ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಳು ಶಿವರಪಂಡಿತ ೩೩೩ ಕೌತುಕದ ಕೊನೆಯ ೧೪-೧೫ನೆಯ ಎರಡು ಕೌತುಕಗಳಲ್ಲಿ ಮಾತ್ರ ಅಕ್ಷರ ಸ್ಟಾಲಿತ್ಯವು ಕಂಡುಬರುವುದರಿಂದ ಇವರಿವ್ವರೂ ಏಕವ್ಯಕ್ತಿಯೆಂದೂ, ಅವನೇ ಶ್ರೀವರಪಂಡಿತನೆಂದೂ, ಕೆಲವರು ಶ್ರೀವರಪ೦ಡಿತನಕಾಲದ ಜೋನರಾಜನೇ ಬೇರೆ, ಶ್ರೀಧರಪಂಡಿತನ ಕಾಲದ ಜೋನರಾಜನೇ ಬೇರೆ ಇವರಿಗೆ ಪರಸ್ಪರ ಸಂಬಂಧ ವಿಲ್ಲವೆನ್ನುವರು. ಮತ್ತೆ ಕೆಲವರು ಶ್ರೀಧರನೋ ಅಥವಾ ಶ್ರೀವರಪಂಡಿತನೋ ಜೋನರಾಜನ ಅಂತೇನಾಸಿಯೆಂದೂ, ಗ್ರಂಥ ನಿರ್ಮಾಣವು ೧೫೦೮ರಲ್ಲಿ ಆಗಿರ ಬೇಕಂದೂ ಹೇಳುವರು. ಬೇರೆ ಕೆಲವರು ಜೈನರಾಜ ತರಂಗಿಣಿ ಕಾರನು ಶ್ರೀವರ ಪಂಡಿತನೇ ಹೌದು, ಆದರೆ ಕಥಾ ಕೌತುಕವನ್ನು ಬರೆದವನು ಶ್ರೀವರಪಂಡಿತನೋ ಅಥವಾ ಶ್ರೀಧರನೋ ಆಗಿರಬೇಕೆಂದೂ, ಇವನು ರಾಜತರಂಗಿಣಿಯನ್ನು ಬರೆದ ಶ್ರೀವರಪಂಡಿತನಿಗೆ ಭಿನ್ನನೆಂತಲೂ ಶ್ರೀವರ ಅಥವಾ ಶ್ರೀಧರಕವಿಯು ವಿಸ, ೧೪೨೭ ಅಥವಾ ಕ್ರಿ.ಶ. ೧೩೭೦ ಎಂದೂ 'ವೈ ಕ್ರಮಶರದಿ ಚಂದ್ರಾಷ್ಟ (೮೧) ಪರಿಪೂರಿತೇ” ಎಂದು ಹೇಳಿರುವುದರಿಂದಲೂ, ಸಾಯಕಾಗ್ನಿ (೩೫) ಮಿತೇವರ್ಷ” ಎಂದು ಜೈನರಾಜತರಂಗಿಣಿಯಲ್ಲಿ ತಿಳಿಯಬರುವುದೆಂದೂ ಸಾಧಿಸುವರು. ಇವರ ಹೇಳಿಕೆ ಯನ್ನು ಸಮದೃಷ್ಟಿಯಿಂದ ನೋಡುವುದಾದರೆ ಹೀಗೆ ತಿಳಿಯಬರುವುದು, (0) ಯುಸೂಫ್ ಜುಲೇಖಾ ಗ್ರಂಥಕಾರನಾದ ಜಾಮಿಯು (ಮುಲ್ಲಾ ಜಾಮಿಾನೂರುರ್ದ್ದೀ) ಅಬ್ದುಲ್ ರಹಿಮಾನನು ಕ್ರಿ. ಶ. ೧೪೧೪-೧೪೯೨ರ ವರೆಗೆ ಜೀವಿಸಿದ್ದನು. (೨) ಶ್ರೀವರಪಂಡಿತನು ಜೊನರಾಜನ ಅನಂತರ ಕ್ರಿ. ಶ. ೧೪೭೭ರಲ್ಲಿ ಮೂರನೆಯ ಜೈನರಾಜತರಂಗಿಣಿಯನ್ನು ಬರೆದುದಾಗಿ ಹೇಳಿಕೊಂಡಿರುವನು:- (೩) “ ಶಿಷ್ಯಸ್ಯಜೋನರಾಜಸ್ಯಸೋಹಂ ಶೀವರಪಂಡಿತಃ ” ಎಂದು ಹೇಳಿರುವುದರಿಂದ ಕವಿಯು ಜೈನರಾಜನ ಶಿಷ್ಯನೆಂದೂ, ಜೈನಲಾ ಬೀನನು ಕಾಶ್ಮೀರದಲ್ಲಿ ಕ್ರಿ. ಶ. ೧೪೧೭-೧೪೬೭ರ ವರೆಗೆ ಆಳಿದನೆಂದೂ ಹೇಳಿರುವುದ ರಿಂದ ಈ ಮೂವರೂ ಸಮಕಾಲೀನರಾಗಿರಬೇಕೆಂದು ಬೋಧೆಯಾಗುವುದು, ಜೋನರಾಜನ ಮರಣಾನಂತರ ಅಂದರೆ ಕ್ರಿ. ಶ. ೧೪೬೭-೧೪೭೭ರ ಮಧ್ಯಕಾಲ ವಾಗಿರಬೇಕು. ಆ ವೇಳೆಗೆ ಜೈನಲಾದ್ದೀನನೂ, ಜೋನರಾಜನೂ ಈ ಲೋಕದಿಂದ ಮರೆಯಾಗಿರಬೇಕು. ಅನಂತರ ಎಂದರೆ ಕ್ರಿ. ಶ. ೧೪೭೭ರಲ್ಲಿ ಜೈನರಾಜತರಂಗಿಣಿ ಯನ್ನು ಮುಗಿಸಲು ಯತ್ನಿಸಿರಬೇಕೆಂದು ಬೋಧೆಯಾಗುವುದು. ಜೈನರಾಜ ತರಂಗಿಣಿಯನ್ನು ಮುಗಿಸಿದನಂತರ ಅಥವಾ ಮುಗಿಸುವ ವೇಳೆಗೆ ಜಾಮಿಯು ಬರೆದ ಯುಸೂಫ್ಜುಲೇಖೆಯರ ಪ್ರಣಯ ಕಥಾತರಂಗ ವಿಚಾರವು ಪ್ರತಿಯೊಬ್ಬ ರಿಂದಲೂ ಮಾನಿಸಲ್ಪಟ್ಟಿರಬೇಕು. ಇಂತಹ ಅಪೂರ್ವ ಕೌತುಕವಾಣಿಯನ್ನು