೨೨ ಸಂಸ್ಕೃತಕವಿಚರಿತೆ [+.ಕ ಏಡಂತೆ ... ಶ್ರೀ ಅಸ್ತಾವಲಂಬಿರವಿಬಿಂಬತಯೋದಯಾದ್ರಿ ಚೂ ದೋಷ ಕಲಚಂದ್ರ ತಯಾ ಚ ಸಾಯಂ | ಸಂಧ್ಯಾ ಪ್ರವೃತ್ತಹರವಾದ್ಯಗೃಹೀತಕಾಂಸ್ಯ. ತಾಲಯೇವ ಸವಲತ ನಾಕಲಕ್ಷ್ಮೀಃ || -ಹರವಿಜಯ ೧೯-೫ ಆಸ್ತಾದ್ರಿಯನ್ನ ತರುತ್ತಿರುವ ಸೂರ್ಯನನ್ನೂ ಪೂರ್ವಾದ್ರಿಯಲ್ಲಿ ಅವತರಿ ಸುತ್ತಿರುವ ಚಂದ್ರನನ್ನೂ ನೋಡಿದರೆ ನಾಗಲಕ್ಷ್ಮಿಯು ಸಂಧ್ಯಾ ಸಮಯದ ಪರ ಶಿವನ ತಾಂಡವ ಸಮಯದಲ್ಲಿನ ವಾದ್ಯಗಳಲ್ಲಿ ತಾನೂ ಭಾಗಿಯಾಗಿರಬೇಕೆಂದು ಆಶಿಸಿ ಸೂರ್ಯಚಂದ್ರರೆಂಬ ತಾಳಗಳನ್ನು ಹಿಡಿದು ನಿಂತಿರುವಂತೆ ಕಾಣುವುದು.) ಇವಲ್ಲದೆ ಇವನಿಗೆ ' ವಾಗಿಶ್ವರಾಂಕ ' ( ವಿದ್ಯಾಧಿಪತಿ ” ಎಂಬ ಉಪನಾಮ ಗಳಿದ್ದುವಾಗಿ, CC ಇತಿಶ್ರೀ ಬಾಲಬೃಹಸ್ಪತ್ಯನುಜೀವಿನೀ ವಾಗೀಶ್ವರಾಂಕಸ್ಯ ವಿದ್ಯಾ ಧಿಪತ್ಯಪರನಾನ್ನೋ ಮಹಾಕವೆ' ರಾಜಾನಕಶ್ರೀರತ್ನಾಕರಸ್ಯಕೃತೇ” ಎಂದು ಕವಿಯು ಪ್ರತಿಸರ್ಗಾಂತ್ಯದಲ್ಲಿ ಹೇಳಿಕೊಂಡಿರುವುದರಿಂದ ಗೊತ್ತಾಗು ವದು. ಇವನ ಆಶ್ರಯದಾತನಾದ ಚಿಪ್ಪಟಜಯಾಪೀಡನಿಗೆ “ ಬೃಹಸ್ಪತಿ ” - ಬಾಲಬೃಹಸ್ಪತಿ' ಎ೦ಬ ಹೆಸರುಗಳು ಇದ್ದು ವಾಗಿ ರಾಜತರಂಗಿಣಿ ಯಿಂದ ತಿಳಿದುಬರುತ್ತದೆ. ಕಾಲ:-(೧) ಇವನು ಕ್ರಿ. ಶ. ೮೫೫-೮೮೪ರಲ್ಲಿ ಕಾಶ್ಮೀರದಲ್ಲಿ ಆಳಿದ ಅವಂತಿವರ್ಮನ ಕಾಲದವನೆಂದು.- ಮುಕ್ತಾಕಣಶಿವಾ ಮಾ ಕವಿರಾನಂ ದವರ್ಧನಃ || ಪ್ರಧಾಂ ರತ್ನಾ ಕರಾ ಗಾಾಮ್ರಾಜ್ಯವಂತಿವರ್ಮಣಃ || ಎಂದು ಕಲ್ಯಣನು ರಾಜತರಂಗಿಣಿಯಲ್ಲಿ ಬರೆದುಕೊಂಡಿರುವನು. + ಇದರಿಂದ ರತ್ನಾಕರನು ಕ್ರಿ. ಶ. ೯ನೆಯ ಶತಮಾನದ ಉತ್ತರಾರ್ಧದಲ್ಲಿದ್ದನೆಂಬುದು ಸ್ಪಷ್ಟ ವಾಗುವುದು,
- ರಾಜತರಂಗಿಣೀ ೪-೬೮೦.
↑ Ibid P. 5-25.