ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೧ ಸಂಸ್ಕೃತಕಏಚರಿತ fಕ್ರಿಸ್ತ ಮಲ್ಲನೂ ರಾಜಾವಳಿ ಕಥೆಯ ಹಸ್ತಿಮಲ್ಲನೂ ಒಂದೇ ವ್ಯಕ್ತಿಯೇ ಹೇಗೆ ? ಒಂದೇ ವ್ಯಕ್ತಿಯೆನ್ನುವುದಾದರೆ ಹಸ್ತಿಮಲ್ಲವಿರಚಿತ ಕರ್ಣಾಟಕ ಗ್ರಂಥಗಳಾವುವು ? ಹಸಿ ಮಲ್ಲವಿರಚಿತವಾದ ಮೈಧಿಲೀ ಕಲ್ಯಾಣ ಮತ್ತು ವಿಕಾಂತಕೌರವ ಎಂಬ ಸಂಸ್ಕೃತ ನಾಟಕಗಳಲ್ಲಿ ಹಸ್ತಿಮಲ್ಲವಿರಚಿತ ಕರ್ಣಾಟಕ ಗ್ರಂಥಗಳಲ್ಲಿಯೂ ಹೇಳಿರು ವಂತೆ ಕಂಡುಬರುವುದಿಲ್ಲ. ಕರ್ಣಾಟಕ ಕವಿಚರಿತೆಕಾರರೂ ಹೇಳಿರುವದಿಲ್ಲ. ಉಭಯ ಭಾಷಾ ಕವಿಚಕ್ರವರಿ ಎಂಬುದರಿಂದ ಕನ್ನಡ ಮತ್ತು ಸಂಸ್ಕೃತಭಾಷೆಗಳೆನ್ನು ವುವಾದರೆ ಸಂಸ್ಕೃತ ಪ್ರಾಕೃತಗಳೆಂದೇಕೆ ಹೇಳಕೂಡದು ? ಹಸ್ತಿಮಲ್ಲನು ಪಾಂಡ್ಯದೇಶದರಾಜನ ಕೃಪಾಪಾತ್ರನಾಗಿ ಆರಾಜಧಾನಿ ಯಲ್ಲಿದ್ದು ದಾಗಿ- ತ್ರಿಮುತ್ತುಂಡ್ಯ ಮಹೀ೭ ನಿಜಭುಜಾದಂಡಾವಲಂಬೀಕೃತಿ ಕಣಾ೯ಓಾವಸಿಮಂಡo ಪದನತಾನೆ:ಕಾವಸೀಜೋSವತಿ | ಇತ್ಯಾನುಸರ್ರಸ್ವ ಬಂಧುವಿವಹ್ನರ್ವಿದ್ದ ದೀರಾಪೈಸೃವ೦ ಜೈ ನಾವಾರಸಮೇತಸಂತರನಮೇ (?) ಶ್ರೀಹಸ್ತಿಮಲ್ಲೊವಸತ್ || ಎಂಬ ಶ್ಲೋಕದಿಂದ ತಿಳಿಯಬರುತ್ತದೆ. ಪಾಂಡ್ಯದೇಶವು ಯಾವುದೆಂಬುದರ ವಿಚಾರದಲ್ಲಿ:-- “ ದ್ರವಿಡದೇಶಸನ್ನಿಹಿತಸ್ಯ ಮಧುರಾ ( ದಕ್ಷಿಣಮಧುರಾ) ಯಾಃ ಸವಿಾಪಸ ಪ್ರದೇಶಾನಾಂ ಪಾಂಡ್ಯದೇಶ ಇತಿ ನಾವು ಆಸೀತ್ ” ಎಂದೂ, ಅದನ್ನು ಯಾರು ಆಳುತ್ತಿದ್ದರೆಂಬುದರ ವಿಚಾರದಲ್ಲಿ - (( ಕವಿಸ್ಥಿತಿಸಮಯೇ? ತತ್ರತಃ ಪಾಂಡ್ಯಮಹೇಶ್ವರೋ ನೃಪೋಬಭೂವ | ಅಯಂಸುಂದರಪಾಂಡ್ಯ [ಪ್ರಥಮ] ಸ್ಕೋತ್ತರಾಧಿಕಾರಿಸ್ಯಾತ್, ತಸ್ಯ ರಾಜ್ಯಕುಲಃ ೧೩೦೬ ವಿ. ಸಂವತ್ಸರಪ್ರಾರಂಭೋಭವತಿ | ಅಯಂ ಕವೆ ಮಹದಾದರಶ್ಚ ಕಾರ ” ಎಂದು ತಳಿರುವುದರಿಂದ ದ್ರಾವಿಡ ದೇಶದ ಸಮಿಾಪವರ್ತಿ ಮಧುರೆಯಬಳಿ ಇರುವ ಪ್ರದೇಶಕ್ಕೆ ಪಾಂಡ್ಯದೇಶವೆಂದೂ, ಅದನ್ನು ಮೊದಲನೆಯ ಸುಂದರಪಾಂಡ್ಯನ ಉತ್ತರಾಧಿಕಾರಿಯು ಆಳುತ್ತಿದ್ದನೆಂದೂ ಇವನು ರಾಜ್ಯವನ್ನಾಳಿದುದು ವಿ. ಸಂ, ೧೩೦೬ ಅಥವಾ ಕ್ರಿ. ಶ. ೧೨೫೦ ಎಂದೂ ತಿಳಿಯಬರುತ್ತದೆ. ಕಾಲ :- ಕ್ರಿ. ಶ. ೧೨೧೬-೧೨೩೭ರ ವರೆಗೆ ಮಾರವರ್ಮ ಸುಂದರಪಾಂಡ್ಯ [ಪ್ರಥಮ] ನು ಆಳಿದುದಾಗಿದೆ. ಇವನ ಉತ್ತರಾಧಿಕಾರಿ ಜಟಾವರ್ಮ ಕುಲ ಶೇಖರ. [ಎರಡನೆಯವ] ಇವನು ಕ್ರಿ. ಶ. ೧೨೩೭-೧೨೬೦ರ ವರೆಗೆ ಆಳಿದನು.*

  • Ancient Dekhan P. 175