ಕಾಂತಿಹೀನವಾಯಿತು. ಪಾಟಲಿಕೆಯು ದೀಪವನ್ನು ಮತ್ತೆ ಪ್ರಜ್ವಲಿಸು
ವಂತೆ ಮಾಡಿ ಕುಮಾರಿಯ ಮುಖವನ್ನು ನೋಡಿದಳು. ಕುಮಾರಿಯ
ಕಣ್ಣುಗಳಲ್ಲಿ ನೀರೇ ಇಲ್ಲ. ಅವಳ ಮುಖವು ಸಂತೋಷಯುಕ್ತವಾಗಿದ್ದಂತೆ
ತೋರಿತು. ಪಾಟಲಿಕೆಗೆ ಬಹುಸಂತೋಷವಾಯಿತು. ಕುಮಾರಿಯು
ಇನ್ನು ಬದುಕಿಕೊಂಡಳೆಂದು ಭಾವಿಸಿದಳು. ಉತ್ತರಕ್ಷಣದಲ್ಲಿಯೇ
ಕುಮಾರಿಯ ಕಣ್ಣುಗಳು ವಿವರ್ಣವಾಗಿ ಹೋದುವು. ಅವಳ ಬಾಯಿಂದ
ಅಸ್ಪುಟವಾದ ಹಲವು ಮಾತುಗಳು ಹೊರಡುತ್ತಿದ್ದವು. ಸ್ವರವು
ತಗ್ಗಿಹೋಯಿತು. ಹಾಗೆಯೇ ನೋಡುತ್ತಿರಲು " ಸಂ - ತಾ - ಪ.
ಸಂತಾ. ಸಂ. " ಎಂದು ಅತಿಕಷ್ಟದಿಂದ ಉಚ್ಚರಿಸುತ್ತೆ ಸುಮ್ಮನಾದಳು.
ಇಂದಿಗೆ ಅವಳ ಮಾನವಜನ್ಮ ಲೀಲೆಯು ಪೂರ್ತಿಯಾಗಿ ಹೋಯಿತು.
ಆಃ, ಕುಮಾರಿ ! ನೀನೇ ಧನ್ಯೆ. ನೀನು ವರಿಸಿದ ಪತಿಯು ದುಷ್ಟನಾಗಿದ್ದರೂ
ಅವನ ಗುಣಗಳನ್ನು ಲಕ್ಷಿಸದೆ, ಸಾಧ್ಯವಾದಷ್ಟು ಬುದ್ದಿವಾದವನ್ನು ಅವನಿಗೆ
ಹೇಳಿ ನಿನ್ನ ಕರ್ತವ್ಯವನ್ನು ನೀನು ನೆರವೇರಿಸಿದೆ ! ಕಮಲೇ ! ನೀನೇ ಧನ್ಯೆ.
ಪತಿಯು ದುಷ್ಟನಾಗಲಿ, ಸಾಧುವಾಗಲಿ ಅವನ ಚರಣ ದರ್ಶನವನ್ನು
ಮಾಡಿ ಅವನ ಕರದಿಂದ ಜಲಪಾನ ಮಾಡಿ ನಿನ್ನ ಜನ್ಮವನ್ನು ಸಾರ್ಥಕ
ಪಡಿಸಿಕೊಂಡೆ. ಕಮಲೆ ! ನಿನ್ನ ಧರ್ಮವನ್ನು ನೀನು ಸಾಧಿಸಿದೆ. ನಿನ್ನಂತಹ
ಧನೆಯರಾದ ಸ್ತ್ರೀಯರು ಇನ್ನು ಹುಟ್ಟುವರೇ ? ಹಾಗೆ ಹುಟ್ಟಿದರೂ ನಿನ್ನ
ಗುಣಗಳೆಲ್ಲಾ ಅವರಲ್ಲಿರುವುದೇ ? ಆಃ ಕಮಲೆ ! ಇನ್ನೊಂದುಬಾರಿ ನೀನೇ
ಈ ಲೋಕದಲ್ಲಿ ಜನ್ಮಿಸು. ನಮ್ಮ ರಮಣೀಪಾಠಕರು ನಿನ್ನನ್ನು ಬಹಳವಾಗಿ
ಪ್ರೀತಿಸುವರು. ನಿನ್ನಗುಣಗಳನ್ನು ಕೊಂಡಾಡುವರು. ನೀನು ಎಲ್ಲರಿಗೂ
ಪತಿವ್ರತಾಧರ್ಮವನ್ನು ಬೋಧಿಸುತ್ತಿರು. ನನ್ನ ಲೇಖನಿಗೆ ವಿಶ್ರಾಂತಿ
ಯನ್ನು ಕೊಡುವೆವು.
ಹದಿನಾರನೆಯ ಪರಿಚ್ಛೇದ.
ಸಂತಾಪಕನು ದತ್ತನ ಮನೆಯನ್ನು ಬಿಟ್ಟ ಬಳಿಕ ಹುಚ್ಚನಂತೆ
ಆವುದೋ ಮಾರ್ಗದಲ್ಲಿ ಹೊರಟನು. . ಅವನಿಗೆ ಪ್ರಪಂಚದಲ್ಲಿಯೇ ಬೇಸರ