ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.
೪೭

ಅವನನ್ನು ಉಪಚರಿಸಿ ಇಲ್ಲಿಗೆ ಕರೆದುಕೊಂಡು ಬಂದಿರುವೆನು. ಈದಿನ
ನೀನು ಇಲ್ಲಿದ್ದರೆ, ಅವನೂ ಸ್ವಲ್ಪಚೇತರಿಸಿಕೊಂಡು ಪ್ರಯಾಣಮಾಡುವನು.
ವಿನಯ :- ನನಗೆ ಅಷ್ಟು ಅವಕಾಶವಿಲ್ಲ. ಈಗಲೇ ಹೊರಡಬೇಕು
ಎಂದು ಹೇಳುತ್ತೆ, ಕುದುರೆಯನ್ನೋಡಿಸಿಕೊಂಡು ಹೊರಟು
ಹೋದನು. ಕಳಾಮಾಲಿನಿಯು ಅಲ್ಲಿಂದ ತನ್ನ ಕುಟೀರಕ್ಕೆ ಬಂದಳು.
ಕುಟೀರದ ಮುಂದೆ ಒಂದು ದೊಡ್ಡ ಬೂರಗದ ಮರವಿದ್ದಿತು. ಅದರಬಳಿ
ಯಲ್ಲಿ ಮೂರುನಾಲ್ಕು ಮಂದಿ ಬಾಲಕರು ಸ್ಟೇಚ್ಛೆಯಾಗಿ ಆಡುತ್ತಿದ್ದರು.
ಕಳಾಮಾಲಿನಿಯನ್ನು ಕಂಡೊಡನೆಯೇ ಅವರು ಭೀತರಾಗಿ ದೇವೀಸಹಸ್ರ
ನಾಮ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು " ಅಂತರ್ಮುಖಸಮಾ
ರಾಧ್ಯಾ ಬಹಿರ್ಮುಖಸುದುರ್ಲಭಾ " ಎಂದು ಹಾಡತೊಡಗಿದರು. ಕಳಾ
ಮಾಲಿನಿಯು ಕುಟೀರವನ್ನು ಪ್ರವೇಶಿಸಿದಳು. ಒಳಗೆ ಒಬ್ಬ ಯುವಕನು
ಮಲಗಿದ್ದನು. ಕಳಾಮಾಲಿನಿಯು " ವಿಜಯಾ ! ಈಗ ಹೇಗಿರುವೆ ? " ಎಂದು
ಕೇಳಿದಳು. ಯುವಕನು " ಅಮ್ಮಾ ! ಕತ್ತಿನಬಳಿಯಲ್ಲಿ ಸ್ವಲ್ಪ ನೋವಿರು
ವುದು, ಅಷ್ಟೇ ಅಲ್ಲದೆ ಮತ್ತೇನೂ ಇಲ್ಲ " ಎಂದನು. ಕಳಾಮಾಲಿನಿಯು
ತಾವರೆಯೆಲೆಯ ದೊನ್ನೆಯಲ್ಲಿಟ್ಟಿದ್ದ ಆವುದೋ ಒ೦ದು ರಸವನ್ನು ಆ
ಯುವಕನ ಕತ್ತಿನಮೇಲೆ ಸವರಿ ಉಜ್ಜುವುದಕ್ಕಾರಂಭಿಸಿದಳು. ಯುವಕನು
" ಅಮ್ಮಾ ! ನಾನು ಹೇಗಾದರೂ ಮಾಡಿ ನಾಳೆಯದಿನವೇ ಪ್ರಸನ್ನನಗರಕ್ಕೆ
ಹೋಗಬೇಕು. ಇಲ್ಲದಿದ್ದರೆ ನನ್ನ ಅನೇಕ ಪ್ರಯತ್ನಗಳು ವ್ಯರ್ಥ
ವಾಗುವುವು " ಎಂದನು. ಕಳಾಮಾಲಿನಿಯು " ವಿಜಯ ! ಹಾಗೆಯೇ
ಮಾಡು. ಈಗ ಸ್ವಲ್ಪ ವಿಶ್ರಮಿಸಿಕೊ " ಎಂದಳು. ಯುವಕನು ಏನನ್ನೋ
ಆಲೋಚಿಸುತ್ತೆ ಮಲಗಿದ್ದನು. ಕಳಾಮಾಲಿನಿಯು ಹಾಲನ್ನು ಕಾಯಿಸಿ
ತೆಗೆದುಕೊಂಡು ಬರುವೆನೆಂದು ಹೇಳಿ ಹೊರಟುಹೋದಳು. ಯುವಕನಿಗೆ
ಬಾಧೆಯು ಸ್ವಲ್ಪ ಕಡಮೆಯಾಗಿದ್ದುದರಿಂದ ಹಾಗೆಯೇ ನಿದ್ರೆಹಿಡಿಯಿತು.