ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ವಾಮನಭಟ್ಟ ಬಾಜಿ ೩೫ ವಿಶ್ವಾಧಿಕವಿಭವೋ ವೇಮಭೂಪಾಲಃ” ಎಂದಿರುವುದರಿಂದ ಗ್ರಂಥಕಾಲಕ್ಕೆ ರಾಜನು ಜೀವಿಸಿರಬೇಕಾಗಿತೋರುತ್ತದೆ. ಆದುದರಿಂದ ವೇಮಭೂಪಾಲನೂ ವಾಮನಭಟ್ಟ ಬಾಣನೂ ಸಮಕಾಲೀನರೆಂದಾದುದು, ವೇಮಭೂಪಾಲನು ಪೆದ್ದ ಕೋಮಟಿಯ ಮಗನು, ಮಾಚವೇಮನ ಸೋದರನ ಮುಮ್ಮಗನು, ಮಾಚವೇಮನು ಸಕಲ ಕಲಾಚತುರನಾಗಿದ್ದು ಅಮರುಶತಕಕ್ಕೆ “ಶೃಂಗಾರ ದೀಪಿಕಾ' ಎಂಬ ವ್ಯಾಖ್ಯಾನ ವನ್ನೂ, ಸಂಗೀತ ಚಿಂತಾಮಣಿಯೆಂಬುದನ್ನೂ ಬರೆದುದಾಗಿ ತಿಳಿಯಬರುತ್ತದೆ. ಇದರಿಂದ ಅಣ್ಣ ವೇಮನೂ, ವೇಮಭೂಪಾಲನೂ ಸಮಕಾಲೀನರೆಂದು ಹೇಳಿದುದ ರಿಂದ ಕ್ರಿ. ಶ. ೧೫ ನೆಯ ಶತಮಾನದ ಪೂರ್ವಾರ್ಧದವನೆಂದು ಸಿದ್ದವಾಗುತ್ತದೆ. ಇವನ ಗ್ರಂಥಗಳು- ೧. ವೇಮಭೂಪಾಲ ಚರಿತಂ ೨. ಪಾರ್ವತೀ ಪರಿಣಯ ೩. ನಳಾಭ್ಯುದಯ ೪. ಶೃಂಗಾರ ಭೂಷಣ 3. ರಮಾನಾಥ ೬. ಶಬ್ದ ರತ್ನಾಕರ ೭. ಶಬ್ದ ಚಂದ್ರಿಕಾ ನೇವಭೂಪಾಲಚರಿತಂ:- ಇದು ಗದ್ಯಕಾವ್ಯ, ಇದರಲ್ಲಿ ನಾಲ್ಕು ಉಚ್ಛಾಸಗಳಿರುವುವು. ಕವಿಯು ತನ್ನ ಆಶ್ರಯದಾತನಾದ ವೇಮಭೂಪಾಲನ ವಂಶಾವಳಿ, ದಿಗ್ವಿಜಯ ವಿಚಾರಗಳನ್ನು ಬಹು ಸೊಗಸಾಗಿ ಕೀರಿಸಿರುವನು. ಗದ್ಯಂಹೃದ್ಯಂ' ಎಂಬುದು ಇವನಲ್ಲಿ ಅಕ್ಷ ರಶಃ ನಿಜವಾಗಿದೆ. ಇವನ ಪದ್ಯಧೋರಣೆಯೂ ಬಹು ಲಲಿತ ಮಧುರವಾಗಿರುವು ದರಿಂದ (ಪದ್ಯಂವಧ್ಯಂ' ಎಂದು ಹೇಳಿರುವುದು ಗದ್ಯೋತ್ಕರ್ಷತೆಯನ್ನು ತೋರಿಸು ವುದಕ್ಕೆ ಮಾತ್ರ ಹೇಳಿರಬಹುದೆಂದು ತೋರುತ್ತದೆ. ಈ ವಿಚಾರದಲ್ಲಿ ಶೃಂಗಾರಭೂಷಣ ಮತ್ತು ಪಾರ್ವತೀಪರಿಣಯನಾಟಕ ಇವು ಸ್ಪಷ್ಟಗೊಳಿಸುವುವು. ಪ್ರತಿ ಉಚ್ಛಾಸದ ಕೊನೆಯಲ್ಲಿ ಇತಿ ಶ್ರೀಗದ್ಯ ಕವಿಸಾರ್ವಭೌಮಸ್ಯ ವತ್ಪಕುಲತಿಲಕಸ್ಯ ಮಹಾಕವೇ ರಭಿನವಭಟ್ಟ ಬಾಣ ಕೃತೌ” ಎಂದಿರುವುದು. ರೆಡ್ಡಿ ವೇಮ ಭೂಪಾಲನಿಗೆ ವೀರನಾರಾಯಣನೆಂದೂ, ಇವನ ಚರಿತೆಗೆ ವೀರನಾರಾಯಣ ಚರಿತವೆಂದೂ ಹೆಸರು, ಭಾಷೆಯಬಿಕ್ಕಟ್ಟು, ವಿಷಯದಸವಿಗಟ್ಟು, ರಸೌಚಿತ್ಯ, ಶೈಲಿಯಮಾರ್ದವ, ಕಲ್ಪನೆಯ ಪೂರ್ಣತೆ ಇವುಗಳನ್ನು ಇವನ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಇಷ್ಟಾದರೂ ಕಥಾವಸರದಲ್ಲಿ ವಿದೂಷಕನನ್ನು ರಾಕ್ಷಸನೋರ್ವನು ಹಿಡಿದುಕೊಂಡು ದಾಗಿಕಲ್ಪಿಸಿ ಹೇಳುವುದಕ್ಕಿಂತಲೂ ರಾಜನನ್ನು ಹುಡುಕಿಕೊಂಡು ಬಂದ ವಿದೂಷಕ