ಸಂಸ್ಕೃತಕವಚರಿತ ಗಳು. ಕುವಲಯಾನಂದ, ಚಿತ್ರವಿಮಾಂಸಾ, ವೃತ್ತಿವಾರ್ತಿಕಾ ಇವುಮೂರೂ ಅಲಂಕಾರಗ್ರಂಥಗಳು, ವೇದಾಂತದೇಶಿಕನ ಯಾದವಾಭ್ಯುದಯಕ್ಕೆ ವ್ಯಾಖ್ಯಾನ ವನ್ನು ಬರೆದಿರುವುದಲ್ಲದೆ, ನಾದುಕಾಸಹಸ್ರಕ್ಕೂ ವ್ಯಾಖ್ಯಾವನ್ನು ಬರೆದಿರುವುದಾಗಿ ತ್ಯಾಗರಾಜವಿಜಯವು ಹೇಳುತ್ತದೆ. ಆದರೆ ವ್ಯಾಖ್ಯಾನವನ್ನು ಉಪಲಬ್ದವಿಲ್ಲ.* ದೀಕ್ಷಿತನು ಯಾದವಾಭ್ಯುದಯದ:- ಅತಿಯಜೇನ ನಿಜಾಂ ಯದಿ ದೇವತಾ ಮುಭಯತತ್ತ್ವವನೇ ಜುಷತೇsಘಂ ತಿಭೋತ್ಸವ ಸದೈವತಕಾ ವಯಂ ನವತಾನವತಾ ಕಿಮಹಿದ್ರುಹಾ|| ೬.೪. ಎಂಬ ಶ್ಲೋಕವನ್ನು ಕುವಲಯಾನಂದದಲ್ಲಿ ಪರಿಕರಾಲಂಕಾರಕ್ಕೆ ಉದಾ ಹರಿಸಿಕೊಂಡಿರುವನು. # ಲಕ್ಷಣರತ್ನಾವಳಿ ಎಂಬುದು ಇವನು ಬರೆದಿರುವ ಮೂರನೆಯಲಕ್ಷಣಗ್ರಂಥ. ಇದು ರೂಪಕಲ ಕ್ಷಣಾದಿಗಳನ್ನು ತಿಳಿಸುವುದು. ವಿಧಿರಸಾಯನವು ವಿವಿಧ ವಿಧಿಗಳನ್ನು ಹೇಳುವುದು, ನಕ್ಷತ್ರವಾದಾವಳಿಯು ವ್ಯಾಕರಣಗ್ರಂಥ, ರಾಮಾಯಣ ತಾತ್ಪಯ್ಯಸಂಗ್ರಹ ಮತ್ತು ಮಹಾಭಾರತ ತಾತ್ಪಯ್ಯಸಂಗ್ರಹ ಇವೆರಡೂಇತಿಹಾಸಗಳು ಶಿವಸರ್ವೊತ್ತಮನೆಂದು ಹೇಳುವುವಾಗಿವೆ, - ಭ ಟ್ಯೂ ಜಿ ದಿ ಕಿತ ಇವನು ಮಹಾರಾಷ್ಟ್ರ, ದೇಶದ ಬ್ರಾಹ್ಮಣನು ಎಂಬುದು ಹೆಸರಿನಿಂದ ಗೊತ್ತುಮಾಡಬಹುದಾಗಿದೆ. ಇವನ ಮಾತಾಪಿತೃಗಳಾರೆಂಬುದು ತಿಳಿಯದು ಇವನು ಅರ್ಚಕರ ಮನೆತನಕ್ಕೆ ಸೇರಿದವನು. ವಿದ್ಯಾಭ್ಯಾಸದ ಸಲುವಾಗಿ ತನ್ನ ಊರನ್ನು ಬಿಟ್ಟು ಕಾಶಿಗೆ ಹೋಗಿ ವೇದಾಂತಶಾಸ್ತ್ರವನ್ನೋದಿದನು. ಕಾಲ:-ಈತನು ಜನ್ಮ ಸಮಯವು ಕ್ರಿ ಶ ೧೪೭೫ ಎಂದು ತೃ ಎ೦ಬಕ ಗುರುನಾಥ ಕಾಳೆಯವರು ಹೇಳುವರುಇದು ನಿಜವೆನ್ನುವುದಾದರೆಭ ಟ್ರೋಜಿ Preface to ಯಾದವಾಭ್ಯುದಯ by A. V. Gopalacharya P. 29 2nd Vol Vanivilas Edition. ಕುವಲಯಾನಂದ , 73 Nirnaya Sagar Edition. 3 Descriptive Catalogue of the Sanskrit Manuscripts in Saraswathi Mahal Library Tanjore Vol. IX Introduction P. 35.
- ಸಂಸ್ಕೃತ ಕವಿಚರಿತ, P 40.