ಪುಟ:ಸತ್ಯವತೀ ಚರಿತ್ರೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಸತ್ಯವತಿಚರಿತ್ರೆ

  • * \ \ # $ 1, * # *

\ \r\ \ \ 21,* * * * * * * * * * \ \ " fs/ "* * * * * * * * * * * * * * * # ಮ್ಮನು ಚಿಕ್ಕಂದಿನಿಂದಲೂ ಆಶಿಕ್ಷಿತೆ. ಅದರಿಂದ ಅವಳು ಏನೇನೋ ಕೆಟ್ಟ ಚೇಷ್ಟೆ ಗಳನ್ನು ನೋಡುತ್ತಾ ಎಲ್ಲರೊಂದಿಗೂ ಜಗಳವಾಡಿ ಅತ್ತೆಯ ಸಂಗಡ ಎಲ್ಲರಮೇಲೆ ಯ ಚಾಡಿ ಹೇಳುತ್ತಿದ್ದಳು. - ಯಶೋದಮ್ಮನು ಆ ಮಾತು ನಂಬಿಕೊಂಡು ಜಗಳಕ್ಕೆ ಹೋಗಿ ಎಲ್ಲರ ನ್ಯೂ ಬಯ್ಯುತ್ತಿದ್ದಳು. ಸತ್ಯವತಿಯೊಬ್ಬಳು ಸೊರತು ಮಿಕ್ಕವರೆಲ್ಲರೂ ತಿರುಗಿ ಬಿದ್ದು ಜಗಳವಾಡುತ್ತಿದ್ದರು. ಆದರಿಂದ ನಿತ್ಯವೂ ಯಾವುದೋ ಒಂದುಬಗೆಯಲ್ಲಿ ಜಗಳ ಹತ್ತುತ್ತಲೇ ಇದ್ದಿತು, ಅದರಲ್ಲಿ ಮುಖ್ಯವಾಗಿ ಯಶೋದಮ್ಮನಿಗೂ ಸುಂದ ರಮ್ಮನಿಗೂ ನಡೆಯುವ ಕಲಹವನ್ನು ನೋಡುವವರಿಗೆ ಮನೆ ಬಿಟ್ಟು ಹೋಗಿ ಯಾ ವಾಗ ಸುಖವಾಗಿರುವೆವೋ ಎಂಬ ಬುದ್ಧಿಯುಂಟಾಗದೆ ಹೋಗದು. ಸತ್ಯವತಿಯು ಸರಮ್ಮನನ್ನು ಹತ್ತಿರಕ್ಕೆ ಕರೆದು ಆಗಾಗ್ಗೆ ಒಳ್ಳೆಯ ಮಾ ತಾಡಿ ಬುದ್ಧಿ ಹೇಳುತ್ತಿದ್ದಳು. ತುಪ್ಪವು ನಾಯಿಗೆ ರುಚಿಸುವುದುಂಟೇ? ಅದರಂತೆ ಆ ಹುಡುಗಿಗೆ ಆ ಹಿತವಾಕ್ಯವು ರುಚಿಸಲಿಲ್ಲ, ಮನಸ್ಸಿನಲ್ಲಿ ಕೋಪವಿಟ್ಟು ಕೊಂಡು ಸೂರಮ್ಮನ ದಿನವಹಿ ಅತ್ಯಸಂಗಡ ಸತ್ಯವತಿಯ ಮೇಲೆ ದೂರು ಹೇಳುತ್ತಿದ್ದಳು. ಯಶೋದಮ್ಮನು ಆ ಮಾತು ನಂಬಿಕೊಂಡು ನಿತ್ಯವೂ ನಿಷ್ಕಾರಣವಾಗಿ ಕೊಡೆದು ಬಯ್ಯು ಕೊರಲು ಕೊಯ್ಯು ಮಲಗಿಸಿದರೂ ಸತ್ಯವತಿ ಬೇರೆ ಇದಿರು ಮಾತಾಡುತ್ತಿರಲಿಲ್ಲ, ಅದರಿಂದ ಹೊರಗಿನವರಿಗೆ ಏನೂ ಗೊತ್ತಾಗುತ್ತಿರಲಿಲ್ಲ. ಸಾಧಾಗೆಣವಾಗಿ ನಮ್ಮ ದೇಶದ ಸ್ತ್ರೀಯರು ಈಗ ಮಢರು, ಅದರಿಂದ ಅವರು ತಮ್ಮ ಮೇಲೆ ತಿರುಗಿಬೀಳುವವರ ತಂಟೆಗೆ ಹೋಗುವುದಿಲ್ಲ, ತಮ್ಮ ಕೈ ಕೆಳಗಣವ ರಾಗಿ ಸಾಧುವಾಗಿ ಕಾಣುವವರ ಮೇಲೆಯೇ ಎಲ್ಲ ರಮೇಲಣ ಕೋಪವನ್ನೂ ತೀರಿಸುವರಲ್ಲವೆ ? ಆಗ ಸತ್ಯವತಿಗೆ ಅತ್ತೆಯಿಂದುಂಟಾಗುತ್ತಿದ್ದ ಬಾಧೆ ಅಷ್ಟಿಷ್ಟಂ ದು ಹೇಳುವುದಕ್ಕೆ ಯಾರಿಂದತಾನೇ ಆದೀತು. ಆದರೂ ಸತ್ಯವತಿ ಕನಸಿನಲ್ಲಿ ಯ ತನ್ನ ಅತ್ತೆ ಕೆಟ್ಟವಳೆಂದು ಹೇಳುತ್ತಿರಲಿಲ್ಲ, ಮನಸ್ಸಿನಲ್ಲಿ ಕೋಪವಿಟ್ಟು ಕೊಳ್ಳುತ್ತಿರಲಿಲ್ಲ. ತಾಯಿಗೂ ಸುಂದರಮ್ಮನಿಗೂ ಹತ್ತುವ ಜಗಳವನ್ನು ನೋಡಿ ಕೆಲವು ಕಾಲದವರೆಗೆ ಅವರಿಬ್ಬರನ್ನೂ ದೂರವಾಗಿಡುವುದೊಳ್ಳೆಯದೆಂದು ಯೋ ಚಿಸಿ ಹೆಂಡತಿಯನ್ನೂ, ತಾಯಿಯನ್ನೂ ತನ್ನೊಡನೆ ರಾಜಮಹೇಂದ್ರಕ್ಕೆ ಕರೆದು ಕೊಂಡು ಹೋಗಬೇಕೆಂದು ನಾರಾಯಣಮೂರ್ತಿ ಯೋಚಿಸಿಕೊಂಡಿದ್ದನು, ಆಗ ಲಕ್ಷ್ಮಿನಾರಾಯಣಯ್ಯನು ರಾಜಮಹೇಂದ್ರಕ್ಕೆ ನೀವೆಲ್ಲರೂ ಪ್ರಯಾಣಮಾಡಿ ಬನ್ನಿ ಎಂದು ಹೇಳಿ ಯಾರಿಗೂ ತಿಳಿಸದೆ ಸ್ವಲ್ಪ ಹಣ ತೆಗೆದುಕೊಂಡು ಕಾಶೀಯಾತ್ರೆ