ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕು ಜಯದೇವ (೨) ಆಶ್ಚರ್ಯದಾಯಕವಾದ ವಾರ್ತೆಯೂ, ನಿಷ್ಕೃಷ್ಟ ಜ್ಞಾನವನ್ನು ಹೊಂದಿದ ವಿದ್ಯೆಯೂ, ಲೋಕೋತ್ತರವಾದ ಪರಿಮಳವನ್ನು ಬೀರುವ ಕಸ್ತೂರಿಯೂ ಸಹ ನೀರಿನಲ್ಲಿ ಎಣ್ಣೆಯನ್ನು ಹಾಕಿದರೆ ಅದು ಹೇಗೆ ಒಂದರಲ್ಲೊಂದು ಸೇರದೆ ಬೇರೆ ಬೇರೆಯಾಗುವುದೋ ಹಾಗೆ ಈ ಮೂರೂ ಸ್ವಯಮೇವಲೋಕದಲ್ಲಿ ಹರಡಿಕೊಳ್ಳು ತದೆ. ಕ್ರೀಡಾಭಗ್ನಗಿರೀಶಟುಪವಲಯಂ ಸೀತಾರ್ಪಿತಾಂವಕ್ಷಸಾ ಬಿಭಾಣಂಕಮಲಪ್ರಜಂಜನಿಗೃಹಂಶೃಂಗಾರವೀರಯೋ? ರಾಮಂಡವಾದವಾಂಛಿತಮುಖಂಭೂಮಿಾಭುಜಾಂಪಶ್ಯತಾಂ ಚೇತಃಕ್ರೋಧವಿಷಾದವಿಸ್ಮಯಮುದಾಮೂರ್ತಿಸ್ಟಮಾಲಿಂಗತಿ || ೩-೪೮ ಲೀಲಾಮಾತ್ರದಿಂದ ಹರಧನುವನ್ನು ಭಂಗಿಸಿ ಸೀತಾದೇವಿಯಿಂದ ಪ್ರೀತಿ ಪುರಸ್ಸರವಾಗಿ ಅರ್ಪಿಸಲ್ಪಟ್ಟ ಕಮಲಪುಷ್ಪಗಳ ಹಾರದಿಂದ ಕೂಡಿದ ವಕ್ಷಸ್ಸುಳ್ಳ ಶ್ರೀರಾಮಚಂದ್ರನನ್ನು ನೋಡಿ ಸಭೆಯಲ್ಲಿ ನೆರೆದಿದ್ದ ರಾಜಮಂಡಲಿಯ ಮನಸ್ಸಿ ನಲ್ಲಿ ಕೋಪ, ವಿಷಾದ, ವಿಸ್ಮಯ, ಸಂತೋಷಂಗಳ ತರಂಗಗಳು ಒಂದೊಂದಾಗಿ ಏಳುತ್ತಿದ್ದವು. ಸಭೆಯಲ್ಲಿ ನೆರೆದಿದ್ದ ಇತರರು:- ಹಾರಃಕಂರಂವಿಶಯದಿವಾತೀಕ್ಷ್ಯಧಾರ:ಕುರುರತಿ ಸ್ತ್ರೀಣಾಂನೇತ್ರಾಣ್ಯಧಿವಸತುನಃಕಜ್ಜಲಂವಾಜಲಂವಾ ಸಂಪಶ್ಯಾಮೋದ್ರ ತಮಿಹಸುಖಂಪ್ರೇತಭರ್ತುರ್ಮುಖಂವಾ - ಯದ್ವಾತದ್ವಾ ಭವತುನವಯಂ ಬ್ರಾಹಣೇಷುಪ್ರವೀರಾಃ || ೪-೨೨ ಜಯಿಸಿದ ಪಕ್ಷದಲ್ಲಿ ಹಾರವಾಗಲಿ ಸೊತರೆ ಕೊಡಲಿಯಾಗಲಿ ಕಂಠವನ್ನು ಪ್ರವೇಶಿಸಲಿ, ಗೆದ್ದರೆ ಸ್ತ್ರೀಯರು ಉಪಯೋಗಿಸುವ ಕಜ್ಜಲ (ಅಲಂಕಾರಕ್ಕಾಗಿ ಉಪಯೋಗಿಸುವ) ಕಪ್ಪಾಗಲಿ ಸೋತರೆ ಕಣ್ಣೀರಾಗಲಿ, ಗೆದ್ದರೆ ಸುಖವನ್ನು ಹೊಂದೋಣ, ಇಲ್ಲದಿದ್ದರೆ ಯಮನ ಮುಖವನ್ನಾದರೂ ನೋಡೋಣ ನಾವೇನು ಬ್ರಾಹ್ಮಣಶ್ರೇಷ್ಠ ರೂ ಅಲ್ಲ, ಅಥವಾ ವೀರರೂ ಅಲ್ಲ, ಆದುದರಿಂದ ಹಾಗೋ ಹೀಗೋ ಹೇಗಾದರೂ ಆಗಿಹೋಗಲಿ. ಅ ಪ್ಪಯ್ಯ ದೀ *ತ ಕಾಂಚೀನಗರದ ಸಮೀಪದಲ್ಲಿರುವ ಅಡಯಪಲಂ… ಎಂಬ ಗ್ರಾಮವು ಈತನ ಜನ್ಮಭೂಮಿ, ಭರದ್ವಾಜಗೋತ್ರದವನು. ಇವನ ಪಿತಾಮಹನ ಹೆಸರು ಆಚಾರದಿಕ್ಷಿತರೆಂದು, ಇವರಿಗೆ ವಕ್ಷಸ್ಥಲಾಚಾರ್ ದೀಕ್ಷಿತರೆಂಬ ಹೆಸರೂ ಇದ್ದಿತು. _… ಈ ಗ್ರಾಮವು ಆರಣಿಯಿಂದ ೫ ಮೈಲಿ ಕಾಂಚೀಪುರಕ್ಕೆ ೨೫ ಮೈಲಿ ದೂರದಲ್ಲಿರುವುದು