ಶಕ] ವಂಕಟನಾಥ ೩೯ ಎಂಬ ಸಂದೇಶವನ್ನು ಶ್ರೀರಾಮನಿಗೆ ಹೇಳುವನು. ಇನ್ನು ರಾಮನಿಗೆ ಸಾವ ಕಾಶವಿಲ್ಲ. ಸೀತೆಯು ಹೇಳಿಕಳುಹಿಸಿದಂತೆ ಒಂದು ತಿಂಗಳೊಳಗಾಗಿ ಸೈನ್ಯದೊಡನೆ ಲಂಕೆಗೆಹೋಗಿ ಸೀತೆಯನ್ನು ಬಿಡಿಸಿಕೊಂಡು ಬರಬೇಕು. ಒಂದು ದಿವಸದ ಸಾವಕಾಶವೆಂದರೂ ವಿಚಾರವು ವಿಪರ್ಯಾಸದಲ್ಲಿ ಪರಿಣಮಿಸಬಹುದಾದ ಸಂಭವ, ಇತ್ಯಾದಿ ಯೋಚನೆಗಳಲ್ಲಿ ಶ್ರೀರಾಮನು ಮಗ್ನನಾಗಿದ್ದಾಗ ಅನತಿದೂರದಲ್ಲಿರುವ ಪದ್ಮಕಾಸಾರದಲ್ಲಿ ವಿಹರಿಸುತ್ತಿರುವ ಹಂಸದಮೇಲೆ ದೃಷ್ಟಿಯುಬಿದ್ದು, ಸೀತೆಯ ನಡಿಗೆಯನ್ನು ಅನುಕರಿಸುವ ಅದರ ಗಂಭೀರ ಗಮನವನ್ನೂ, ಸೀತೆಯ ಶುಭ್ರವಾದ ಉಡಿಗೆಗಳನ್ನು ಹೋಲುವ ಅಥವಾ ಶುಭ ದುಕೂಲಗಳಂತಿರುವ ಪಕಧಾವಣ್ಯ ವನ್ನೂ, ಸೀತೆಯ ಕಾಲಂದಿಗೆಯ ರುಣತ್ಕಾರವನ್ನು ಹೋಲುವಂತಿರುವ ಧನಿ ಯನ್ನೂ ಕೇಳಿ, ನೋಡಿ ಸೀತೆಯನ್ನು ಜ್ಞಾಪಿಸಿಕೊಂಡು:- ತರ್ಸಿಸೀತಾಗತಿಮನುಗತೇ ತದುಕೂಲಾಂಕಮೂರ್ತೇ - ತನ್ಮಂಜೀರಪ್ರತಿಮನಿನದೇನನಿಷ್ಪಂದದ; ಧೀರಶೈವಲಯಮಗಮತ್ತuಯನ್ನು ಮುಹೂತ್ರಂ ಶಂಕೇತೀವ್ರಂಭವತಿಸಮಯೇ ಶಾಸನಂ ಮಾನಕೇತೋಃ || ಎಂಬಂತೆ ಮುಹೂರ್ತಕಾಲ ವಿರಹಸ್ಯಬ್ಬನಾಗಿದ್ದರೂ, ಧೀರಚೇತನನಾದ ಶ್ರೀರಾಮನು ಅಂತಹ ಚಿತ್ತವಿಭ್ರಮಕ್ಕೆ ಅವಕಾಶಕೊಡದೆ ಇರುವನು, ಮೇಘ ಸಂದೇಶದ ಯಕ್ಷನು ವರ್ಷಾಕಾಲದ ಮೇಘವನ್ನು ನೋಡಿದ ಕೂಡಲೇ ತನ್ನ ಪ್ರಿಯತಮೆಯನ್ನು ನೆನೆಸಿಕೊಂಡು ವಿರಹಾತಿರೇಕದಿಂದ ಮೈಮರೆತು ಅಧೀರನಾಗಿ ಹೋಗಿರುವನು, ಶ್ರೀರಾಮನು ಹನುಮನೊಡನೆ ಸಸೈನ್ಯನಾಗಿ ಸಮುದ್ರವನ್ನು ದಾಟಿ ಲಂಕೆಯನ್ನು ಮುತ್ತಿ ರಾಕ್ಷಸರನ್ನು ನಿರ್ಮೂಲಮಾಡಿ ಸೀತೆಯನ್ನು ಬಿಡಿಸಿ ಕೊಂಡು ಹೋಗುವುದಾಗಿ ಹೇಳಿಕಳುಹಿಸಿದ ಶ್ರೀರಾಮ ಸಂದೇಶವನ್ನೂ ಹೇಳಿ ಬಂದ ಆಂಜನೇಯನಿಗಿಂತಲೂ ಅನೇಕ ವಿಚಾರಗಳಲ್ಲಿ ಸೀತೆಯನ್ನು ಹೋಲುವು ದಾದ ಹಂಸವನ್ನು ಪ್ರೀತಿಸುವುದು ಸ್ವಾಭಾವಿಕವಾದುದಾಗಿಯೇ ಇದೆ. ಅಲ್ಲದೆ ಈ ಹಂಸವು ತನ್ನ ಸಂದೇಶವನ್ನು ಸೀತೆಯಬಳಿಗೆ ಹೋಗಿ ಹೇಳಬಲ್ಲುದೇ ಹೇಗೆಂಬ ವಿಚಾರದಲ್ಲಿ ಸಂಶಯಗೊಂಡವನಾಗದಿದ್ದುದರಿಂದಲೇ:- ವಿಶ್ಲೇಷಣಕ್ಷು ಭಿತಮನಸಾಂ ಮೇಘಶೈಲದ್ರು ಮಾದ್ ಯಾಚ್ಚಾನಂಭವತಿಕಿಮುತಕ್ಕಾಪಿಸಂವೇದನಾರ್ಹ || ಎಂದು ಹೇಳಿಕೊಂಡಿರುವನು. ಕಾಳಿದಾಸನು ನಿರ್ಜೀವವಸ್ತುವಾದ ಮೇಘ ಇನ್ನು ದೌತ್ಯಕ್ಕೆ ಪ್ರಾರ್ಥಿಸಿಕೊಂಡಿರುವಂತೆ ವಿರಹಸಂತಪ್ತನಾದ ಶ್ರೀರಾಮನು ರಾಮಾಯಣದಲ್ಲಿ ಪರ್ವತಗಳನ್ನೂ ಮರಗಳನ್ನೂ ಕುರಿತು ಪ್ರಾರ್ಥಿಸಿರುವಂತೆ ಕಂಡುಬರುವುದು.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೭
ಗೋಚರ