ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - -, (ಕ್ರಿಸ್ತ ೨೬೪ ಸಂಸ್ಕೃತಕವಿಚರಿತೆ -- - ------ -- - ವಿರಚಿತೇ................” ಎಂದು ಹೇಳಿಕೊಂಡಿರುವದು ಕಂಡುಬರುತ್ತದೆ. ಹೀಗೆ ಹೇಳಿರುವುದರಿಂದ ಮಹಾತ್ಮರಾದ ವಿದ್ಯಾರಣ್ಯರು ಬುಕ್ಕರಾಜನ ಬಳಿ ಕೆಲವ್ರಕಾಲ ಮಂತ್ರಿ ಪದವಿಯಲ್ಲಿದ್ದು ಭಾಷ್ಯಾದಿಗ್ರಂಥಗಳನೇಕಗಳನ್ನು ರಚಿಸಿ ಕೊನೆಗೆ ತುರೀ ಯಾಶ್ರಮವನ್ನು ಸ್ವೀಕರಿಸಿರಬಹುದಾಗಿ ವ್ಯಕ್ತವಾಗುತ್ತದೆ. ಮೇಲಣ ಗದ್ಯಾವ ಲೋಕನದಿಂದ ವಿದ್ಯಾರಣ್ಯರು ತುರೀಯಾಶ್ರಮವನ್ನು ಕೈಗೊಳ್ಳುವುದಕ್ಕೆ ಮೊದಲು ಮಾಧವಾಚಾರರೆಂಬ ಅಂಕಿತದಲ್ಲಿ ಬುಕ್ಕನೇ ಮೊದಲಾದವರಾಶ್ರಯದಲ್ಲಿ ಮಂತ್ರಿ ಪದವಿಯಲ್ಲಿದ್ದು ಮಹಾವಿದ್ಯಾ೦ಸರಾಗಿ ಅನೇಕ ಗ್ರಂಥಗಳನ್ನು ಬರೆದು ತಾವು ವಿದ್ಯಾಪಕ್ಷಪಾತಿಯಾಗಿದ್ದು ದರಿಂದ ತಮ್ಮಂತೆಯೇ ವಿದ್ಯಾವೈದುಷ್ಯವನುಳ್ಳ ವೆಂಕಟ ನಾಥನು ಉಂಛವೃತ್ತಿಯಿಂದ ಜೀವನವನ್ನು ಸಾಗಿಸುತ್ತಿರುವದನ್ನು ಜನರಿಂದ ಕೇಳಿ ದಾರಿದ್ರಾನುಭವದಲ್ಲಿ ತಾವೂ ನುರಿತವರಾಗಿದ್ದು ದರಿಂದ ಸ್ವಾಭಾವಿಕವಾಗಿ ನೊಂದು ರಾಜನಬಳಿಗೆ ಬರಲು ಕೇಳಿಕೊಂಡಿರಬಹುದಾಗಿಯೂ, ಅದಕ್ಕೆ ಪ್ರತ್ಯುತ್ತರ ವಾಗಿ ಬರೆದುಬಂದ ಶ್ಲೋಕಗಳನ್ನು ನೋಡಿ ರಾಜಕೀಯ ವಿಚಾರವಾಗಿ ಬೇಸತ್ತು ತುರೀಯಾಶ್ರಮವನ್ನೇಕೆ ಕೈಗೊಂಡಿರಬಾರದೆಂದು ನಮ್ಮ ಮನೋದೇವತೆಯು ತರಿಸುತ್ತದೆ. ಇದಕ್ಕೆ ಅನುಗುಣವಾಗಿ ಆಗಣ ಕಾಲಧರ್ಮವು ಕೇವಲ ವಿಪತ್ಯಾಸ ದಲ್ಲಿದ್ದು ಪರಮತಸಹಿಷ್ಣುತೆಯು ಮಾಯವಾಗಿ ಸ್ವಮತಧರ್ಮಪ್ರಸರಣದಲ್ಲಿ ಪ್ರತಿ ಯೊಬ್ಬರೂ ದೀಕ್ಷಾಬದ್ಧರಾಗಿದ್ದರೇ ಹೊರ್ತು ಹೀಗೆ ಮಾಡುವುದರಿಂದ ರಾಗದ್ವೇಷ ಗಳಿಗೆ ಅವಕಾಶವುಂಟಾಗಿ ಸಮಾಜ ನೈತಿಕಹಾಸವೂ ಪರಸ್ಪರ ಸುದ್ದದ ನೂ ಮಣ್ಣು ಪಾಲಾಗುವುದೆಂಬದನ್ನು ಅವರು ಅರಿಯದಾದರು. ಹೆಚ್ಚೇಕೆ ! ಕ್ರಿ. ಶ. ೧೨-೧೩ನೆಯ ಶತಮಾನಗಳಲ್ಲಿ ಒಂದುಕಡೆ ಮಧ್ಯದರ್ಶನ ಮತ್ತೊಂದುಕಡೆ ರಾಮಾನುಜದರ್ಶನ ಈದರ್ಶನಗಳ ಸ್ಪರ್ಧೆಯಲ್ಲಿ ದಕ್ಷಿಣ ಇಂಡಿಯಾದೇಶವು ಜರ್ಜರಿತವಾಗುತ್ತಿದ್ದಿ ತೆಂದೂ ಸಾಲದುದಕ್ಕೆ ಮುಸಲ್ಮಾನರ ಹಾವಳಿಯಿಂದ ಚೂರ್ಣಿಕೃತವಾಗಿದ್ದಿ ತೆಂದು ಚರಿತ್ರೆಯು ಸಾರಿಸಾರಿ ಹೇಳುತ್ತದೆ.* ಇವೇ ಮೊದಲಾದ ಕಾರಣಗಳಿಂದ ಇವರಿವ್ವರೂ ಪರಸ್ಪರ ಒಂದೇ ಸ್ಥಳದವ ರೆಂದಾಗಲಿ, ಮೈತ್ರಿಯುಳ್ಳವರೆಂದಾಗಲಿ, ಅಥವಾ ಸಹಪಾಠಿಗಳೆಂದಾಗಲಿ ಸರಿಯಾದ ಚರಿತ್ರಾಧಾರಗಳಿಲ್ಲದೆ ಹೇಳುವುದು, ಸರ್ವಸಮ್ಮತವಾಗದೆಂದೂ ಹಾಗೆ ಹೇಳುವ ದಾದರೆ ಅವು ಮರಳಿನಲ್ಲಿನ ಗೋಡೆಯಂತಾಗುವುದೆಂದೂ ಹೇಳಿ ವೆಂಕಟನಾಥನಿಗೂ ವಿದ್ಯಾರಣ್ಯರಿಗೂ ಯಾವ ಸಂಬಂಧವೂ ಇಲ್ಲವೆಂದೂ ಸಮಕಾಲೀನರೆಂದು ಮಾತ್ರ ಹೇಳಬಹುದೆಂದೂ ಮತ್ತೊಂದುಸಲ ಹೇಳಬೇಕಾಗಿದೆ. + ತೈತ್ತಿರೀಯ ಸಂಹಿತೆಯಭಾಷ್ಯವನ್ನು ನೋಡಿ South India and ber Mahomedan Invaders