ಪುಟ:ಸಂತಾಪಕ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂತಾಪಕ.

೬೧


ಸಂಪೂರ್ಣವಾಗಿ ನಾಶವಾಯಿತು. ಅವನ ಉಚ್ಛ್ವಾಸನಿಶ್ವಾಸಗಳೂ ನಿಂತು
ಹೋದುವು. ಅಷ್ಟರಲ್ಲಿ ಪಾಟಲಿಕೆಯು ಬಂದು ನಿಂತಳು. ಸಂತಾಪಕನು
ಗದ್ಗದಸ್ವರದಿಂದ " ಪಾಟಲೀ ! ಏನು ಸಮಾಚಾರ ? " ಎಂದು ಕೇಳಿದನು.
ಪಾಟಲಿಕೆಯು ಕುಮಾರಿಯ ಶೋಚನೀಯವಾದ ಕಡೆಯ ವರ್ತಮಾನವನ್ನು
ತಿಳಿಸುವುದಕ್ಕೋಸುಗ ಸಂತಾಪಕನನ್ನು ಹುಡುಕಿಕೊಂಡು ಇಲ್ಲಿಗೆ ಬಂದಳು.
ಸಂತಾಪಕನು ಮಾತನಾಡಿಸಿದೊಡನೆಯೇ ಅವಳು " ಕುಮಾರಿಯ ಮಾತು
ಗಳನ್ನು ಜ್ಞಾಪಿಸಿಕೊ. ಅದರಂತೆ ನಡೆದುಕೊ. ಈ ಸರವನ್ನು ಅವಳ
ಜ್ಞಾಪಕಾರ್ಥವಾಗಿ ತೆಗೆದುಕೊ " ಎಂದು ಒಂದುಸರವನ್ನು ಕೊಟ್ಟಳು.
ಸಂತಾಪಕನು ಹಠಾತ್ತಾಗಿ ನಡುಗಿ " ಪಾಟಲೀ ! ಕಮಲೆ ಹೇಗಿರುವಳು ? "
ಎಂದು ಕೇಳಿದನು. ಪಾಟಲಿಕೆಯು ಕಣ್ಣೀರು ತಂದುಕೊಂಡು, " ಇನ್ನವಳ
ಯೋಚನೆಯೇಕೆ ? ನೀಚ ! ನಿನ್ನನ್ನು ನೋಡಿ ಭ್ರಮಿಸಿಯೇ ನನ್ನ ಸಖಿಯು
ಮೃತಳಾದಳು. ಚಿಃ, ನಿನ್ನ ಜನ್ಮವನ್ನು ಸುಡು. ಅಂತಹ ಸ್ತ್ರೀರತ್ನವು ನಿನ್ನಂ
ತಹ ನರಾಧಮನಿಗೆ ದಕ್ಕುವುದೆಂದರೇನು? " ಎಂದು ಹೀಯ್ಯಾಳಿಸಿದಳು.
ಸಂತಾಪಕನು ಈ ಮಾತನ್ನು ಕೇಳಿದ ತತ್‌ಕ್ಷಣವೇ ಮೂರ್ಛಾಕ್ರಾಂ
ತನಾಗಿ ನೆಲದಮೇಲೆ ಬಿದ್ದನು. ಪಾಟಲಕುಮಾರಿಯು ಕಣ್ಣೀರುಮಳೆ
ಯನ್ನು ಕರೆಯುತ್ತೆ ಹೊರಟುಹೋದಳು. ಅಷ್ಟರಲ್ಲಿ ದಿನಮಣಿಯು ಬರುವ
ವೇಳೆಯು ಸಮೀಪಿಸಿತೆಂದು ಮಂದಮಾರುತನು ಸಾರಿಕೊಂಡು ಹೋದನು.
ಶುಕ ಪಿಕಾದಿ ಪಕ್ಷಿಗಳು ದಿನಮಣಿಗೆ ನಮಸ್ಕಾರ ಮಾಡಲೋಸುಗ
ತಂತಮ್ಮ ರೆಕ್ಕೆಗಳನ್ನು ಕೊಡಹಿಕೊಂಡು ಸಿದ್ಧವಾಗುತ್ತಿದ್ದುವು. ಮಂದ
ಮಾರುತಸ್ಪರ್ಶನದಿಂದ ಸಂತಾಪಕನಿಗೆ ಎಚ್ಚರವಾಯಿತು. ಅವನಿಗೆ ಪೃಥ್ವಿ
ಯೇ ಬೇಡವಾಯಿತು. ಕಣ್ಣುಗಳಲ್ಲಿ ದರದರ ನೀರು ಸುರಿಯಲಾರಂಭಿ
ಸಿತು. ಏನುಮಾಡುವುದಕ್ಕೂ ತೋರಲಿಲ್ಲ. ಏನೇನೋ ಮಾತನಾಡಿಕೊಂ
ಡನು. ಬಹುಕಾಲ ಅತ್ತನು. " ಕಮಲೇ ! ಕಮಲೇ ! " ಎಂದು ಕೂಗಿ
ದನು. ಮತ್ತೆ ಅಳತೊಡಗಿದನು ಮತ್ತೆ ಕೂಗಿದನು. " ಕಮಲೇ ! ಕಮಲೇ ! "