೨೬ ಸಂಕ್ಕೆ ತಳಚರಿತ [ಕ್ರಿಸ್ತ ಅನ್ನಾಪದೇಶವಾಗಿ, ಹೇಳಿ ರಾಜ, ವಿದೂಷಕ ಮತ್ತು ಹೇಮಚಂದ್ರ ಈ ಮೂರು ಹೆಸರುಗಳನ್ನು ಬಿಟ್ಟು ಉಳಿದ ಪಾತ್ರಗಳಿಗೆ ಮನುಷ್ಯರನ್ನು ಹೇಳುವುದಕ್ಕೆ ಬದಲು ಗುಣಗಳನ್ನು ಪಾತ್ರವಾಗಿ ತೆಗೆದುಕೊಂಡಿರುವನು ಈ ನಾಟಕವು ಮೊದಲು ತಾರಾಪದರದಲ್ಲಿ ಕುಮಾರಪಾಲ ನಿರ್ಮಿತ ಕುಮಾರವಿಹಾರದಲ್ಲಿನ ಮಹಾವೀರ ಪ್ರತಿ ಮೆಯ ಎದುರಿನಲ್ಲಿ ಅಭಿನಯಿಸಲ್ಪಟ್ಟುದಾಗಿ ತಿಳಿಯಬರುತ್ತದೆ. ಈಗಣ ಪಾಲನ ಪುರಕ್ಕೆ ಸೇರಿದ 'ತರಾಡ' ಎಂಬುದೇ ಆಗಣ ತಾರಾಪುರವಾಗಿರಬೇಕೆಂದು ಬೋಧೆ ಯಾಗುತ್ತದೆ. ಅಲ್ಲದೆ ಯಶಃಪಾಲನು ಈ ಸ್ಥಳದ ಮುಖ್ಯಾಧಿಕಾರಿಯಾಗಿರಬೇ ಕಂದೂ ಹೇಳಲಾಗುತ್ತದೆ. ಇವನು ೩೨ ಭವ್ಯವಿಹಾರಗಳನ್ನೂ, ತ್ರಿಭುವನವಿಹಾರ ವೆಂಬ ಚೈತ್ಯಾಲಯವನ್ನೂ ಕಟ್ಟಿಸಿದನು. ಆಗಣ ಕಾಲದಲ್ಲಿ ಹೇಮಚಂದ್ರಾ ಚಾರನ ಸಿದ್ದ ವ್ಯಾಕರಣವೂ, ವಿಂಶತಿವೀತರಾಗಸ್ತುತಿಯೂ, ಯೋಗಶಾಸ್ತ್ರಾಭ್ಯಾಸವೂ ಬಳಿಕೆಯಲ್ಲಿದವು. ಆಗಣಕಾಲದ ಗುರ್ಜರದೇಶದ ರಾಜಕೀಯ ಸಾಮಾಜಿಕ ಪರಿಸ್ಥಿತಿಯು ಹೀಗೆ ಇದ್ದಿತು. ಗುಜರಾತಿನ ಬನಿಯರು (ವೈಶ್ಯರು) ಲಕ್ಷ್ಮಿಕಟಾಕ್ಷಪಾತ್ರರಾಗಿ ಕೋಟ್ಯಧಿ ಶ್ವರರಾಗಿರುತ್ತಿದ್ದರು. ಇವರಲ್ಲಿ ಆನೆಗಳೂ ಕುದುರೆಗಳೂ ಇರುತ್ತಿದ್ದ ವ್ಯ, ಭಿಕ್ಷುಕರ ಸಲುವಾಗಿಅನ್ನಸತ್ರಗಳಿದ್ದವು. ಮನೆಯ ಪಾವಟಿಗೆಗಳೂ, ದೆ?ವಾಲಯದ ಗೋಡೆ ಗಳೂ, ಅಮೃತಶಿಲೆಗಳಿಂದ ಜೊಡಣೆಯಾಗಿರುತ್ತಿದ್ದವು. ಮನೆಯ ಮತ್ತು ದೆ?ವಾಲ ಯದಗೋಡೆಗಳು ಜೈನಕಧಾಚಿತ್ರಗಳಿಂದ ಅಲಂಕರಿಸಲ್ಪಡುತ್ತಿದ್ದವು. ಹಣವಂತರು ತಮಗೆ ಸಾಕಾದಷ್ಟು ಮಾತ್ರ ದ್ರವ್ಯವನ್ನುಳಿಸಿಕೊಂಡು ಗಳಿಸಿದ ಹೆಚ್ಚು ದ್ರವ್ಯ ವೆಲ್ಲವನ್ನೂ ಮತಸಂಬಂಧವಾದ ಕಾರಗಳಿಗೆ ಉಪಯೋಗಿಸಬೇಕೆಂಬ ನಿಯಮವಿ ದ್ದಿತು. ಹಡಗುಗಳ ಮೂಲಕ ದೇಶವಿದೇಶಗಳನ್ನು ಸುತ್ತಿ ವ್ಯಾಪಾರದಿಂದ ಅತುಳ್ಳೆ ಶೃತ್ಯವನ್ನು ಸಂಪಾದಿಸುತ್ತಿದ್ದರು. ಮಕ್ಕಳಿಲ್ಲದೆ ಸತ್ತವರ ಆಸ್ತಿಯನ್ನು ರಾಜ ಭಂಡಾ ರಕ್ಕೆ ಪಂಚಾಯತರ ಮೂಲಕ ವಶಪಡಿಸಿಕೊಟ್ಟ ಹೊರ್ತು ಮೃತನ ಕಳೇಬರವನ್ನು ಹೊರಕ್ಕೆ ಸಾಗಿಸಲು ಮಾಲಿಕರಿಗೆ ಸ್ವಾತಂತ್ರ್ಯವಿರಲಿಲ್ಲ. ವ್ಯಭಿಚಾರ ಪಾಪ ನೃತ್ಯವೆಂದೂ ಹೇಯವೆಂದೂ, ಗಣಿಸಲ್ಪಟ್ಟಿರಲಿಲ್ಲ, ಎಲ್ಲೆಲ್ಲಿ ನೋಡಿದರೂ ಜೂ ಚಾ ಟವು ಹೆಚ್ಚಾಗಿದ್ದಿತು, ಪುರಪ್ರಮುಖರೂ ಇತರರೂ ಇದರಲ್ಲಿ ಭಾಗಿಗಳಾಗಿರು ತಿದ್ದರು. ಹಬ್ಬದ ವಿಶೇಷದಿನಗಳಲ್ಲಿ ಸಂತೋಷದಿಂದ ಹೆಂಗಸರು ಗಂಡುಸರೆನ್ನದೆ ಸಾಮಾನ್ಯರಾದಿಯಾಗಿ ಎಲ್ಲರೂ ಜೂಜಾಡುತ್ತಿದ್ದರು. ಆnಣ ಕಾಲದಲ್ಲಿ ಬಳಕೆ ಯಲ್ಲಿದ್ದ ದೂತಗಳು ಐದು:- ೧. ಅಂಧಯಡ್ಯೂತ. ೨. ನಾಲಯದೂತ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫೪
ಗೋಚರ