ಶಕ] ಶಂಕುಕ - - ನೆನ್ನ ಬೇಕಾಗುವುದು, ಶಂಕುಕರೆಂಬುವರು ಸಂಸ್ಕೃತಸಾಹಿತ್ಯದಲ್ಲಿ ಮೂರು ಜನರು ದೊರೆಯುವರು.- (೧) ಶಾರ್ಜಧರಪದ್ಧತಿಯಲ್ಲಿ ದುರ್ವಾರಃ ಸ್ಮರಮಾರ್ಗಣಾಃ . . . ಸರ್ವೆಗ್ರ ಯೋ ದುಸ್ಸಹುಃ | ಎಂಬ ಶ್ಲೋಕವನ್ನು ಬರೆದು “ ಮಯೂರಸೂನೋ ಶಂಕುಕಸ್ಯ” ಎಂದು ಹೇಳಿಕೊಂಡಿರುವನೊಬ್ಬ. (೨) ಭುವನಾಭ್ಯುದಯಕಾವ್ಯವನ್ನು ಬರೆದ ಶಂಕುಕನೊಬ್ಬ, (೩) ಜ್ಯೋತಿರ್ವಿದಾಭರಣವೆಂಬ ಜ್ಯೋತಿಷಗ್ರಂಥದಲ್ಲಿ “ ಧನ್ವಂತರಿ ಕಪಣಕಾಮರಸಿಂಹ ಶಂಕು” ಎಂದು ಹೇಳಿರುವ ವಿಕ್ರಮಾರ್ಕ (?) ನ ಸಭೆಯ ನವರತ್ನಗಳಲ್ಲೊಬ್ಬ. ಈ ಮೂವರಲ್ಲಿ ಶಾರ್ಙ್ಗಧರಪದ್ದತಿಯಲ್ಲಿ ಹೇಳಲ್ಪಟ್ಟಿರುವ ಶಂಕುಕನು ಕ್ರಿ. ಶ. ೭ನೆಯ ಶತಮಾನದವನು. ಇವನು ಯಾವ ಗ್ರಂಥವನ್ನು ಬರೆದಿರುವನೆಂಬುದು ತಿಳಿಯದು. ವಿಕ್ರಮಾರ್ಕನ (?) ನವಮಣಿಗಳಲ್ಲೊಬ್ಬನೆಂದು ಹೇಳಲ್ಪಟ್ಟಿರುವ ಶಂಕುವು ಕವಿಮಾಲೆಯಲ್ಲಿ ಸೇರಿಸಲ್ಪಟ್ಟಿರುವುದರಿಂದ ಕಪಿಯೆಂದು ಹೇಳಬೇಕಾಗಿರುವದೆ' ಹೊರ್ತು ಇವನು ಬರೆದುದಾಗಿರುವ ಗ್ರಂಥವು ಯಾವುದೆಂಬುದು ತಿಳಿಯದು. ರ ತಾ ಕ ರ ಇವನು ಕಾಶ್ಮೀರದವನು. ಅಮೃತಭಾನುವಿನ ಮಗನು ಎಂಬುದು ಈ ಶ್ಲೋಕದಿಂದ ವ್ಯಕ್ತವಾಗುವುದು. ಶ್ರೀದುರ್ಗದತ್ತ ನಿಜವಂಶಹಿಮಾದ್ರಿನಾನು ಗಂಗಾಹ್ನದಾಶ್ರಯಸುತಾಮೃತಭಾನುಸೂನು | ರತ್ನಾ ಕರೋ ಲಲಿತಬಂಧಮಿದಂ ವಧು ಚಂದ್ರಾರ್ಧಚೂಡಚರಿತಾಶ್ರಯಚಾರುಕಾವ್ಯಂ || (ಹರವಿಜಯಗ್ರಂಧರ್ಕ:ಪ್ರಶಸ್ತಿ ಪಟ ೭೦೭ ಶ್ಲೋಕ ೧) ಇವನನ್ನು ರಾಜಾನಕರತ್ನಾಕರನೆಂದೂ, ಸೂರ್ಯಚಂದ್ರರನ್ನು ತಾಳಗಳಿಗೆ ಹೋಲಿಸಿ ಹೇಳಿರುವನಾದುದರಿಂದ ತಾಳರತ್ನಾಕರನೆಂದೂ ಕರೆಯುವರು.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭
ಗೋಚರ