ದಲ್ಲಿ ಕೆಲವು ಹಣ್ಣುಗಳನ್ನು ತಂದು ಅವಳ ಬಳಿಯಲ್ಲಿಟ್ಟು ಎಲ್ಲಿಗೋ
ಹೊರಟುಹೋದನು. ನಿರುಪಮಕುಮಾರಿಯು ಸ್ವಲ್ಪಕಾಲ ಅನ್ಯ ಮನಸ್ಕ
ಳಾಗಿ ಕುಳಿತಿದ್ದು ಬಳಿಕ ತಲೆಯೆತ್ತಿ ನೋಡಿದಳು. ಅಲ್ಲಿ ಯಾರೂ ಇರ
ಲಿಲ್ಲ. ಬಳಿಕ ಮೆಲ್ಲನೆದ್ದು ಬಾಗಿಲಬಳಿಗೆ ಬಂದಳು. ಅಲ್ಲಿಯೂ ಯಾರೂ ಇರ
ಲಿಲ್ಲ. ಅವಳ ಮನಸ್ಸಿಗೆ ಸ್ವಲ್ಪಧೈರ್ಯವುಂಟಾಯಿತು. ಉತ್ತರಕ್ಷಣದಲ್ಲಿ
ಯೇ ಬಗೆಬಗೆಯ ಆಲೋಚನೆಗಳು ಹುಟ್ಟಿದವು. ಇನ್ನು ಸ್ವಲ್ಪಕಾಲದೊಳ
ಗಾಗಿ ತನ್ನ ವಿಷಯದಲ್ಲಿ ಅತ್ಯಾಚಾರವು ನಡೆಯಬಹುದೆಂಬ ಶಂಕೆಯುಂಟಾ
ಯಿತು. " ಅದರಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ? ಮಾನಿನಿಗೆ ಮಾನಭಂಗ
ವಾದ ಮೇಲೆ ಬದುಕಿ ಫಲವೇನು ? ಈ ಅರಣ್ಯದಲ್ಲಿ__ಯುಕ್ತಾಯುಕ್ತ
ವಿವೇಕಜ್ಞಾನವಿಲ್ಲದ ಈ ದುಷ್ಟರ ಬಳಿಯಲ್ಲಿ ಅಬಲೆಗೆ ಮಾನವಿತ್ತು ಕಾಪಾ
ಡುವರಾರು ? ಈ ಅಪಾಯದಿಂದ ತಪ್ಪಿಸಿಕೊಳ್ಳುವ ಸಂಭವವಿಲ್ಲ. ಆದುದ
ರಿಂದ ಆ ದುಷ್ಟರು ತಿರುಗಿಬರುವುದರೊಳಗಾಗಿ ಪ್ರಾಣವನ್ನು ಕಳೆದುಕೊಳ್ಳ
ಬೇಕು. ಅದಕ್ಕೆ ಉಪಾಯವೇನು ? ಆಯುಧವಾವುದೂ ಇಲ್ಲ. ಈಗೇನು
ಮಾಡಬೇಕು ? " ಎಂದು ಚಿಂತಿಸುತ್ತೆ ಕುಟೀರದಿಂದ ನಾಲ್ಕಾರು ಹೆಜ್ಜೆ
ಮುಂದೆ ಹೋದಳು. ಇದಿರಾಗಿದ್ದ ತಮಾಲವೃಕ್ಷಗಳ ನಡುವೆ ಒಂದು
ಗಾರೆಯಗೋಡೆ ಕಾಣಿಸಿತು. ಅದರ ಬಳಿಗೆ ಹೋಗಿ ನೋಡಲು ಅದೊಂದು
ಸರೋವರಕ್ಕೆ ಇಳಿದುಹೋಗುವ ಹಂತವಾಗಿದ್ದಿತು. ನಿರುಪಮಕುಮಾ
ರಿಯು ಮೆಲ್ಲನೆ ಹಂತವನ್ನಿಳಿದು ಹೋಗಿ ನೀರಿನಲ್ಲಿ ಕಾಲಿಟ್ಟುಕೊಂಡು
ಹಂತದಮೇಲೆ ಕುಳಿತಳು. ಏಳೆಂಟು ದಿನಗಳಿಂದ ನಿದ್ರಾಹಾರಗಳಿಲ್ಲದೆ
ಮನಸ್ಥ್ಯೆರ್ಯವಿಲ್ಲದೆ ಸಂಕಟಪಡುತ್ತಿದ್ದುದರಿಂದ ಅವಳಿಗೆ ಆ ತಿಳಿನೀರನ್ನು
ಕಂಡೊಡನೆಯೇ ಪಾನಮಾಡಬೇಕೆಂಬ ಆಸೆಯುಂಟಾಯಿತು. ಉತ್ತರ
ಕ್ಷಣದಲ್ಲಿಯೇ ನೀರನ್ನೇಕೆ ಕುಡಿಯಬೇಕು ? ಪ್ರಾಣತ್ಯಾಗ ಮಾಡಬೇ
ಕೆಂದು ಬಂದವಳು ಹಸಿವು ಬಾಯಾರಿಕೆಗಳನ್ನು ಸೈರಿಸಲಾರೆನೇ ?
ಎಂದು ತನ್ನ ಆಸೆಯನ್ನು ಸಂವರಣ ಮಾಡಿಕೊಂಡಳು. ವಿಮಲನಗರ
ದಲ್ಲಿ ತಮ್ಮ ಮನೆಯ ಹಿಂದುಗಡೆಯಲ್ಲಿದ್ದ ಸರೋವರದಲ್ಲಿ ತಾರಾಮಾಲಿನಿ
ಯೊಡನೆ ತಾನು ಗಂಗೆಯ ಪೂಜೆಯನ್ನು ಮಾಡುತ್ತಿದ್ದುದು ಸ್ಮರಣೆಗೆ
ಬಂದಿತು. ಈಗ ಆ ಸರೋವರವನ್ನು ಮತ್ತೆ ನೋಡುವುದಕ್ಕಾ