ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ಹಸ್ತಿಮಲ್ಲ ೨೫h ಇವನ ಕಾಲದಲ್ಲಿಯೇ ಹಸ್ತಿಮಲ್ಲನು ಇದ್ದು ದಾಗಿ ಹೇಳಿರುವುದರಿಂದ ಕ್ರಿ. ಶ. ೧೩ನೆಯ ಶತಮಾನದ ಸಮಾರ್ಧದಲ್ಲಿದ್ದವನೆಂದು ಹೇಳುವುದು ತಪ್ಪಾಗದು. ಗ್ರಂಥಗಳು:-ಮೈಥಿಲೀಕಲಾಣ ವಿಕ್ರಾಂತಕೌರವ ಈ ಎರಡು ಗ್ರಂಥ ಗಳು ಮಾತ್ರ ಪ್ರಕೃತದೊರೆತಿರುವುವು. ಇವನದೆಂದು ಹೇಳುವ ಸುಭದಾಹರಣ ಮತ್ತು ಜನಾಪವನ೦ಜಯವೆಂಬ ಗ್ರಂಥಗಳು ಉಪಲಬ್ದವಿಲ್ಲ. ಮೈಥಿಲಿ ಕಲ್ಯಾಣ:- ಇದು ಐದು ಅಂಕಗಳ ನಾಟಕ. ಇದರಲ್ಲಿ ಶ್ರೀರಾ ಮನಿಗೂ ಸೀತೆಗೂ ಆದ ವಿವಾಹಸಂದರ್ಭದ ಕಥೆಯನ್ನು ತೆಗೆದುಕೊಂಡು ತನ್ನ ದಾದ ಕಲ್ಪನೆಗಳಿ೦ದ ನಾಟಕವನ್ನು ರೂಪಿಸಿರುವನು. ಸೀತೆಯ ರೂಪಲಾವಣಾ ದಿಗಳನ್ನು ಕೇಳಿದ ಮಾತ್ರದಿಂದಲೆ: ಉತ್ಕಂಠಿತನಾದ ರಾಮನು ಅಯೋಧ್ಯೆಯಿಂದ ವಿದೂಷಕನೊಡನೆ ಮಿಥಿಲೆಗೆ ಬಂದು ಅಕಸ್ಮಾತ್ತಾಗಿ ದೋಲಾಗೃಹದಲ್ಲಿ ಸೀತೆ ಯನ್ನು ನೋಡಿ ಅತ್ಯಂತವಿರಹ ಪೀಡಿತನಾಗುವನು. ಆಗ ಸೀತಾ ರಾಮರು ಸಂಧಿ, ಸಿದ್ದರು. ಆಕೆಯ (ಸೀತೆಯ) ಸಖಿಯರು ಬಂದುದರಿಂದ ಇವರ ಪ್ರಣಯ ಸಂಚಿಗೆ ಅವಕಾಶದೊರೆಯದೆ ಇರಲು, ವಿರಹಸಂತಪ್ತನಾದ ರಾಮನನ್ನು ವಿನೋದ ಗೊಳಿಸುವಸಲುವಾಗಿ ವಿದೂಷಕನು ವಾಧರ ವನಕ್ಕೆ ಕರೆದುಕೊಂಡು ಹೊಗುವನು. ಅಲ್ಲಿ ಇಬ್ಬರೂ ಮಾತನಾಡುತ್ತಿರುವಷ್ಟರಲ್ಲಿ ಸೀತೆಯು ವಿರಹತಾಪಶಮನಾರ್ಥವಾಗಿ ಅಲ್ಲಿಗೆ ಬಂದು ರಾಮವಿದೂಷಕರ ಸಲ್ಲಾಪವನಾಲೈ ಸುತ್ತ ರಾಮನು ಹೇಳಿದ ಕೆಲವಮಾತುಗಳನ್ನು ಅನ್ಯಥಾಭಾವಿಸಿಕೊಂಡು ಮೂರ್ಛಿತ ಳಾಗಲು ರಾಮನು ಹೋಗಿ ಅವಳನ್ನು ಸಮಾಧಾನಗೊಳಿಸುವನು, ಅನಂತರ ಸೀತಾ ಸ್ವಯಂವರಕ್ಕಾಗಿ ಮಿಥಿಲಾಧಿಸನು ಧನುಸ್ಸನ್ನು ಪಣವಾಗಿಟ್ಟುದುದನ್ನರಿತು ರಾಮನು ಲಕ್ಷ್ಮಣನೊಡನೆ ಬಂದು ಧನು ರ್ಭಂಗವನ್ನು ಮಾಡಿ ಸೀತೆಯನ್ನು ಪರಿಗ್ರಹಿಸಿಸುವನು. ಇದೇ ಈ ರೂಪಕದ ಕಥಾಸಂವಿಧಾನ, ವಿಕ್ರಾಂತ ಕೌರವ:-ಇದಕ್ಕೆ - ಸುಲೋಚನಾ, ಎಂಬ ಮತ್ತೊಂದು ಹೆಸರು, ಇದರಲ್ಲಿ ಆರು ಅಂಕಗಳಿರುವುವು. ಕೆವಲಕಾಲ್ಪನಿಕ ಕಥೆಯೆಂದು ತೋರು ತದೆ. ಹಸ್ತಿನಾಪುರದ ರಾಜಕುವರನಾದ ಜಯನೆಂಬುವನು (ಮೋಥೇಶ್ವರ) ಕಾಶಿಗೆ ಯಾತ್ರಾರ್ಥಿಯಾಗಿ ಹೋಗಿದ್ದು ಕಾಶೀರಾಜನ ಕುವರಿಯಾದ ಸುಲೋ ಚನಾ ಎಂಬವಳನ್ನು ನೋಡಿ ತನ್ನಯಚಿತ್ತನಾಗಿ ವಿರಹಪೀಡಿತನಾಗಿರಲು ಸದ್ಯ ದಲ್ಲಿ ಸಂಭವಿಸಿದ ಅವಳ ಸ್ವಯಂವರೋತ್ಸವದಲ್ಲಿ ಅವಳು ಇವನನ್ನು ವರಿಸುವಳು. ಇದೇ ಈ ನಾಟಕದ ಕಥೆ. ಈ ಎರಡು ನಾಟಕ ಕಥೆಗಳ ಪರಿಶೀಲನದಿಂದ