ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಟ್ಯೂಜೀ ದೀಕ್ಷಿತ M ದೀಕ್ಷಿತನಕಾಲವು ೧೪೭೫ +೫೬=೧೫೩೧ ಎಂದರೆ ಕ್ರಿ. ಶ. ೧೬ನೆಯ ಶತಮಾನದ ವನೆಂಬದು ಖಂಡಿತವಾಗುತ್ತದೆ. ಪ್ರೊ|| ಮಾಕಡಾನಲ್ಲರು ಭಟ್ಟೋಜಿ ದೀಕ್ಷಿತನ ಕಲ ಅಥವಾ ಸಿದ್ಧಾಂ ತಕೌಮುದಿಯನ್ನು ಬರೆದುದು ಕ್ರಿ. ಶ. ೧೭ನೆಯ ಶತಮಾನ ಎಂದಿರುವುದು ಹೊರ್ತು ಹೇಗೆಂಬುದನ್ನು ಸಾಧಿಸಿರುವುದಿಲ್ಲ ಗ್ರಂಥ-ಇವನು ಕಾಲಕ್ರಮದಲ್ಲಿ೧೨೦೦೦ ಶ್ಲೋಕ ಪರಿಮಿತಿಯುಳ್ಳ ಒಂದು ವ್ಯಾಕರಣ ಗ್ರಂಥವನ್ನು ಬರೆದು ಅದನ್ನು ಸಿದ್ದಾಂತ ಕೌಮುದೀ' ಎಂದು ಕರೆದನು. ಕೊನೆಗೆ ಕಾಶಿಯಲ್ಲಿ ವೇದಾಂತಕಾಲಕ್ಷೇಪವನ್ನು ಮಾಡುತ್ತಿದ್ದು ತನ್ನ ೨೬ ನೆಯ ವಯಸ್ಸಿನಲ್ಲಿ, ಗತಾಯುವಾದನು * ವರದ ರಾಜನೆಂಬವನು ಸಿದ್ದಾಂತ ಕೌಮುದಿಯನ್ನು ಸಂಕ್ಷೇಪಿಸಿ ಬರೆದ ಅದನ್ನು ಲಘುಕೌಮುದೀ ಎಂದು ಕರೆದಿರುವನು ಪಂಡಿತರನೇಕರು ಪೂರ್ವಪಾಮಾಂಸಾ ಶಾಸ್ತ್ರದ ಮೇಲೆ ಬರೆಯಲ್ಪಟ್ಟಿರುವ ತಂತ್ರಸಿದ್ಧಾಂತದೀಪಿಕಾ ಎಂಬ ಗ್ರಂಥವನ್ನು ಮಹಾವೈಯಾಕರಣನಾದ ಭಟ್ಯೂಜೀದೀಕ್ಷಿತನು ಬರೆದುದಾಗಿ ಹೇಳುವರು. ಹಾಗೆ ಹೇಳುವುದಕ್ಕೆ ಜನಜನಿತ ಕಥೆಯೊಂದಿರುವುದು, ನೂರಾರು ಗ್ರಂಥಗಳನ್ನು ಬರೆದು ಮಹಾಪ್ರಸಿದ್ಧನಾದ ಅಪ್ಪಯ್ಯ ದೀಕ್ಷಿತನು ಚಿದಂಬರದ ಬಳಿಯಲ್ಲಿದ್ದಾಗ ದಕ್ಷಿಣ ಇಂಡಿಯಾಕ್ಕೆ ಯಾತ್ರಾರ್ಥಿಯಾಗಿ ಬಂದ ಭಟ್ಕಜಿದೀಕ್ಷಿತನು ಅಪ್ಪಯ್ಯ ದೀಕ್ಷಿತರ ಬಳಿಗೆ ಬಂದು ಪೂರ್ವಮೀಮಾಂಸ ಉತ್ತರಮೂಾಮಾಂಸಾ ಶಾಸ್ತ್ರಗಳನ್ನು ಹೇಳಿಕೊಡಬೇಕೆಂದು ಪ್ರಾರ್ಥಿಸಲು ದಿಕ್ಷಿ ತನು ಹಾಗೆ ಪಾಠಹೇಳಿ ಭಟ್ಯೂಜಿಯು ಹೊರಡುವಾಗ ಪೂರ್ವ ಮತ್ತು ಉತ್ತರ ಮಿಮಾಂಸಾ ಶಾಸ್ತ್ರಗಳ ಮೇಲೆ ಯಾವುದಾದರೊಂದು ಗ್ರಂಥವನ್ನು ಬರೆಯ ಬೇಕೆಂದು ಹೇಳಿದುದಕ್ಕೆ ಸಮ್ಮತಿಸಿ ಭಟ್ಟೋಜಿಯು ಪೂರ್ವಮೀಮಾಂಸಾಶಾಸ್ತ್ರದ ಮೇಲೆ ತಂತ್ರಸಿದ್ದಾಂತದೀಪಿಕಾ ಎಂಬುದನ್ನೂ ಉತ್ತರಮಿಮಾಂಸಾಶಾಸ್ತ್ರದಮೇಲೆ ತ,ಕೌಸ್ತುಭವೆಂಬುದನ್ನೂ ಬರೆದುದಾಗಿಯೂ ಹೇಳಿದೆ. ತಂತ್ರಸಿದ್ಧಾಂತದೀಪಿಕಾ ರಂಭದಲ್ಲಿ ಅಪ್ಪಯ್ಯ ದೀಕ್ಷಿತೇಂದ್ರನನ್ನು ಕೊಂಡಾಡಿರುವುದು ಕಂಡುಬರುತ್ತದೆ. ಅಪ್ಪಯ್ಯ ದೀಕ್ಷಿತೇಂದ್ರಾನಶೇಷವಿದ್ಯಾ ಗುರೂನಹಂ ವಂದೇ ಯತ್ಯ ತಿಬೋಧಿ ಬೋಧೆ ವಿದ್ಯದವಿದ್ದ ದ್ವಿಭಾಜಪಾಧೀ || $ History of sanskrit Literature P 432.

  • DekkanPoets P. 27-28.

↑ Introduction to ಶಿವಲೀಲಾರ್ಣವ P. 5-7.