೨೮೨ ಸಂತಕವಿಚರಿತ [ಕ್ರಿ ಮಕ್ಕಳಿಗೆ ದುರ್ವಾರ್ಗಕ್ಕೆ ಹೋಗಕೂಡದೆಂದೂ, ಹಾಗೆ ಹೋದರೆ ಹಾನಿತಟ್ಟದೆ ಇರದೆಂದೂ ಬುದ್ಧಿವಾದವನ್ನು ಹೇಳುವಂತೆ ಶ್ರೀರಾಮನು ಹಂಸವನ್ನು ಕುರಿತು :- ಉಮೇಧಾಸ್ಕರಸಿಜನಾದ್ರಣಾಶಾನುನಾರೀ ಪರ್ಶ್ಯದೂರಾತಿ ಪ್ರಬಲಗರುತಾಂ ಪಕ್ಷಿಣಾಂದರ್ವಾ || ಎಂದು ಹೇಳಿಕಳುಹಿಸಿರುವನು. (ಇಲ್ಲಿ ಶ್ರೀರಾಮನಿಗೆ ತನ್ನ ಕಾರವು ಕೆಡು ವುದೆಂಬ ಭಯ, ಅಲ್ಲದೆ, ಅರಿಯದಸ್ಥಳಕ್ಕೆ ಕಳುಹಿಸಿದನೆಂಬ ಅಪವಾದ ಭಯ.) ಎಲೆ ! ಹಸನೆ ! ನೀನು ಮಲಯ ಪರ್ವತದಿಂದ ಹಾರಿಹೋಗುವಾಗ ಮಾರ್ಗದಲ್ಲಿ ಕಂಡುಬರುವ ವಿನೋದಗಳನ್ನು ನೋಡುತ್ತಾ ಹಳ್ಳಿಯಪಾಮರಿಯರು ( ಸಭೂ ಭಂಗೇಷ್ಯಧಿಕ ಸುಭಗೈರ್ನಿಶಿತಾಂಗ ಕಟಾಕ್ಷೆ ” “ ಭೂವಿಲಾಸಾನ ಭಿಜ್ಞೆ” “ಪ್ರೀತಿನ್ನಿಗೋರ್ಜನಪದವಧೂಲೋಚನೆ ಸೀಯಮಾನಃ' ಎಂಬಂತೆ ರೆಪ್ಪೆ ಮುಚ್ಚದೆ ನಿನ್ನನ್ನೇ ನೋಡುವರಾಗಿರಲು ಒಂದು ಕಡೆ ಆಂಧ್ರದೇಶ ಮತ್ತೊಂದುಕಡೆ ಕರ್ಣಾಟದೇಶ ಈ ಮಧ್ಯೆ ಹಾರಿಹೋಗುತ್ತಿರುವನಾಗಿ, ಪೈರುಸಜ್ಜೆ ಗಳನ್ನು ಕೆಡಿಸುವವಾದಪಕ್ಷಿಗಳನ್ನೂ, ಕೀಟಗಳನ್ನೂ ಓಡಿಸುವುದಕ್ಕಾಗಿ ಗದ್ದೆಗಳನ್ನು ಕಾಯುತ್ತ ಮಾಮರಗಳಡಿಯಲ್ಲಿ ಮಲಗಿ ಸುಖಸಾರವಶ್ಯದಿಂದ ಹಾಡುತ್ತಿರುವ ಹಳ್ಳಿಯ ಹುಡುಗಿಯರ ಗಾನವನ್ನು ಕೇಳುತ್ತ ಅಲ್ಲಿ ಕಾಣಬರುವ ತಿರುಪತಿಯನ್ನು ಸಾರ್ದು ಶೇಷಾದ್ರೀಶನಾದ ವೆಂಕಟೇಶ್ವರನನ್ನು ನಮಿಸಿ ಸ್ತುತಿಸಿ (ಹೊರಡುವಾಗ ಕುಲದೈವವನ್ನು ಸ್ತುತಿಸಿ ಕೈಗೊಂಡಕಾವು ಜಯಪ್ರದವಾಗಲೆಂದು ಪ್ರಾರ್ಥಿಸಿ ಪ್ರಯಾಣಮಾಡುವುದು ವಾಡಿಕೆ. ಹಾಗಲ್ಲದಿದ್ದರೆ ಕಾರೈಸಿದ್ದಿ ಯಾಗದಾಗಿ ಅವರ ನಂಬುಗೆ ) ದಕ್ಷಿಣಕ್ಕಿರುವ ಕಾಳಹಸ್ತೀಶ್ವರನ ಅರ್ಚನೆಗಾಗಿ ದಡದಲ್ಲಿ ಬೆಳೆದಿರುವ ಪರಿಮಳ ಪೂಗಳನ್ನೆತ್ತಿಕೊಂಡು ಹೋಗುವಂತೆ ಮಂದಗಮನದಿಂದ ಪ್ರವಹಿ ಸುತ್ತಿರುವ ಸುವರ್ಣ ನ.4ರೀನದಿಯ ಸಾಂದ್ರಪ್ರಳಿನ ಪ್ರದೇಶಗಳನ್ನು ನೋಡಿ ಆನಂದಿಸುತ್ತಾ ಆ ಮನೋಹರನೋಟದಲ್ಲಿಯೇ ಹೆಚ್ಚು ಹೊತ್ತು ಕಳೆಯದೆ (ಹಾಗೆ ಹೆಚ್ಚಾಗಿ ಹೊತ್ತು ಕಳೆಯುವುದಾದರೆ ತನ್ನ ಉದ್ದಿಶ್ಯಕಾರಕ್ಕೆ ಭಂಗ ಬರ ಬಹುದು. ಅಥವಾ ಆ ಸುಂದರನೋಟವನ್ನು ನೋಡುತ್ತ ಜಾಗ್ರತೆಯಾಗಿ ಹೊರಡಲನುವಾಗದಿರುವ ಅವನಿಗೆ ಕಾರ್ ಗೌರವವನ್ನು ಜ್ಞಾಪಿಸಿ) ಕೆಲವು ಕಾಲ ಅಥವಾ ಕೊಂಚ ಹೊತ್ತು ವಿಹರಿಸಿ ಅಲ್ಲಲ್ಲಿ ತಿರುಗಾಡುತ್ತಿರುವ ಕಿರಾತರಿಗೆಸಿಕ್ಕದೆ ಶೀಘ್ರವಾಗಿ ಮುಂದಕ್ಕೆ ಪ್ರಯಾಣಮಾಡುವನಾಗು. (ಹಾಗೆ ಅಲ್ಲಿಯೇ ಹೆಚ್ಚು ಹೊತ್ತು ವಿಹರಿಸುತ್ತಿರುವೆಯಾದರೆ ಕಿರಾತರ ಕೈಗೆ ಸಿಕ್ಕಿ ಪ್ರಾಣಾಪಾಯವು ಒದಗು ವುದಲ್ಲದೆ ತನ್ನ ಕೆಲಸವೂ ಕೈಗೂಡದೆ ಹೋಗುವುದಾದುದರಿಂದ ಎಚ್ಚರಿಕೆ ಯಾಗಿರು) ಈ ವಿಚಾರದಲ್ಲಿ ಕವಿಯು ಹೇಳಿರುವುದಾದ:-
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೦
ಗೋಚರ