ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ [ಕ್ರಿಸ್ತ ವಿ ದ್ಯಾ ಭೂ ಹ ಣ ಇವನು ವಂಗದೇಶದವನು, ಚೈತನ್ಯನ ಶಿಷ್ಯನು ಕ್ರಿ. ಶ ೧೫ನೆಯ ಶತಮಾನ ದವನು, 'ಸಾಹಿತ್ಯ ಕೌಮುದೀ' ಎಂಬ ಆಲಂಕಾರ ಗ್ರಂಥವನ್ನು ಬರೆದಿರುವನು ಇದರಲ್ಲಿ ಅಚೈತನ್ಯನು, ಪ್ರತಾಪ ರುದ್ರ ಗಜಪತಿಯನ್ನು ತನ್ನ ಮತಕ್ಕೆ ಹೇಗೆ ಸೇರಿಸಿ ಕೊಂಡನೆಂಬುವದು ವರ್ಣಿತವಾಗಿರುವುದು, ಈ ದಾ ರ ಭಟ್ಟ

ಇವನು ಕಾಶ್ಯಪಗೋತ್ರಿಯನಾದ ಪವ್ಯ ಕನಮಗನು. ಕ್ರಿ. ಶ. ೧೫ ನೆಯ

ಶತಮಾನಾರಂಭದಲ್ಲಿ ಇವನು ವೃತರತ್ನಾಕರ ' ಎಂಬ ಗ್ರಂಥವನ್ನು ಬರೆದನು. ಇದರಲ್ಲಿ ೬ ಭಾಗಗಳಿದ್ದು ಛಂದೋಲಕ್ಷಣ, ಉತ್ಪತ್ತಿ ಪ್ರಯೋಗಾದಿಗಳನ್ನು ಹೇಳಿ ಮುಗಿಸಿರುವನು. ಇದಕ್ಕೆ ನಾರಾಯಣನೆಂಬವನು ವ್ಯಾಖ್ಯಾನವನ್ನು ಕ್ರಿ. ಶ. ೧೫೫೬ ರಲ್ಲಿ ಬರೆದನು, - ನಾ ನ ನ ಭ ಟ್ಟ ಬಾ ಣ * ಇವನು ಲಿಂಗ ದೇಶದಲ್ಲಿ ಹುಟ್ಟಿದವನು. ವತ್ಯಕುಲದವನು, ವೀರ ನಾರಾಯಣಾಪರಮನಾಯಕ ವೇಷಭೂಪಾಲನ ಆಶ್ರಿತನು. ಒಂದಾನೊಂದು ತಾಮ್ರದ ಶಾಸನದಲ್ಲಿ ಇವನ ಕಾಲವು ಶಕ ಸಂ. ೧೩೩೩ ಅಥವಾ ಕ್ರಿ. ೧೪೧೧ ಎಂದು ಹೇಳಲ್ಪಟ್ಟಿದೆ … ಶಬ್ದ ಚಂದ್ರಿಕಾ' ಎಂಬ ಗ್ರಂಥದಲ್ಲಿ ಬಾಣನೆಂಬ ಹೆಸರು ಕಂಡುಬರುವುದು. ಬಾಣ ಭಟ್ಟನನ್ನು ಮೀರಿಸಬೇಕೆಂದುಯೋಚಿಸಿ ವೇಮು ಭೂಪಾಲ ಚರಿತವನ್ನು ಬರೆದಿರಬಹುದಾಗಿ ತೋರುತ್ತದೆ. ಇವನು ವಾಮನ ಭಟ್ಟ ಬಾಣನೆಂದು ಖ್ಯಾತನಾಮುಕನಾಗಿದ್ದು ದಲ್ಲದೆ ಅಭಿನವ ಭಟ್ಟ ಬಾಣನೆಂದೂ ಕರೆಯಲ್ಪಡುತ್ತಿದ್ದು ದಾಗಿ ವೇಮಭೂಪಾಲ ಚರಿತದ:- ಭಾಣಾದ ಕವಯಃ ಕಾಣುಃ ಖಲು ಸರಸಗದ್ಯ ಸರಣೀಷು | ಇತಿಜಗಳಿರೂ ತವುಡ ವಾಮನಬುಣುಪರ್ಮಾ ವತ್ವ ಕುಲಃ ೧-೬

  • ಇವನ ಮೊದಲಿನ ಹೆಸರು ವಾಮನಭಟನೆಂದಿದ್ದು ಕಾಲಕ್ರಮದಲ್ಲಿ ಕಾದಂಬರೀಶೈಲಿ

ಯನ್ನು ಅನುಕರಿಸಿ ಬರೆದನಾದುದರಿಂದ ಬಾಣನೆಂಬ ಹೆಸರನ್ನು ಸೇರಿಸಿ ಹೆಸರನ್ನು ವಾಮನಭಟ್ಟ ಬಾಣನೆಂದು ಹೇಳಿಕೊಂಡಿರಬಹುದಾಗಿ ನನಗೆ ತೋರುತ್ತದೆ. 5 History of.classical Sanskrit Literature P. 104