ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ೦ತಾಪಕ.
೪೧

ದೀತೆ ? ತಾಯ್ತಂದೆಗಳೊಡನೆ ಮತ್ತೆ ಮಾತನಾಡುವುದು ಸಾಧ್ಯ
ವೇ ? ಇಲ್ಲ. ಸಂತಾಪಕನು ಅವರನ್ನೆಲ್ಲ ಕೊಂದುಹಾಕಿರುವನು.
ಅವರು ಸತ್ತುಹೋದರು. ಆದರೆ ಸತ್ತವರೇನಾಗುವರು ? ನಕ್ಷತ್ರವಾಗು
ವರೆಂದು ಕೇಳಿರುವೆನು. ಈಗ ನಾನೂ ಸತ್ತರೆ ಅವರೊಡನೆ ನಕ್ಷತ್ರವಾಗಿ
ನಿರಂತರವೂ ವಾಸಮಾಡಬಹುದು. ಆದ್ದರಿಂದ ಈಗಲೇ ನಾನು ಪ್ರಾಣ
ಬಿಡುವೆನು, ಎಂದು ನೀರಿನಲ್ಲಿ ಒಂದು ಹಂತವನ್ನಿಳಿದಳು. ಅಶ್ರುವರ್ಷಣ
ದಿಂದ ಅವಳ ಸೀರೆಯ ಸೆರಗೆಲ್ಲವೂ ತೋಯ್ದು ಹೋಗಿದ್ದಿತು. ಕಣ್ಣು
ಗಳಿ೦ದ ವಾರಿಧಾರೆಯು ನಿರರ್ಗಳವಾಗಿ ಇನ್ನೂ ಸುರಿಯುತ್ತಲಿದಿತು.
ಇವಳಾ ದುಃಖವನ್ನು ಕಂಡು ಸೈರಿಸಲಾರದೆ ದಿನಮಣಿಯು ಪಶ್ಚಿಮಾಂಬುಧಿ
ಯಲ್ಲಿ ಮುಳುಗಿಹೋದನು. ಅಂಧಕಾರದ ಬೀಜಗಳ೦ತೆ ಭ್ರಮರಗಳು
ಹಾರತೊಡಗಿದುವು. ನಿರುಪಮಕುಮಾರಿಯು ಇನ್ನು ಸಾವಕಾಶ ಮಾಡ
ಲಾಗದೆಂದು ನಿಶ್ಚಯಿಸಿ ಮತ್ತೊಂದು ಹಂತವನ್ನಿಳಿದಳು. ಆಗ ಹಠಾತ್ತಾಗಿ
ಒಬ್ಬ ಯುವಕನು ಹಿಂದಣಿಂದ ಬಂದು ಅವಳ ಕೈಯನ್ನು ಹಿಡಿದುಕೊಂಡನು.
ಪಾಠಕಮಹಾಶಯ ! ಇವನೇ ನಮ್ಮ ಪೂರ್ವಪರಿಚಿತನಾದ ವಿಜಯ
ವರ್ಮನು; ಇವನು ಇಲ್ಲಿಗೆ ಬ೦ದುದನ್ನೂ ಇವನ ಉದ್ದೇಶವನ್ನೂ
ತಿಳಿಸುವೆವು. ಆದಿನ ನಂದಕುಮಾರನು ಮದ್ಯಪಾನಾಕಾಂಕ್ಷೆಯಿಂದ ಅಲ್ಲಲ್ಲಿ
ತಿರುಗಿ ಹಣ ದೊರೆಯದೆ ಕಮಲಕುಮಾರಿಯ ಕಿರುಮನೆಯಬಳಿಗೆ ಹೋಗಿ
ಸಮಯವನ್ನು ನಿರೀಕ್ಷಿಸುತ್ತಿದ್ದಾಗ ವಿಜಯವರ್ಮನು ಇವನ ಲಕ್ಷಣವನ್ನು
ಕಂಡು ಪರೀಕ್ಷಿಸಬೇಕೆಂದು ಮರೆಯಾಗಿದ್ದನು. ನಂದಕುಮಾರನು ಕಿರು
ಮನೆಯನ್ನು ಬಿಟ್ಟು ಉದ್ಯಾನವನದ ಮಾರ್ಗವಾಗಿ ಅಂಗಡಿ ಬೀದಿಯನ್ನು
ಸೇರಿದಾಗ ಇವನೂ ಅವನಿಗೆ ತಿಳಿಯದಂತೆ ಹಿಂದೆ ಹೋಗಿ ಆ ಅಂಗಡಿಯ
ಬಳಿಯಲ್ಲಿ ಕುಳಿತಿದ್ದನು. ಅವನು ಮದ್ಯಪಾನಮಾಡಿ ಅಂಗಡಿಯಿಂದ ಹೊರ
ಡಲು ಆ ಅ೦ಧಕಾರದಲ್ಲಿ ಇವನೂ ಅವನ ಹಿಂದೆ ಸರೋವರದಬಳಿಗೆ
ಹೋಗಿ ಅವನಲ್ಲಿದ್ದ ಕೆಲವು ಕಾಗದಪತ್ರಗಳನ್ನು ಮರುಳುಮಾಡಿ ತೆಗೆದು
ಕೊಂಡನು. ಆ ಕಾಗದಗಳಿಂದಲೇ ಸಂತಾಪಕನ ಕೆಲ ರಹಸ್ಯಗಳೂ
ನಿರುಪಮಕುಮಾರಿಯ ವಿಷಯವೂ ಇವನಿಗೆ ತಿಳಿಯಲು ಈ ಕಿಂಶುಕಾಟ
ವಿಗೆ ಬಂದನು. ಇಲ್ಲಿ ಹುಡುಕಿದಾಗ ನಿರುಪಮಕುಮಾರಿಯಾಗಲಿ, ಭುಜಂ