ಪುಟ:ಸತ್ಯವತೀ ಚರಿತ್ರೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪ್ರಕರಣ

  • 1 # , »

ಗೆಂದು ಹೊರಟು ತಾನು ವಿಶಾಖಪಟ್ಟಣಕ್ಕೆ ಸೇರಿದಮೇಲೆ ಕಾಗದ ಬರೆದನು. ಆ ಕಾಗದ ಬಂದೊಡನೆಯೇ ಮನೆಯವರೆಲ್ಲರೂ ಸ್ವಲ್ಪ ವ್ಯಸನಪಟ್ಟು ಹೇಗಾದ ರೂ ಆತನನ್ನು ಕರೆತಂದು ಇನಃ ಮನೆಗೆ ಸೇರಿಸಬೇಕೆಂದು ಯೋಚಿಸಿದರು. ಆದ ರೆ ದಾರಿಯಲ್ಲಿ ಆತನನ್ನು ಹಿಡಿದು ನಿಲ್ಲಿಸಿ ಹಿಂದಿರುಗಿಸುವುದು ಅಸಾಧ್ಯವೆಂದೆಣಿಸಿ ಆ ಪ್ರಯತ್ನವನ್ನು ಬಿಟ್ಟು ಬಿಟ್ಟರು. ಆಮೇಲೆ ನಾರಾಯಣಮೂರ್ತಿಗೆ ತಾಯಿ ಮುಂತಾದವರೊಂದಿಗೆ ರಾಜಮಹೇಂದ್ರಕ್ಕೆ ಹೋಗಲು ಮನಸ್ಸಾಗಲಿಲ್ಲ, ಅದ ರಿಂದ ಮಂಗಳವಾರವೆಂದು ಒಂದುದಿನವೂ ಶುಕ್ರವಾರವೆಂದು ಮತ್ತೊಂದುದಿನವೂ ಅಷ್ಟಮಿ ನವಮಿಗಳೆಂದು ಬೇರೆ ದಿನಗಳೂ ತ್ಯಾಜ್ಯ ವೆಂದು ಮತ್ತೊಂದು ದಿನವೂ ತಿಥಿ ವಾರ ನಕ್ಷತ್ರಗಳು ಒಳ್ಳೆಯವಲ್ಲ ವೆಂದು ಮತ್ತೆ ಕೆಲವು ದಿನಗಳ ಕಾಲಹರಣ ಮಾ ಡಿದನು. ಆಗ ಯಶೋದಮ್ಮ ನು ಸಿಟ್ಟು ಮಾಡಿ ಬಯ್ದಮೇಲೆ ನಾರಾಯಣ ಮರ್ತಿ ತ್ರಯೋದಶಿಯದಿನ, ಪ್ರಯಾಣವನ್ನು ನಿಶ್ಚಯಿಸಿದನು. ಇಷ್ಟರೊಳಗೆ ಏಕಾದಶಿಯದಿನ ಆಕೆಗೆ ವಾಂತಿ ಭೇದಿಗಳಿಗೆ ಮೊದಲಾಯಿತು, ಜ್ವರವೂ ಬಂದಿತು. ಮೊದಲು ಎರಡು ಮೂರು ದಿನಗಳು ತಮಗೆ ತಿಳಿದ ಚಿಕಿತ್ಸೆಯನ್ನೇ ಅವರು ಮಾಡುತ್ತಿದ್ದರು, ಅದರಿಂದ ರೋಗವು ಸ್ವಲ್ಪವೂ ತಗ್ಗದೆ ಮತ್ತಷ್ಟು ಪ್ರಬಲಿಸಿತು. ಆಮೇಲೆ ಅವರು ಭಯಪಟ್ಟು ಔಷಧಕೊಡಿಸುವುದಕ್ಕಾಗಿ ಪೂಜಾರಿ ಶರಭಯ್ಯ ನನ್ನು ಕರೆತಂದರು. ಆತನು ಕೈನೋಡಿ ಈ ರೋಗವು ಮೇಹಕಾರಕದಿಂದ ಬಂದಿದೆ ಯೆಂದು ಹೇಳಿ ಮರುದಿನಗಳೊಳಗೆ ಇದನ್ನು ವಾಸಿಮಾಡುತ್ತೇನೆಂದು ಹತ್ತು ರೂಪಾಯಿಗಳನ್ನು ಈಸಿಕೊಂಡು ಆವಾವುದೋ ಔಷಧಗಳನ್ನು ಕೊಡುವುದಕ್ಕೆ ಪ್ರಾರಂಭಿಸಿದನು, ವ್ಯಾಧಿಯು ದಿನೇದಿನೇ ಪ್ರಬಲವಾಗುತ್ತಿದ್ದರೂ ವೈದ್ಯನು ದಿನವಹಿ ಬಂದು ಕೈನೋಡುತ್ತಾ ವಾಂತಿ ತಗ್ಗದಿದ್ದರೂ ಒಂದು ದಿನಕ್ಕಿಂತ ಒಂದು ದಿನ ಕೈಯ ಆ ಗುಣ ಕಾಣುತ್ತದೆಂದೂ ಕ್ರಮಕ್ರಮವಾಗಿ ನಿಲ್ಲಬೇಕೇ ಹೊರತು ಒಂದೇಸಾರಿ ತಟ್ಟನೆ ನಿಲ್ಲುವುದು ಒಳ್ಳೆಯದಲ್ಲ ವೆಂದೂ ಒಂದು ನಿಮಿಷದಲ್ಲಿ ವಮನ ನಿಲ್ಲಿಸತಕ್ಕ ಶಕ್ತಿ ತನಗಿದ್ದರೂ ಅದರಿಂದಲೇ ತಾನು ನಿಲ್ಲಿಸಲಿಲ್ಲವೆಂದೂ ನಿದಾನವರಿತು ಮೇಹಕಾ ರಕದ ವಿಷಯದಲ್ಲಿ ಕೆಲಸ ಮಾಡುತ್ತಿರುವೆನೆಂದೂ ಹೇಳಿ ಹಸುವಿನ ಮಜ್ಜಿಗೆಯಲ್ಲಿ ಅನ್ನ ಹಾಕಿಸುತ್ತಿದ್ದನು, ಅದರಿಂದ ಆಕೆ ಬಲಹೀನೆಯಾಗಿ ಮಂಚದಮೇಲೆಯೇ ಯಾವಾಗಲೂ ಮಲಗಿರುತ್ತಿದ್ದಳು, ಕೆಲವು ದಿನಗಳಲ್ಲಿ ಆಕೆಯ ಮೇಗಾಲುಗಳ ಮೇಲೆ ಊದು ಕಾಣಿಸಿ ಕ್ರಮವಾಗಿ ಮೇಲೆಯ ಹಬ್ಬುತ್ತಾ ಬಂದಿತು. ನಾರಾ ಯಣಮೂರ್ತಿ ಮುಂತಾದವರು ಅದನ್ನು ನೋಡಿ ಆಕೆ ಬದುಕುವದು ಕಷ್ಟ ಎಂದು