ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂ ಸ್ಕೃ ತ ಕ ವಿ ಚರಿತೆ (ಎರಡನೆಯ ಭಾಗ) ಒಂಭತ್ತನೆಯ ಶತಮಾನ ಮುಗ್ಧಸ್ಮಿತರುಚಿವಿಲಸಿತ ಮುಖಜಲಜನ್ಯಸ್ತ ಮುರಲಿಕಾಸುಷಿರು | ಮುದಿರರುಚಿ ಕಿಮಪಿ ತೇಜೋ ಮುನಿಜನಹೃದಯಂಗಮ ಮುಹುರ್ನೌಮಿ || ಉ ದ್ಭ ಟ ಇವನಿಗೆ “ ಭಟ್ಟೂದ್ಭಟ, ಉದ್ಭಟಾಚಾರ್ಯ ” ಎಂಬ ಹೆಸರುಗಳೂ ಇದ್ದು ವಾಗಿ ಗ್ರಂಥಾಂತರಗಳಿಂದ ತಿಳಿಯಬರುತ್ತದೆ. ಇವನು ಬ್ರಾಹ್ಮಣನು, ಕಾಶ್ಮೀರ ದವನು. ಕ್ರಿ. ಶ. ೭೭೯ - ೧೧ರ ವರೆಗೆ ಕಾಶ್ಮೀರದಲ್ಲಾಳಿದ ಜಯಾಪೀಡರಾಜನ ಆಸ್ಥಾನಪಂಡಿತನಾಗಿದ್ದನು. ಆದುದರಿಂದ ಇವನು ಕ್ರಿ. ಶ. ೮ನೆಯ ಶತಮಾನದ ಉತ್ತರಾರ್ಧ ಅಥವಾ ಕ್ರಿ. ಶ. 7ನೆಯ ಶತಮಾನದ ಪೂರ್ವಾರ್ಧದವನೆಂದು ಹೇಳಬೇಕಾಗುವುದು. ಇವನು " ಕಾವ್ಯಾಲಂಕಾರಸಂಗ್ರಹ” ವೆಂಬ ಲಕ್ಷಣ ಗ್ರಂಥವನ್ನು ಬರೆದಿರುವನು. ಇದರಲ್ಲಿ ಆರು ಸರ್ಗಗಳಿರುವುವು. ಇದಕ್ಕೆ ಪ್ರತಿಹಾ ರೆ೦ದುರಾಜನು - ಕಾವ್ಯಾಲಂಕಾರಸಾರಲಘುವೃತ್ತಿ' ಎಂಬ ಟೀಕೆಯನ್ನು ಬರೆದಿರು ವನು, ಉದ್ಭಟನ ಕಾವ್ಯಾಲಂಕಾರಸಂಗ್ರಹವಲ್ಲದೆ ಕುಮಾರಸಂಭವ' ಎಂಬ ಕಾವ್ಯವನ್ನೂ ಭಾಮಹನ ಅಲಂಕಾರಗ್ರಂಥಕ್ಕೆ ವಿವರಣೆಯನ್ನೂ ಬರೆದಿರುವುದಾಗಿ –

ಉದ್ಭಟನ ಕಾವ್ಯಾಲುಕಾರಸಂಗ್ರಹಪ್ರಸ್ತಾವನೆ.

ರಾಜತರಂಗಿಣಿ IV 495.