ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ - ಎಂಬ ಶ್ಲೋಕಗಳಿಂದ ಗೊತ್ತಾಗುವುದು. ೧೪೨೭ನೆಯ ಮಿತೇಶ್ಲೇ ೮೧ ಎಂಬ ಅಂಕಯೋಜನದಿಂದ ವಿಕ್ರಮ ಸಂ. ೧೫೦೮ ಅಥವಾ ಕ್ರಿ. ಶ. ೧೪೫೧ ಎಂದಾ ಗುವುದು. ( ಮೈಕ್ರಮೇಶರದಿ ವೈಶಾಖಮಾಸಿ ಪೂರ್ಣಿಮಾಯಾಮ, ಗ್ರಂಥಸ್ಯ ನಿರ್ಮಾಣಸಮಯೋಲ್ಲೇಖೋಪಲಾಭಾತ್ಕವಿವರಸ್ಯಾವ್ಯಯಮೇವ ಸತ್ತಾ ಸಮಯ” ಎಂದೂ, ಇದಲ್ಲದೆ ಕವಿಯೇ ಕ್ರಿ. ಶ. ೧೪೭೭ರಲ್ಲಿ ಎರಡನೆಯ ರಾಜತರಂಗಿಣಿಯನ್ನು ಬರೆದಿದ್ದ ಜೋನರಾಜನ ಅನಂತರ ಮೂರನೆಯ ಜೈನ ರಾಜತರಂಗಿಣಿಯನ್ನು ಬರೆದುದಾಗಿ:-- ತಸ್ಮಿನ್ಮಯಾಪಂಡಿತಜೋನಕಾಖ್ಯಂ ನತ್ಯಾಗುರುಂಪಂಡಿತ ಶ್ರೀವರೇಣ | ಭೂಪಾಲಪುಷ್ಪ ಸುರಲೋಕನಾಣ್ಯ ರಂಭೋsಧ್ರನಾಕಾಂಶ್ಚ ಮನೋಹರೋಯಂ || ೪೦ || ಈ ಶ್ಲೋಕದಿಂದ ತಿಳಿಯಬರುವುದಲ್ಲದೆ:- ಶ್ರೀಜೋನರಾಜವಿಬುಧಃ ಕುರ್ವನ್ ರಾಜತರಂಗಿಣೀಂ | ಸಾಯಕಾಗ್ನಿ (೩೮) ಮಿ ತೇವರ್ಷ ಶಿವಸಾಯುಜ್ಯಮಾಸದತ್ || ೬ || ಶಿಷ್ಯ… ಜೋನರಾಜಸ್ಯ ಸೋಹಂ ಶ್ರೀವರಪಂಡಿತಃ ರಾಜಾವಳೀಗ್ರಂಥಶೇಷಾಪೂರಣಂ ಕರ್ತುಮುದ್ಯತಃ || ೭ || ಎಂಬ ಜೈನರಾಜತರಂಗಿಣಿಯ ಪಥದತರಂಗ ಶ್ಲೋಕಗಳಿಂದ ಗೊತ್ತಾಗು ವುದು, ಆದುದರಿಂದ ಶ್ರೀವರಪಂಡಿತನ ಸಮಯವು ಜೋನರಾಜನ ಕಾಲವಾಗಿರ ಬೇಕು. ಜೈನಲಾದ್ದೀನನು ಕಾಶ್ಮೀರವನ್ನಾಳಿದುದು ಕ್ರಿ. ಶ ೧೪೧೭-೧೪೬೭ ರ ವರೆಗೆಂದು ಜೋನರಾಜನು ಸ್ಪಷ್ಟಪಡಿಸಿರುವುದರಿಂದ, ಜೈನಲಾದ್ದೀನ ಜೈನ ರಾಜ ಮತ್ತು ಶಿವರಪಂಡಿತ ಈ ಮೂವರೂ ಸಮಕಾಲೀನರೆಂದೂ ಶ್ರೀವರಪಂಡಿತ ವಿರಚಿತವಾದ ರಾಜತರಂಗಿಣಿಯಿಂದ ನಿಶ್ಚಯಿಸಬಹುದಾಗಿದೆ. ಎಂದರೆ ಈ ಶ್ರೀ ವರಪಂಡಿತನ ಕಾಲವು ಸುಮಾರು ಕ್ರಿ. ಶ. ೧೫ನೆಯ ಶತಮಾನದ ಉತ್ತ ರಾರ್ಧದಲ್ಲಿರಬೇಕೆಂದು ನಿರ್ಧರವಾದುದು, ಇವನು ಯವನ ಶಾಸ್ತ್ರ ಪಾರಂಗತನಾಗಿದ್ದನೆಂದು ಪ್ರತಿಕೌತುಕಾಂತ್ಯದಲ್ಲಿ ಹೇಳಲ್ಪಟ್ಟಿರುವ “ ಇತಿಯವನ ಶಾಸ್ತ್ರ ಪಾರಂಗಮ ಪಂಡಿತ ಶ್ರೀಧ(ವ)ರ ವಿರಚಿತೇ ಕಥಾಕೌತುಕೇ ” ಎಂಬುದರಿಂದ ತಿಳಿಯಬರುತ್ತದೆ, ಕೆಲವರು ಶ್ರೀವರಪಂಡಿತನೆಂಬ ಹೆಸರಲ್ಲವೆಂದೂ ಇವನ ಕಥಾಕೌತುಕದ ೧೪-೧೫ನೆಯ ಕಥಾಂತ್ಯದಲ್ಲಿ “ ಇತಿ......................ಕೌತುಕೇ ” ಎಂದಿರು ವುದರಿಂದ ಕವಿಯ ಹೆಸರು ಸಂದಿಗ್ಧವಾಗಿರುವುದೆಂದೂ, ಮತ್ತೆ ಕೆಲವರು ಈ ಕಥಾ