ಪುಟ:ಸತ್ಯವತೀ ಚರಿತ್ರೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸತ್ಯವತಿಚರಿತ್ರೆ ...... 2 yh + G•• +++++++Muyh Ah 4 vy , * ********** ಹತ್ತಿರ ಪಾಠಗಳನ್ನು ಹೇಳಿಸಿಕೊಳ್ಳುತ್ತಿದ್ದನು. ಆತನು ತನ್ನ ತರಗತಿಯವರೊಳಗೆ ಬಹು ಬುದ್ಧಿವಂತನು. ಅವನಿಗೆ ತಾಯೊಬ್ಬಳೇ ಇರುವಳು. ಮಾನ್ಯವೇನೂ ಇಲ್ಲದಿದ್ದರೂ ತಾಯಿ ತನ್ನ ಒಡವೆಗಳನ್ನು ಮಾರಿ ಬಡ್ಡಿಗೆ ಹಾಕಿದ ಎರಡು ಮೂರು ಸಾವಿರ ರೂಪಾಯಿಗಳಿಂದ ಮಗನಿಗೆ ವಿದ್ಯೆಯನ್ನು ಕಲಿಸುತ್ತಿದ್ದಳು, ಆ ಹುಡುಗನಿಗೆ ಸೀತೆಯನ್ನು ಕೊಟ್ಟು ಮದುವೆಮಾಡಬೇಕೆಂದು ನಾರಾಯಣ ಮೂರ್ತಿಗೆ ಅಭಿಪ್ರಾಯವಿದ್ದು ತಂದೆಗೆ ಬರೆಯಲಾಗಿ ಆತನು ಅದಕ್ಕೆ ಒಡಂಬಟ್ಟು ಪ್ರತ್ಯುತ್ತರವನ್ನು ಬರೆದನು. ಈ ಸಂಗತಿಯನ್ನು ಆ ಹುಡುಗನ ತಾಯಿಗೆ ತಿಳಿ ಸಲಾಗಿ ಆಕೆಗೆ ಪರಮಾನಂದವುಂಟಾಯಿತು. ಹೀಗೆ ಎರಡು ನೆಂಟುತನಗಳೂ ಇಷ್ಟು ಅನುಕೂಲವಾಗಿ ಸಿಕ್ಕಿದುದರಿಂದ ವೈಶಾಖಮಾಸದಲ್ಲಿ ವಿವಾಹಗಳನ್ನು ಮಾಡಬೇಕೆಂದು ಲಗ್ನ ವನ್ನು ನಿಶ್ಚಸಿದರು. ವೆಚ್ಚದಲ್ಲಿ ವೆಚ್ಚವಾದರೆ ಸ್ವಲ್ಪ ಲಾಭವೆಂದು ಅಲ್ಲಿ ಲಕ್ಷ್ಮಿನಾರಾಯಣಯ್ಯನು ತನ್ನ ಹೆಂಡತಿಯ ತಮ್ಮನ ಮಗಳಾದ ಸೂರಮ್ಮನನ್ನು ಸುಬ್ರಹ್ಮಣ್ಯನಿಗೆ ತಂದುಕೊಳ್ಳುವುದಕ್ಕೆ ಒಪ್ಪಿ ಕೊಂಡು ಈ ಮೂರು ಮದುವೆಗಳನ್ನೂ ಒಂದೇ ಕಾಲದಲ್ಲಿ ಮಾಡುವುದಕ್ಕೆ ನಿಶ್ಚಯಿಸಿಕೊಂಡು ಹೊಲದಮೇಲೆ ನಾಲ್ಕು ಸಾವಿರ ರೂಪಾಯಿಗಳನ್ನು ಸಾಲತೆಗೆದು ತೆಲವನ್ನು ಒಬ್ಬ ಒಕ್ಕಲಿಗನಿಗೆ ಮೂವತ್ತು ವರ್ಷ ಅವಧಿಗೆ ಬರೆದು ಕೊಟ್ಟನು. ಸೂರಮ್ಮನ ತಂದೆ ಎಂಟು ವರ್ಷಗಳ ಹಿಂದೆಯೇ ಕಾಲವಾದನಾ ದುದರಿಂದ ಬಲತಾಯಿಯು ಭಾವನಸಂಗಡ ಜಗಳವಾಡಿಕೊಂಡು ತವರುಮನೆಗೆ ಓಡಿ ಹೋಗಿ ವ್ಯವಹರಿಸಿ ಜೀವನಾಂಶವನ್ನು ತೆಗೆದು ಕೊಳ್ಳುತಿದ್ದಳು, ಈಗ ಸೂರಮ್ಮ ನಿಗೆ ಹತ್ತನೆಯವರ್ಷ, ಆ ಹುಡುಗಿ ಮೊದಲಿಂದಲೂ ಭಯಭಕ್ತಿಗಳಿಲ್ಲದೆ ಅಶಿಕ್ಷಿತೆ ಯಾಗಿ ಬೆಳೆದಳು. ಈ ಹುಡುಗಿಯನ್ನು ತನ್ನ ಮಗನಿಗೆ ತಂದು ಕೊಳ್ಳುವ ವಿಷಯ ದಲ್ಲಿ ಲಕ್ಷ್ಮಿನಾರಾಯಣಯ್ಯನಿಗೆ ಸ್ವಲ್ಪವೂ ಇಷ್ಟವಿಲ್ಲ. ಆದರೂ ಆ ಹುಡುಗಿ ಯನ್ನು ಹೊರತು ಬೇರೆ ಹುಡುಗಿಯನ್ನು ತಂದುಕೊಳ್ಳಕೂಡದೆಂದು ಹೆಂಡತಿ ಹಟ ಹಿಡಿದಳು, ಆದುದರಿಂದ ಲಕ್ಷ್ಮಿನಾರಾಯಣಯ್ಯನು ಮದುವೆಯೊಂದಿಗೆ ಮದು ವೆಯನ್ನು ಮಾಡಿದರೆ ವ್ಯಯ ಕಡಿಮೆಯಾಗುವುದೆಂದು ಯೋಚಿಸಿ ಕಡೆಗೆ ಹೆಂಡತಿಯ ಮಾತನ್ನೇ ಅಂಗೀಕರಿಸಿದನು. ನಾರಾಯಣಮೂರ್ತಿ ಬೇಸಗೆಕಾಲದ ವಿರಾಮ ದಿನಗಳಲ್ಲಿ ಮನೆಗೆ ಬರುವಾಗೋ ಮದುವೆಯ ಕೆಲಸಗಳು ನಡೆಯುತ್ತಿದ್ದುವು. ವೈಶಾಖ ಶುದ್ಧ ದಶಮಿಯದಿನ ಸುಮುಹೂರ್ತವನ್ನು ನಿಶ್ಚಯಿಸಿ ಅಷ್ಟರೊಳಗಾ ಗಿಯೇ ನಂಟರಿಗೆ ಲಗ್ನ ಪತ್ರಿಕೆಗಳನ್ನು ಕಳುಹಿಸಿದರು. ಆದರೂ ಮನೆಯೊಳಗೆ