ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸಂಸ್ಕೃತಕವಿಚರಿತ ಗೆಳತಿಯರಿಂದಲಂಕರಿಸಲ್ಪಟ್ಟ ಪರಿಮಳ ಪೂಗಳಿಂದಲಂಕೃತಳಾಗಿ ಹೋಗುತ್ತಿರುವ ರಮಣಿಯಂತೆ ಪ್ರವಹಿಸುತ್ತಿರುವ ಕಾವೇರಿಯನ್ನು ಸಂದರ್ಶಿಸಿ ಶ್ರೀರಂಗಕ್ಕೆ ಬಂದು ರಂಗನಾಥನ ದರ್ಶನವನ್ನು ಪಡೆದು ಅಲ್ಲಿಂದ ಪಾಂಡ್ಯದೇಶಕ್ಕೆ ಹೋದರೆ ಅಲ್ಲಿ ಕಾಣುವ ತಾಮ್ರಪರ್ಣಿಯಲ್ಲಿ ಸ್ನಾನಮಾಡಿ ಅದರ ಮಳಲೊಡ್ಡು ಗಳಲ್ಲಿ ಕೊಂಚ ವಿಶ್ರಾಂತಿಯನ್ನು ಹೊಂದುವನಾಗು. ಕಾಳಿದಾಸನು ಹೇಳುವ ಯಕನಿಗೆ, ತಾನು ಹೇಳುವ ಸ್ಥಳಗಳ ವಿಚಾರವು ಸಂಪೂರ್ಣವಾಗಿ ಗೊತ್ತಿದ್ದುದರಿಂದ ಅಲಕಾವತೀ ಪತನದ ಸೊಬಗು, ನಗರ ಸಾಗರ, ಹರ್ಮೋದ್ಯಾನ, ತಟಾಕ, ನಾಸಿಕ್ಪಾದಿಗಳನ್ನು ಬೇಕಾದುದಕ್ಕಿಂತಲೂ ಹೆಚ್ಚಾಗಿ ವರ್ಣಿಸಿರುವನು. ಆದರೆ ಶ್ರೀರಾಮನಿಗೆ ಲಂಕೆಯೆಂಬುದೊಂದು ಇರುವು ದೆಂದೂ ಅದು ರಾಕ್ಷಸರಿಂದಾವೃತವಾಗಿರುವುದೆಂದೂ ಹನುಮನಿಂದ ತಿಳಿಯ ಬಂದುದು ಹೊರ್ತು ಆ ವಿಚಾರವಾಗಿ ಹೆಚ್ಚಾಗಿ ತಿಳಿಯದು. ಲಂಕೆಯೆಂಬು ದೊಂದು ಪುನವಿರುವುದೆಂದೂ ಅಲ್ಲಿ ರಾವಣನೆಂಬ ರಾಕ್ಷಸನು ಆಳುತ್ತಿರುವ ನೆಂದೂ ಅವನು ಅಪ್ಪರೆಯರನ್ನೂ ಲೋಕಪಾಲಕರ ಹೆಂಗಳೆಯರಿಗೆ ತೊಂದರೆ ಕೊಡುತ್ತಿರುವನೆಂಬುದನ್ನು ಮಾತ್ರ ಇತರರಿಂದ ಕೇಳಿದ್ದನು. ಇದಂತಿರಲಿ, ಶಿಂಶುಪಾವೃಕ್ಷದಡಿಯಲ್ಲಿ ಕುಳಿತಿರುವ ಸೀತೆಯನ್ನು:- ಸಾಮೇದ ಶಫರನಯನಾ ಸನ್ನು ಭೂಸ್ಸು ಕೇಶೀ ಪತುಂಗಸ್ತನಭರನತಾತಪ್ರಜಾಂಬೂನದಾಭಾ || ಎಂದು ವರ್ಣಿಸಿ. ಇತ್ಯಾದಿ ಇದೇ ಸಮಾನಾರ್ಥಪದಯೋಜನದ ಶ್ಲೋಕವು ಮೇಘಸಂದೇಶ ದಲ್ಲಿ ಕಂಡುಬರುವುದು. ಅದು ಹೀಗಿರುವುದು, ತಶ್ಯಾಮಾಶಿಖರದಶನಾಪಕ್ಷ ಬಿಂಬಾಧರೋ ಸ್ತ್ರೀ - ಮಧೋಕ್ಷ ಮಾಚಕಿತಹರಿಪ್ರೇಕ್ಷಣಾ ನಿಮ್ಮ ನಾಭಿಃ || ಶೋಣೀಭಾರಾದಲಸಗಮನಾಸ್ಪೋಕ ನಮ್ಮಾಸನಾಭ್ಯಾಂ ಯಾತ್ರಾಸ್ತ ಯುವತಿವಿಷಯೇಸೃಷ್ಟಿ ರಾದ್ಯವಧಾತುಃ || ಎಲೆ! ಹಂಸ! ನೀನುಹೋಗಿ ಶಿಂಶುಪಾವೃಕ್ಷದಡಿಯಲ್ಲಿ ಕುಳಿತಿರುವ ಸೀತೆ ಯನ್ನು ನೋಡುವಾಗ ಅವಳು ಯಾವುದಾದರೊಂದು ಕಾವ್ಯವನ್ನು ಮಾಡುತ್ತಿರ ಬಹುದು, ಅಥವಾ ಕಾಳಿದಾಸನು ಹೇಳುವಂತೆ:- ಪ್ರಾಣೆ ತೇರಮಣವಿರಹ:ಷ್ಟಂಗನಾನಾ ವಿನೋದಾ… ಎಂಬಂತೆ ಆಚರಿಸುತ್ತಿರಬಹುದು. ಅಥವಾ ಎಲ್ಲಿಯೋ ದೂರದೇಶಕ್ಕೆ ಹೋಗಿ ಬಂದ ಪಕ್ಷಿಗಳನ್ನು ಕುರಿತು ಎಲ್ಲೆ! ವಿಹಂಗಗಳೇ! ನೀವು ಸಂಚರಿಸಿದ ಸ್ಥಳಗಳಲ್ಲಿ ನನ್ನ ರಾಮನನ್ನು ಕಾಣಿರಾ! ಕಾಣಿರಾ! ಎಂದು ಅಂಗಲಾಚಿ ಕೇಳುತ್ತಿರಬಹುದು