ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - ಸಂಸ್ಕೃತಕವಚರಿತ - - - • ಇದರಲ್ಲಿ ಲಕ್ಷ ಲಕ್ಷಣ ಸಮನ್ವಿತವಾದ ಒಂದು ನೂರು ಅಲಂಕಾರಗಳಿರು ವುವಾಗಿ:- ಇತ್ಥಂಶತಮಲಂಕಾರಾ ಲಕ್ಷಯಿತ್ಸಾನಿದರ್ಶಿತಾಃ ಪ್ರಾಚಾಮಾಧುನಿಕಾನಾಂಚ ಮತಾನ್ಯಾಲೋಗ್ಯ ಸರ್ವಶಃ || ಎಂದು ಹೇಳಿದೆ. ಇದಕ್ಕೆ 'ಒಧರಂಜನ' ಎಂಬ ವ್ಯಾಖ್ಯಾನವಿರುವದು. ಗ್ರಂಥಾಂತ್ಯದಲ್ಲಿ (ಇತಿ ಶ್ರೀಜಯದೇವ ಕವಿವಿರಚಿತೇ ಚಂದ್ರಾಲೋಕೇ........ ಎಂದು ಮುಗಿಲ್ಪಟ್ಟಿರುವುದು, ಮಹಾ ಕವಿಯಾದ ಅಪ್ಪಯ್ಯ ದೀಕ್ಷಿತನು ವ್ಯಾಖ್ಯಾನ ರೂಪವಾಗಿ ಕುವಲಯಾನಂದ ಎಂಬ ವ್ಯಾಖ್ಯಾನವನ್ನು ಬರೆದಿರುವನು. ಚಂ ದ್ರಾಲೋಕಕಾರನು ಸೀತಾವಿಹಾರ ' ಎಂಬ ಕಾವ್ಯವನ್ನು ಬರೆದಿರುವುದಾಗಿ ಹೇಳಿದೆ. ಗ್ರಂಥವುದೊರೆಯದು. ಪಕ್ಷಧರೀಯ:-ಇದು ನ್ಯಾಯಶಾಸ್ತ್ರ. ಇದನ್ನು ಬರೆದನಾದುದರಿಂದ ಲೋಕವು ಇವನನ್ನು ಪಕ್ಷಧರನೆಂದು ಕರೆದಿರಬಹುದಾಗಿ ತೋರುತ್ತದೆ. ರತಿಮಂಜರೀ:-ಇದು ನಾಯಿಕಾನಾಯಕ ಲಕ್ಷಣಗಳನ್ನು ತಿಳಿಯ ಹೇಳುವ ಶೃಂಗಾರ ಗ್ರಂಥ: ಪ್ರಸನ್ನರಾಘವ ನಾಟಕದಲ್ಲಿ ಶ್ರೀರಾಮ ಮತ್ತು ಜಾಮದಗ್ನರ ಭಾಷಣವು ಕಡುಚೆಲುವಾಗಿರುವುದು:- ಇದರ ಕೆಲವು ಶ್ಲೋಕಗಳು:- ದಶಕಂಠ (ರಾವಣ) ನ ಆತ್ಮ ಶ್ಲಾಘನೆಯು ಹೀಗಿರುವುದು! ಮಂಡೋದರೀಕುಟಿಲಕೋಮಲಕೇಶಭಾರ ಮಂದಾರದಾಮಮಕರಂದರ ಸಂಪಿಬಂತಃ ವೀಣಾನಿನಾದಮಧುರಧನಿ ಮುದಿರಂ ಮಧ್ಯೆಕ್ರಮಂ ಮಧುಕರು ಅಪಕೀರ್ತಯಂತಿ || ೧೬೧ ಮಂಡೋದರಿಯ ಕುಟಿಲ ಮತ್ತು ಕೊಮಲಗಳಾದ ಕೇಶಪಾಶಗಳಲ್ಲಿರತಕ್ಕೆ ಮಂದಾರ ಪುಷ್ಪಂಗಳಲ್ಲಿನ ಮಕರಂದವನ್ನು ಪಾನಮಾಡಿ ವೀಣೆಯ ಶಬ್ದ ದಂತೆ ಮಧುರಧ್ವನಿಯನ್ನು ಮಾಡುತ್ತಿರುವ ದುಂಬಿಗಳೂ ಸಹ ನನ್ನ ಪರಾಕ್ರಮವನ್ನು ಹೊಗಳುತ್ತವೆ. ವಾರ್ತಾಚಕಿತುಕಕರೀವಿಮಲಾಚ ವಿದ್ಯು ಲೋಕೋತ್ತರಃ ಪರಿಮಳ ಕುರಂಗನಾಭೀಃ ತೈಲಸ್ಯ ಬಿಂದುರಿನವಾರಿಣಿದುರ್ನಿವಾರ ಮೇತತ್ರಯ ಪ್ರಸರಸ್ವಯಮೇವಲೋಕೇ || ೨-೨