ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ (ಕ್ರಿಸ್ತ - - - - -- -


- ಹೊಗಿದ್ದಾಗ ಜಯಸಿಂಹಸೂರಿಯು ಕೆಲವು ಶ್ಲೋಕಗಳಿಂದ ತೇಜಪಾಲನನ್ನು ಹೊಗಳಿ ಆ೦ಬಡದಲ್ಲಿರುವ ಶಕುನಿಕಾವಿಹಾರಕ್ಕಾಗಿ ಬಂಗಾರದ ಇಪ್ಪತ್ತೈದು ದೇವ ಕುಲಿಕೆಗಳನ್ನು ಮಾಡಿಸಿಕೊಡಬೇಕೆಂದು ಪ್ರಾರ್ಥಿಸಿಕೊಳ್ಳಲು ತೇಜಪಾಲನು ಅಣ್ಣ ನಾದ ವಸ್ತುಸಾಲ(ನರನಾರಾಯಣಾನಂದಗ್ರಂಥಕಾರ)ನೊಳು ಆಲೋಚಿಸಿ ಮಾಡಿ ಸಿಕೊಟ್ಟನು. ಜಯಸಿಂಹಸೂರಿಯು ಈ ಸೋದರರ ಧಾರಾಳಬುದ್ದಿಗೆ ಅಭಿನಂದಿಸಿ ಅವರ ಹೆಸನಲ್ಲಿ ಒಂದು ಸುಂದರವಾದ ಪ್ರಶಸ್ತಿಯನ್ನು ಬರೆದನು. ಈ ಶಿಲಾಲೇ ಖನ ಪ್ರಶಸ್ತಿಯ ಶಕುನಿಕಾವಿಹಾರದ ಭಿತ್ತಿಯನ್ನು ಅಲಂಕರಿಸಿದ್ದು ಕಾಲಕ್ರಮದಲ್ಲಿ ಈ ವಿಹಾರವು ನಾಮಾವಶೇಷವಾಗಿಹೊಗಿ ಪ್ರಕೃತಮುಸಲರ ಮಸೀತಿಯೊಂದು ಅಲ್ಲಿರುವುದು. ಕಾಲ: -ಇವನು ವಸ್ತು ಸಾಲ ಮತ್ತು ತೆಜಸಾಲರ ಸಮಕಾಲೀನನೆಂದು ಹೇಳಲ್ಪಟ್ಟಿರುವುದರಿಂದಲೂ, ಇವನ ಗ್ರಂಥಾಂತ್ಯದಲ್ಲಿ 10 ಸಂವತ್ ೧೨೭೬ ವರ್ಷ ಆಷಾಢನದಿ ೯ (ನವಖಾ) ಶನ ಹಾರವದನಂ ನಾಮನಾಟಕಂ ಎಂದು ಹೇಳಿರುವುದರಿಂದಲೂ ಜಯಸಿಂಹಸೂರಿಯ ಕ್ರಿ. ಶ. ೧೩ನೆಯ ಶತಮಾನದವ ನೆಂಬುದುಸ್ಪಷ್ಟವು. ಗ್ರಂಥ-ಇವನು “ಹಾರಮದಮರ್ದನ” ಎಂಬ ೫ ಅಂಕಗಳು ನಾಟಕವನ್ನು ಬರೆದಿರುವನು. ವಿ?ರಧದವಳನು ಮಂತ್ರಿಗಳಾದ ವಸ್ತುಪಾಲ ಮತ್ತು ತೇಜಪಾಲರಬಲದಿಂದ ಗುಜರಾತಿನಮೇಲೆ ಪದೇಪದೆದಾಳಿ ಎತ್ತುತ್ತಿದ್ದ ತುರುಸ್ಕ ಮುಖ್ಯನಾದ ಹಮ್ಮಾರನನ್ನು ಸೋಲಿಸಿ ಓಡಿಸಿದನೆಂಬುದೇ ಕಥೆಯ ಮುಖ್ಯ ತತ್ವವಾ ದುದರಿಂದ ತನ್ನ ನಾಟಕಕ್ಕೆ ಜಯಂತಸಿಂಹನ ಇಷ್ಟದಂತೆ ಹಮ್ಮಿಾರವದನ ರ್ದನವೆಂದೇ ಹೆಸರಿಟ್ಟಿರುವನು. ಈ ನಾಟಕವು ಕ್ಯಾಂಬೆಯಲ್ಲಿರುವ ಭೀಮೇಶ್ವರನ ಉತ್ಸವಸಮಯದಲ್ಲಿ ಅಭಿನಯಿಸಿದುದಾಗಿ ಸೂತ್ರಧಾರನಹೇಳಿಕೆಯಿಂದ ಗೊತ್ತಾಗುತ್ತದೆ ಜಯಂತಸಿಂಹನು ಕ್ರಿ. ಶ. ೧೨೭೯ರಲ್ಲಿ ಕ್ಯಾಂಬೆಯಸರ್ವಾಧಿ ಕಾರಿಯಾಗಿದ್ದನು. ಮಾದರಿಗಾಗಿ ಒಂದೆರಡು ಶ್ಲೋಕಗಳು ಬರೆದು ತೋರುವೆವು - ಪ್ರತಾಪಾಗ್ನಿ ಮೃಷ್ಣಂ ಮುಹುರರಿಮbವಲ್ಲ ಭಮಹಿ - ರುತಾಂ ವೃಂದಂ ಪ್ರಾದುರ್ಭವತಿ ಶತಶಾಖಂ ಸವಯತಃ ಇದಂ ಮೂಲಾದುನ್ನೂಲಿತಮತಿಶಯೋತ್ತುಂಗನಪುನಃ ಪ್ರರೋಹವಿರ್ಭಾವಂ ವಿದಧತಿ ಪುನ ರ್ಬುದ್ದಿ ಸರಿತಾ || ೧-೨೯ 1 ನಯಚಂದ್ರಸೂರಿಯಬರೆದ ಹಮ್ಮಾರಮಹಾಕಾವ್ಯವು ಇದಲ್ಲ. ಹಲ್ಕಾರಮಹಾಕಾವ್ಯ ದಲ್ಲಿ ಮೇವಾಡದ ಚೌಹಣರಾಜನಾದ ಹಮ್ಮಿರನ ಚರಿತೆಯು ಹೇಳಲ್ಪಟ್ಟಿರುವುದು. $ ಇವನು ವಸ್ತು ಪಾಲನಮಗ, ಇವನನ್ನು ಜೈತ್ರಸಿಂಹನೆಂದೂ ಕರೆಯುವುದುಂಟು.