ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ವೆಂಕಟನಾಥ 38 ತುಂಗಭದ್ರಾ ಸಮಿಾಪದಲ್ಲಿದ್ದ ರಾಜ್ಯದ ಒಡೆಯನ ಮಗಳಿಗೆ ಬ್ರಹ್ಮರಕ್ಷಸ್ಸು ಹಿಡಿದಿದ್ದು ದಾಗಿ ಗುರುಪರಂಪರಾಪಭಾವವು ಹೇಳುವುದುಹೊರ್ತು ರಾಜನ ಹೆಸರಾ ಗಲಿ ಅಥವಾ ರಾಜ್ಯದ ಹೆಸರಾಗಲಿ ಚಾರಿತ್ರಕದೃಷ್ಟಿಯಿಂದ ನಿರ್ದಿಷ್ಟ ಮಾಡಿ ಹೇಳಿರು ವುದಿಲ್ಲ. ಆದರೆ ವೈಭವ ಪ್ರಕಾಶಿಕೆಯಲ್ಲಿ ಮಾತ್ರ ವಿಜಯನಗರದ ಬುಕ್ಕರಾಯನೆಂದು ಹೇಳಿದೆ. ಇದುಸರಿಯಾದುದೆಂದು ಹೇಳಲಾಗುವದಿಲ್ಲ. ಏಕೆಂದರೆ ಕ್ರಿ. ಶ. ೧೩೩೬ರಲ್ಲಿ ಇನ್ನೂ ಸರಿಯಾಗಿ ವಿಜಯನಗರವು ಸ್ಥಾಪಿತವಾಗಿರಲಿಲ್ಲ. ಆದುದರಿಂದ ಗುರು ಪರಂಪರಾಪಭಾವದಲ್ಲಿ ಹೇಳಿರುವ ರಾಜನು ಯಾವನೋ ಆನೆಗೊಂದಿ ಸಂಸ್ಥಾನದ ವನಾಗಿರಬೇಕು. ಚರಿತ್ರೆಯು ಈ ವಿಚಾರದಲ್ಲಿ ಯಾವುದನ್ನೂ ಸ್ಪಷ್ಟ ಪಡಿಸಿಹೇಳಿರು ವುದಿಲ್ಲ. ಆದುದರಿಂದ ಆನೆಗೊಂದಿಯ ಅಥವಾ ಹೊಯ್ಸಳರಾಜ್ಯದ ಯಾವನೋ ಆಶ್ರಿತ ರಾಜನೊಬ್ಬ ನಾಗಿರಬೇಕೆಂದೂ ಅವನ ಹೆಸರು ತಿಳಿಯದೆಂದೂ ಪ್ರಕೃತ ಹೇಳಿ ಮುಗಿಸಬೇಕಾಗಿದೆ. ಇದಲ್ಲದೆ ವಿದ್ಯಾರಣ್ಯರ ನೇತೃತ್ವದಲ್ಲಿ ಆನೆಗೊಂದಿ ರಾಜ್ಯವು ವಿಜಯನಗರ ವೆಂಬ ಹೆಸರಿನಿಂದ ಕ್ರಿ. ಶ. ೧೩೪೦ರಲ್ಲಿ ಸ್ಥಾಪಿಸಲ್ಪಟ್ಟು ದುದಾಗಿ ರೆ, ಹೀರಾಸರು ಒಕ್ಕಣಿಸಿರುವರು. ಇದರಿಂದ ಕ್ರಿ. ಶ. ೧೩೩೬ರಲ್ಲಿ ವಿಜಯನಗರಸ್ಥಾಪನವಾಗ ಇಲ್ಲವೆಂಬದು ನಿರ್ಧರವಾಗುತ್ತದೆ. ಹೀಗೆ ವೆಂಕಟನಾಥನ ಮತ್ತು ವಿದ್ಯಾರಣ್ಯರ ಸಂಬಂಧವು ಕೊನೆಗೊಂಡುದು, (೨) ಕೃಷ್ಣಮಿಶ್ರರದರ್ಶನ:- ಕೃಷ್ಣಮಿಶ್ರರೆಂಬ ಮಹಾಮೇಧಾವಿಯೊಬ್ಬರು ಬಂದು ವೇದಾಂತ ದೇಶಿಕರೊ ಡನೆ ಮೂರುದಿವಸಗಳುವಾದಮಾಡಿ ಪರಾಜಿತರಾಗಿ ತಾವು ಬರೆದ ಪ್ರಬೋಧಚ೦ ದೊದಯ ನಾಟಕವನ್ನು ನೋಡಬೇಕೆಂದು ಪ್ರಾರ್ಥಿಸಿದಂತೆಯೂ, ಅವರು ಅದನ್ನು ನೋಡಿ ಮನ ಒಪ್ಪದೆ ಸಂಕಲ್ಪ ಸೂರೋದಯವೆಂಬನಾಟಕವನ್ನು ಬರೆದು ಕೃಷ್ಣ ಮಿಶ್ರಲಗೆ ತೋರಿದಂತೆ ಗುರುಪರಂಪರಾ ಪ್ರಭಾವವು ಹೇಳುತ್ತದೆ, ಪ್ರಬೋಧಚಂದ್ರೋದಯನಾಟಕದಲ್ಲಿ ತಿರಿವನ, 'ರಾಜನ ಹೆಸರನ್ನು ಸೂತ್ರಧಾ ರನು ಕೊಂಡಾಡಿರುವನು. ಕೀರಿವರ್ಮನು ಕ್ರಿ ಶ. ೧ನೆಯ ಶತಮಾನಾಂತ್ಯದ ವನೆಂದು ಸ್ಪಷ್ಟ ಪಡುತ್ತದೆ. ಈ ವಿಚಾರವ SDತ್ರೆಯ ಸ್ಥಾಪಿಸುತ್ತದೆ, ಆಟ ? ರಿಂದ ಪ್ರಬೋಧಚಂದ್ರೋದಯಕಾರರೂ ತಿ?೬ವರ್ಮನೂ ಇಬ್ಬರ ಸಮ

  • ವಿಜಯನಗರದ ಕಟಿಣವು ಶ. ೧೩೩೯-೦೪ರಲ್ಲಿ

See South India and her Mahameden invaders by S. Krishnawamy Iyenger P. 154 | The Aravidu Dynasty of Vijayanagara P. 10. (34)