ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಶ' ಸಾಲ ೨೩೫ ಯ ಶ 8 ಪಾ ಲ ಇವನ ತಂದೆಯ ಹೆಸರು ಧನದೆ?ವ. ತಾಯಿಯ ಹೆಸರು ರುಕ್ಕಿಣಿ. ಇವನು ಮೊಧನಿಯಾ ಜಾತಿಯವನು, ಧನದೆ'ವನು ಮಂತ್ರಿಯೆಂದು ಕರೆಯಿಸಿಕೊಳ್ಳು ತಿದ್ದನು. ಕವಿಯು, ಚಕ್ರವರ್ತಿ ಅಜಯದೇವನ ಚರಣಕಮಲದ ರಾಜಹಂಸ ನೆಂದು ಹೇಳಿಕೊಂಡಿರುವುದು ಈ ನಾಟಕದ ಸೂತ್ರಧಾರನ ಹೇಳಿಕೆಯಿಂದ ಸ್ಪಷ್ಟ ಪಡುತ್ತದೆ. ಅದು ಹಿಗಿರುವುದು: - ಸೂತ್ರಧಾರಃ (ಸ್ಮತಿಮಭಿನಿಯ), - ಆರ್ಯೇ ! ಅವ ಮೊಡವಂತಾವತಂಸೇನ ಶ್ರೀ ಅಜಯದೇವಚಕ್ರ ವರ್ತಿ ಚರಣರಾಜೀವರಾಜಹಂಸನ ಮಂತ್ರಿಧನದೇವತನುಜನ್ಮನಾ ರುಕ್ಕಿಣೀಕುಲಾಲಿತೆನ ಸರ್ವತೋಮುಖನಿಸ್ತುಷರೇಮುಸಿವಿಲಾಸ ನಾಸಭವನೇನ ನಿರ್ವ್ಯಾಜರಾಜನೀತಿನಿತಂಬಿನಿ ವದನವಿಭವಮಣಿ ದರ್ಪಣೇನ ವ್ಯಾಪಾರಿಕಮಲಾಕುಚಕಲಶಮುಕ್ತಾಫಲಹಾರಯಸಿನಾ ನಾರನಾರಸ್ಕತೊದಾರಸಾರಣಿಸೇಕಸುಕುಮಾರ ಸೈ°ರಕಾವ್ಯಕ೦ದಲ ಪ್ರರೋಹಣ ಪರಮಾರ್ಹ-ತೆ' ಯಶಃಪಾಲಕವಿನಾ ವಿನಿರ್ಮಿತಂ...|| ಕಾಲ:-ಕುಮಾರಪಾಲನ ಅನಂತರ ಅಜಯದೇವನು ಸಿಂಹಾಸನಕ್ಕೆ ಬಂದನು. ಇವನು ಕ್ರಿ. ಶ. ೧೨೨೯ ರಿಂದ ೧೨೩೨ ವರೆಗೆ ರಾಜ್ಯವಾಳಿದನು. ಯಶಃಪಾಲಸು ಅಜಯದೇವನನ್ನು ಹೊಗಳಿರುವುದರಿಂದ ಕವಿಯನ್ನು ಅಜಯ ದೇವನ ಸಮಕಾಲಿ?ನನೆನಬೆ' ಕಾಗುವುದು ಎಂದರೆ ಕ್ರಿ. ಶ. ೧೩ನೆಯ ಶತಮಾನ ಪೂರ್ವಾರ್ಧದವನೆಂಬದು ನಿರ್ಧರವಾಗುತ್ತದೆ. ಗ್ರಂಥ:-ಇವನು “ ಮೊಹರಾಜಪರಾಜಯ ” ಎಂಬ ೨, ೬೦ಕರ ಳು : ನಾಟಕವನ್ನು ಬರೆದಿರುವನು. ಗುಜರಾತಿನ ಚಾಲಕೃರಾಜನಾದ ಕುಮಾರ ಪಾಲನನ್ನು ಜೈನಮತಾವಲಂಬಿಯಾಗಿ ಮಾಡಿದುದೂ, ಪ್ರಾಣಿಹಿಂಸಾನಿಷೇಧವೂ, ಮಹಾತ್ಮನಾದ ಹೇಮಚ೦ದ್ರನ ಮತದಂತೆ ಸಂತಾನಹಿ”ನ ಆಸ್ತಿಯನ್ನು ರಾಜ ನಾದವನು ಬೊಕ್ಕಸಕ್ಕೆ ಸೇರಿಸಿಕೊಳ್ಳಕೂಡದೆಂಬುದೂ ಇದರ ಮುಖ್ಯ ಸಂಗತಿಗಳು. ಇವುಗಳನ್ನು ಕದಿಯು ಕೃಷ್ಣಮಿಶ್ರನ ಪ್ರಬೋಧಚಂದ್ರೋದಯದ ಹಾಗೆ

  • ಇವನಿಗೆ ಅಜಯಪಾಲನೆಂದೂ ಹೆಸರು.

5 ಅನಂತನಾರಾಯಣಸೂರಿಯ ಮಾಯಾವಿಜಯಃ, ವಾದಿ'ತಂದ್ರನ ಸೂರೊ °ದಯ, ಪದ್ಮ ಸುಂದರನ ಜ್ಞಾನಚಂದ್ರೋದಯ, ಕವಿಕರ್ಣಪೂರನ ಚೈತನ್ಯ ಚಂದ್ರೋದಯ ಇಲ್ಲಿ ಈಜಾತಿಯ ಗ್ರಂಥಗಳನ್ನ ಬಹುದು