ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ಅಪ್ಪಯ್ಯ ದೀಕ್ಷಿತ ೩೪೩ ರಾಜ್ಯಗಳು ವಿಜಯನಗರದ ಅರಸರ ಆಜ್ಞಾಬದ್ಧವಾಗಿದ್ದವು. ತುಂಗಭದ್ರೆಯ ಉತ್ತ ರಕ್ಕೆ ತುರುಕರ ಏಳಿಗೆಗೆ ಅವಕಾಶ ಕೊಡದಂತೆ ಹಿಮ್ಮೆಟ್ಟಿಸಲ್ಪಟ್ಟಿದ್ದಿತು. ಇಂತಹ ಅಗಾಧ ಸಾಮ್ರಾಜ್ಯಶಾಸನ ಮತ್ತು ಶಾಂತಿಗಾಗಿ ಪದೇ ಪದೇ ಯುದ್ಧಗಳು ಜರು ಗುತ್ತಿದ್ದುದು ಅಚ್ಚರಿಯಲ್ಲ. ಹೊರಗಣ ರಾಜರ ಉಪಟಳವು ಇಲ್ಲದೇ ಇದ್ದರೂ ವಿಜಯನಗರಕ್ಕೆ ಸೇರಿದ ಸಾಮಂತರಾಜರಲ್ಲಿ ಪರಸ್ಪರ ವೈಶಮ್ಯವೂ ಕಲಹವೂ ಆಂಗಿದಾಗ್ಯ ನಡೆಯುತ್ತಲಿದ್ದವು. ಕ್ರಿ. ಶ. ೧೬ನೆಯ ಶತಮಾನಾರಂಭದಲ್ಲಿ ತುಳುವ ವಂಶವು ಉಚ್ಛಾಯಗೊಂಡಿತ್ತು. ನರಸನಾಯಕನ ಮಗ ನರಸಿಂಹನು ಸಾಳ. ವಂಶದ ವೀರನರಸಿಂಹನನ್ನು ಪದಚ್ಯುತನನ್ನಾಗಿ ಮಾಡಿ ಕ್ರಿ.ಶ. ೧೫೦೫ರಲ್ಲಿ ವಿಜಯ ನಗರದ ಸಿಂಹಾಸನವನ್ನೇರಿದನು. ಅನಂತರ ಇವನ ತಮ್ಮ ಕೃಷ್ಣದೇವರಾಯನು ಕ್ರಿ. ಶ ೧೫೦೯ರಲ್ಲಿ ಸಿಂಹಾಸನಕ್ಕೆ ಬಂದನು. ಇವನು ಕ್ರಿ. ಶ. ೧೫೨೮ರ ವರೆಗೂ ಆಳಿ ಮುಕ್ತನಾದನು. ಕ್ರಿ. ಶ. ೧೫೦೯-೧೫೨೮ರ ಮಧ್ಯಕಾಲದಲ್ಲಿ ವಿಜಯನಗ ರವು ಅತ್ಯಂತೋಚ್ಚಾಯ ದೆಸೆಯಲ್ಲಿದ್ದಿತು. ಈ ಕಾಲದಲ್ಲಿಯೇ ಸಂಸ್ಕೃತಾಂಧ, ಗ್ರಂಥಗಳು ಉತ್ತೇಜನಗೊಂಡವು. ಅನಂತರ ಇವನ ತಮ್ಮ ಅಚ್ಯುತರಾಯನು ಕ್ರಿ. ಶ. ೧೫೨೮ರಿಂದ ೧೫೪೨ರವರೆಗೆ ಆಳಿದನು. ಅನಂತರ ಇವನ ಅಣ್ಣನ ಮಗ ನಾದ ಸದಾಶಿವರಾಯನು ಕ್ರಿ. ಶ. ೧೫೪೨-೧೫೬೭ರವರೆಗೆ ರಾಜನೆನಿಸಿಕೊಂಡಿ ದ್ದನು. ಸದಾಶಿವರಾಯನಿಗೆ ಸಿಂಹಾಸನವು ದೊರೆತಾಗ ಇನ್ನೂ ಸಣ್ಣ ಹುಡುಗ ನಾಗಿದ್ದನು. ಕರ್ಣಾಟಕರಾಜಗಲ್ಲಿ ರಾಮರಾಜನೆಂಬುವನು ಗತಿಸಿದಕೃಷ್ಣ ದೇವರಾ ಯನ ಅಳಿಯನಾಗಿದ್ದು ವಿಜಯನಗರದ ಸಿಂಹಾಸನವನ್ನು ಸದಾಶಿವನಿಗೆ ದೊರೆಕಿಸಿ ಕೊಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿಕೊಂಡಿದ್ದನು. ಸದಾಶಿವನ ಚಿಕ್ಕ ತನದಲ್ಲಿ ರಾ?ನಿಗೆ ಪ್ರತಿನಿಧಿಯಾಗಿ (Resent) ರಾಜ್ಯಭಾರವನ್ನು ಮಾಡು ತಿದ್ದನು. ಕಾಲ ಕ್ರಮದಲ್ಲಿ ಸದಾಶಿವನು ದೊಡ್ಡವನಾದರೂ ರಾಜ್ಯಸೂತ್ರವನ್ನು ನಡೆಯಿಸಲು ಅಶಕ್ತನಾಗಿದ್ದು ದರಿಂದ ರಾಜ್ಯಭಾರವೆಲ್ಲವೂ ರಾಮರಾಜನ ಕೈಸೇರಿ ದುದು, ಕ್ರಿ. ಶ. ೧೫೬೫ರಲ್ಲಿನ ನಡೆದ ತಾಳಿಕೋಟೆ ಅಥವಾ ಪ್ರೊ|| ಹೀರಾಸದ ಕರೆಯುವ ರಾಕ್ಷಸತಗಡಿ' ಕಾಳಗದಲ್ಲಿ ರಾಮರಾಜನು ಬಲಿಯಾದನು, ಈ ಕಾಳಗವು ವಿಜಯನಗರದ ಅವನತಿಗೆ ಕಾರಣವಾದುದು, ಸಮಯವನ್ನು ಕಾಯು ತಿದ್ದ ತುರುಕರಿಂದ ವಿಜಯನಗರವು ಕ್ಷಣಾರ್ಧದಲ್ಲಿ ಮಣ್ಣು ಪಾಲಾದುದು. ಸದಾಶಿವನು ಕ್ರಿ. ಶ. ೧೫೬೭ರಲ್ಲಿ ಮೃತನಾದಕೂಡಲೇ ರಾಮರಾಜನ ತಮ್ಮನಾದ ತಿರುಮಲರಾಯನು ತಾನೇ ದೊರೆಯೆಂದು ಹೇಳಿ ಸಿಂಹಾಸನವನ್ನು ಹತ್ತಿದನು, ಇಲ್ಲಿಂದಮುಂದೆ ಪೆನಗೊಂಡೆ ಅಥವಾ ಚಂದ್ರಗಿರಿಯು ರಾಜಧಾನಿಯಾದುದು. ತಿರುಮಲರಾಯನ ಸಿಂಹಾಸನಾರೋಹಣವು ತುಳುವ ಸಂತಾನದಿಂದ ಆರವೀಡು ವಂಶಕ್ಕೆ.ಮೂಲವಾದುದು. ಕ್ರಿ. ಶ. ೧೫೭೪ರಲ್ಲಿ ತಿರುಮಲರಾಯನಮಗ ಶ್ರೀರಂಗ