿಯಾದ
ಯುವಕನು ಅವಳ ಸಮೀಪಕ್ಕೆ ಹೋಗಿ ತನ್ನ ಖಡ್ಗದಿಂದ ಅವಳ ಪಾಶ
ವನ್ನು ಬಿಡಿಸಿದನು. ತರುಣಿಯು ಎದ್ದು ಕುಳಿತು ನಾಲ್ಕು ದಿಕ್ಕುಗಳನ್ನೂ
ನೋಡಿದಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ಅಶ್ರುವರ್ಷಣವು
ಮೊದಲಾಯಿತು. ಮತ್ತೆ ಕಣ್ಣುಗಳನ್ನು ಮುಚ್ಚಿದಳು. ಖಡ್ಗಪಾಣಿಯಾದ
ಯುವಕನು " ಎಲೆ ಹುಡುಗಿ ! ಭಯಪಡಬೇಡ. ನಾನು ನಿನ್ನನ್ನು
ಮದುವೆಯಾಗಬೇಕೆಂಬ ಅಭಿಪ್ರಾಯದಿಂದ ತಂದಿರುವೆನಲ್ಲದೆ ಕೊಲ್ಲಬೇ
ಕೆಂದು ತಂದವನಲ್ಲ. ದೇವತಾಸುಲಭವಾದ ನಿನ್ನ ಸೌಂದರ್ಯದಿಂದ
ನಾನು ಮುಗ್ಧನಾಗಿರುವೆನು. ನೀನು ನನ್ನಲ್ಲಿ ದಯೆಯಿಟ್ಟು ಅರ್ಧಾಂಗಿ
ಯಾಗು " ಎಂದು ಹೇಳಿದನು. ಮುಮೂರ್ಷಾವಸ್ಥೆಯಲ್ಲಿದ್ದ ತರುಣಿಯ

3