ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸ್ತಿಮಲ್ಲ ೨೪೯ -- - L.........ಹಸ್ತಿಮಲ್ಲಿಕಾನಾಮ ಪ್ರಥಿತಮಾಸೀತ್ | ಅಯಂ ಚ ಗೋವಿಂದ ಭಟ್ಟಾಖ್ಯವಿದುಷಃ ಸೂನುರ್ದಾಕ್ಷಿಣಾತ್ಯ ಆಸೀತ್ | ಗೋವಿಂದಭಟ್ಟ ವತ್ಸಗೋತ್ರಿಯೊಬ್ರಾಹ್ಮಣಃ ಪೂರ್ವಮಜೈನ ಆಸೀತ್ | ಪಾದಗ ವತ್ಸಮಂತಭದ್ರ ವಿರಚಿತದೇವಾಗಮಸೂತ್ರಾಧ್ಯಯನೇನ ಜೈನೋ ಜಾತಃ ...........” ಎಂಬದರಿಂದ ಗೊತ್ತಾಗುತ್ತದೆ. ಗೋವಿಂದಭಟ್ಟನು ಸ್ವರ್ಣಯಕ್ಷಿ ಎಂಬ ದೇವಿಯನ್ನು ಆರಾಧಿಸುತ್ತಿದ್ದಂತೆ ಯೂ, ದೇವಿ ಪ್ರಸಾದದಿಂದ (೧) ಶ್ರೀಕುಮಾರ (೨) ಸತ್ಯವಾಕ್ಯ (೩) ದೇವವಲ್ಲಭ (೪) ಉದಯಭೂಷಣ (೫) ಹಸ್ತಿಮಲ್ಲ (೬) ವರ್ಧಮಾನ'ರೆಂಬ ಆರುಜನ ಗಂಡು ಮಕ್ಕಳಾಗಿ ಎಲ್ಲರೂ ಮಹಾವಿದ್ವಾಂಸರೂ ಕವಿಗಳೂ ಆಗಿದ್ದು ದಾಗಿ ತಿಳಿಯಬರು ತದೆ. ಇವರಲ್ಲಿ ಸತ್ಯವಾಕ್ಯನು 'ಶ್ರೀವತೀಕಲ್ಯಾಣ' ವನ್ನು ಬರೆದಿರುವುದಾಗಿ ಮೈಥಿಲಿ ಕಲ್ಯಾಣದ ಪ್ರಸ್ತಾವನೆಯಲ್ಲಿ ಹಸ್ತಿಮಲ್ಲನು ಹೇಳಿಕೊಂಡಿರುವನು. ಕುಮಾರಕವಿ ನಿರ್ಮಿತ' (ಆತ್ಮಬೋಧ' ಎಂಬ ಸಣ್ಣ ಗ್ರಂಥವು ಈಡರ ಪುರದ ಸರಸ್ವತಿ ಭಂಡಾರದಲ್ಲಿರುವುದು, ಅದು ಹಸ್ತಿಮಲ್ಲನ ಅಣ್ಣನಾದ ಶಿಕುಮಾರನು ಬರೆದುದೊ? ಅಥವಾ ಬೇರೆಯೋ ತಿಳಿಯದಾಗಿದೆ. - ಶೀರ್ವಾ ಆರ್. ನರಸಿಂಹಾಚಾರ್ಯರು ಕರ್ಣಾಟಕ ಕವಿಚರಿತೆಯಲ್ಲಿ ಹಸ್ತಿಮಲ್ಲಯವನ್ನು ಸಾಧಿಸಿರುವರು. (೧) ಆದಿಪುರಾಣವನ್ನು ಬರೆದಿರುವ ಹಸ್ತಿಮಲ್ಲ. ಇವನ ಕಾಲವನ್ನು ಕ್ರಿ. ಶ. ೧೨೧೨ ಎಂದಿರುವರು. (೨) ದೇವಚಂದ್ರನು ರಾಜಾವಳಿ ಕಥೆಯಲ್ಲಿ (೧೮೩೮) ಒಬ್ಬ ಹಸ್ತಿಮಲ್ಲಾ ಚಾರ್ಯನ ಹೆಸರನ್ನು ಹೇಳ' ಆತನು ಗುಣಭದ್ರನ ಶಿಷ್ಯನಾದ ವೇದಾಗಮಸ್ತೋತ್ರ ವ್ಯಾಖ್ಯಾನಕರವಾದ ಗೋವಿಂದಭಟ್ಟನ ಮಗನೆಂದೂ, ಮದದ ಆನೆಯನ್ನು ಅಡ ಗಿಸಿದುದರಿಂದ ಅವನಿಗೆ ಹಸ್ತಿಮಲ್ಲನೆಂಬ ಹೆಸರು ಬಂದಿತೆಂದೂ, ಆತನಿಗೆ ಪಾರ್ಶ್ವ ಪಂಡಿತ ಮೊದಲಾದ ಮಕ್ಕಳು ಇದ್ದರೆಂದೂ, ಆತನು ಉಭಯಭಾಷಾ ಕವಿಚಕ್ರವರ್ತಿ ಯೆನಿಸಿದ್ದ ನೆಂದೂ, ಆತನ ಶಿಷ್ಯನು ಲೋಕಪಾಲಾರನೆಂದೂ, ಹೇಳಿದ್ದಾನೆ ಎಂದೂ ಇವನು ಮೇಲೆ ಹೇಳಿದ ಆದಿಪುರಾಣ ಕವಾಗಿರಲಾರನೆಂದೂ ಒಕ್ಕಣಿಸಿರುವರು. ಇಲ್ಲಿ ಹೇಳುವ ಹಸ್ತಿಮಲ್ಲನು ಉಭಯಭಾಷಾಕವಿಚಕ್ರವರ್ತಿ ಎಂದು ನಮಗೆ ದೊರೆತಿರುವ ಗ್ರಂಥಗಳಲ್ಲಿ ಹೇಳಿಕೊಂಡಿರುವನು. ಹಾಗಾದರೆ ಈ ಹಸ್ತಿ

  • ಗಣರತ್ನಮಹೋದಧಿ' ಕಾರನು ಇವನಲ್ಲ.
  1. (ಕರ್ಣಾಟಕ ಕವಿಚರಿತೆ ತಿದ್ದಿದ ಪ್ರತಿ ಪುಟ. ೩೯೯.)

(32)