ಪುಟ:ಸಂತಾಪಕ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨

ಕರ್ಣಾಟಕ ಚಂದ್ರಿಕೆ.


ಉಪಸಂಹಾರ.

ಪಾಠಕಮಹಾಶಯರೇ ! ಭುಜಂಗಮನು ಪಾದಹೀನನಾಗಿ ಕಿಂಶುಕಾಟ
ವಿಯಲ್ಲಿ ಬಿದ್ದು ಕೆಲದಿವಸ ನರಳಿ ಸತ್ತುಹೋದನೆಂದು ನಮಗೆ ತಿಳಿಯಿತು.
ಭುಜಂಗಮನೂ, ನಂದಕುಮಾರನೂ ಮೃತರಾದುದಕ್ಕಿಂತ ಪ್ರೀತಿಪಾತ್ರಳಾದ
ಕಮಲಕುಮಾರಿಯು ಮೃತಳಾದ ವ್ಯಸನವು ಮಿತಿಮೀರಲು ಸಂತಾಪಕನಿಗೆ
ಹುಚ್ಚು ಹಿಡಿಯಿತೆಂದೂ, ಆ ದುಃಖವನ್ನು ಸೈಸಲಾರದೆ ಅವನು ಪಾಟಿಲ
ಕುಮಾರಿಯು ಕೊಟ್ಟಸರವನ್ನೇ ಕೊರಲಿಗೆ ಬಿಗಿದುಕೊಂಡು ಮೃತನಾದ
ನೆಂದೂ ನಮ್ಮ ವಿಚಾರಣೆಯಿಂದ ತಿಳಿಯಿತು. ಕಮಲಾಕರದತ್ತನೂ,
ವಿನಯಚಂದ್ರದತ್ತನೂ ಪುತ್ರೀಪುತ್ರರ ಮರಣದಿಂದ ವ್ಯಥಿತರಾಗಿ ನಿರುಪಮಾ
ವಿಜಯವರ್ಮರನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ವಿವಾಹವನ್ನು
ಮಾಡಿ ತಂತಮ್ಮ ಆಸ್ತಿಯನ್ನು ಅವರಿಗೆ ಕೊಟ್ಟು ತಮ್ಮ ಜೀವಿತಕಾಲವನ್ನು
ಕಳಾಮಾಲಿನಿಯ ಆಶ್ರಮದಲ್ಲಿ ಕಳೆದರೆಂದೂ ತಿಳಿಯಿತು. ನಿರುಪಮಾ
ವಿಜಯವರ್ಮರ ಮದುವೆಯ ಉಡುಗೆರೆಯು ಮಾತ್ರ ನಮಗೆ ಬರಲಿಲ್ಲ.
ಇನ್ನೆಷ್ಟುದಿವಸ ತಾನೆ ಅದನ್ನು ನಿರೀಕ್ಷಿಸಲಾದೀತು ? ಇಂದಲ್ಲದಿದ್ದರೆ ನಾಳೆ
ಯಾದರೂ ಬಂದೇಬರುವುದು. ದಂಪತಿಗಳು ಚಿರಕಾಲಸೌಖ್ಯವಾಗಿರಲಿ.

ಸಂಪೂರ್ಣ೦.

——————

ಬಿಕರಿಗೆ ಸಿದ್ಧವಾಗಿದೆ.

ಚಂದ್ರಮತಿ - [ ಪರಿಷ್ಕೃತವಾದ ದ್ವಿತೀಯಮುದ್ರಣ. ]ಬೆಲೆ 8 ಆಣೆ.
ಮೈಸೂರು ಆಸ್ಥಾನ ವಿರ್ದ್ವಾ ನಂಜನಗೂಡು ಶ್ರೀಕಂಠಶಾಸ್ತ್ರಿಗಳವರಿಂದ ರಚಿತವಾದ
ಎಲ್ಲಾ ಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ. ಪಟ್ಟಿಗಾಗಿ ಮುಖಪತ್ರದ ಕಡೆಯ ಪುಟ
ವನ್ನು ನೋಡಿ.

ವಿಳಾಸ :- ಎಂ. ಎಸ್. ರಾವ್ ಕಂಪೆನಿ,

ಪುಸ್ತಕ ವ್ಯಾಪಾರಿಗಳು,
ಅವೆನ್ಯೂ ರೋಡ್, ಬೆಂಗಳೂರು ಸಿಟಿ.