ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಸಂಸ್ಕೃತಕವಿಚರಿತೆ (ಕ್ರಿಸ್ತ ಹೊ ಸ ದೆ ನ ಇವನು ಕ್ರಿ. ಶ. ೧೩ನೆಯ ಶತಮಾನದಲ್ಲಿ ದೌಲತಾಬಾದಿನಲ್ಲಿ ಆಳಿದ ಹೇಮಾದ್ರಿಯ ಸಭಾಪಂಡಿತನಾಗಿದ್ದನು. ಇವನು 'ಮುಗ್ಧ ಬೋಧ' ಎಂಬ ಕಾವ್ಯ ವನ್ನೂ, ಕವಿಕಲ್ಪದ್ರುಮವೆಂಬ ಮತ್ತೊಂದು ಗ್ರಂಥವನ್ನೂ ಬರೆದಿರುವನು. ಇದರಲ್ಲಿ ಸರ್ವಧಾತುಗಣಗಳೂ ಶ್ಲೋಕರೂಪದಲ್ಲಿ ಬರೆಯಲ್ಪಟ್ಟಿರುವುವು. ಪ್ರಾ ಣ ಕ ಕ ಸ ನು ಇವನು ಪ್ರಾಣಕರನ ಮಗನೆಂಬುದು ಹೊರ್ತು ಮತ್ಯಾವುದೂ ತಿಳಿಯು ವಂತಿಲ್ಲ. ಇವನ ನಿಜವಾದ ಹೆಸರಾವುದೆಂಬುದು ತಿಳಿಯದು, ಇವನು ಮೇದಿನೀ ಎಂಬ ಕೋಶವನ್ನು ಬರೆದಿರುವನು, ಇವನ ಕಾಲದ ವಿಚಾರವಾಗಿ ಡಾ|| ಭಂಡಾರಕರವರು ಸಾಯಣಾಚಾರರ ಅನಂತರದವನೆಂದೂ ಕ್ರಿ. ಶ. ೧೫ನೆಯ ಶತಮಾನದವನೆಂದೂ ಹೇಳುವರು. ಕೆಲವರು ಮಲ್ಲಿನಾಥನಿಗಿಂತಲೂ ಒಂದಲವ ನಾಗಿರಬೇಕೆಂದು ಅಭಿಪ್ರಾಯಪಡುವರು. ಮಲ್ಲಿನಾಥನ ವ್ಯಾಖ್ಯಾನಗಳಲ್ಲಿ ಮೇದಿಸಿ ಕೋಶದ ಶಬ್ದಗಳು ದೊರೆಯುವುವಾದುದರಿಂದ ಇವನು ಕ್ರಿ. ಶ. ೧೩ನೆಯ ಶತ ಮಾನದವನೆಂದರೆ ತಪ್ಪಾಗದು.* ಕೃ ಸ್ಥಾ ನ ೦ ದ ಇವನು ಕಾಯಸ್ಥ ಬ್ರಾಹ್ಮಣನು, ಸಂಧಿವಿಗ್ರಹಕನು. ಇವನು ಕ್ರಿ. ಶ. ೧ ನೆಯ ಶತಮಾನದವನು ಸಾಹಿತ್ಯದರ್ಪಣಕಾರನು ಇವನ ಶ್ಲೋಕಗಳನ್ನು ಉದಾ ಹರಿಸಿಕೊಂಡಿರುವುದಲ್ಲದೆ ನೈಷಧಕಾವ್ಯಕ್ಕೆ ವ್ಯಾಖ್ಯಾನವನ್ನು ಬರೆದಿರುವುದಾಗಿ ಹೇಳಿಕೊಂಡಿರುವನು. ಇವನು ಸಹೃದಯಾನಂದವೆಂಬ ಕಾವ್ಯವನು ಒರೆದಿರು ವನು. ಇದರಲ್ಲಿ ಪುರಾಣಪ್ರಸಿದ್ಧನಾದ ನಳಮಹಾರಾಜನ ಕಥೆಯು ವರ್ಣಿತವಾ ಗಿರುವುದು.… ಪ್ರಕೃತ ಅಚ್ಚಾಗಿ ದೊರೆತಿರುವದು ಆರು ಸರ್ಗಗಳುಮಾತ್ರ. ದನು ಯಂತೀ ಪರಿಣಯ ಪೂರ್ತಿಯಾಗಿ ಹೇಳಿದೆ. ಇದಕ್ಕೆ ಶಠಕೋಪಾಚಾರರ ವ್ಯಾಖ್ಯಾನವು ಇರುವುದು ಇದರ ಕೆಲವು ಶ್ಲೋಕಗಳನ್ನು ಬರೆಯುವೆವು.

  • Descriptive Catalogue of Sanskrit manuscripts Tanjore

Library P. 3876 Vol. IX & History of classical Sanskrit Literature P. 48