ಪುಟ:ಸತ್ಯವತೀ ಚರಿತ್ರೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ೩ಜಿ

  • * * * *

ಮಗನಾಗುವೆನೆಂದೂ ಎಲ್ಲರನ್ನೂ ಕುಳ್ಳಿರಿಸಿ ಊಟ ಮಾಡಿಸಬೇಕೆಂದೂ ಗೊಣ ಗುತ್ತಾ ಹತ್ತು ದಿನಗಳಲ್ಲಿಯೇ ಹೆಚ್ಚು ಜನಗಳು ಬೇರೆ ಇರಬೇಕೆಂಬ ಅಭಿಪ್ರಾಯ ವನ್ನು ತೋರಿಸಿದನು. ನಾರಾಯಣಮೂರ್ತಿ ಸಹೋದರರನ್ನೂ ಹೆಂಡತಿಯನ್ನು ಕರೆದು ಕೊಂಡು ರಾಜಮಹೇಂದ್ರಕ್ಕೆ ಹೊರಡಬೇಕೆಂದು ನಿಶ್ಚಯಿಸಿದನು. ತಾಯಿಯ ಓಡವೆಗಳು ನ್ಯಾಯವಾಗಿ ಮಗಳಿಗೆ ಸಲ್ಲಬೇಕಾದರೂ ನಾರಾಯಣಮೂರ್ತಿ, ಅತ್ತಿಗೆ ಮತ್ತು ಅಣ್ಣ ಇವರ ಇಚ್ಛಾನುಸಾರ ಅದನ್ನು ಅವರಿಗೇ ಕೊಟ್ಟು, ಪಾತ್ರ ಸಾಮಗ್ರಿಯನ್ನೂ ಅಪೇಕ್ಷಿಸಿದಷ್ಟು ಕೊಟ್ಟು ಬಿಟ್ಟು ಹೆಚ್ಚು ಬನರನ್ನೆಲ್ಲ ತನ್ನೊ ಡನೆ ಕರೆದುಕೊಂಡು ರಾಜಮಹೇಂದ್ರವನ್ನು ಹೊಕ್ಕನು,


-

ಎಂಟನೆಯ ಪ್ರಕರಣ, ನಾರಾಯಣಮೂರ್ತಿ ಕುಟುಂಬಸಮೇತನಾಗಿ ರಾಜಮಹೇಂದ್ರವನ್ನು ಹೊಕ್ಕ ಮೇಲೆ ಕೆಲವು ತಿಂಗಳು ಸುಖವಾಗಿದ್ದನು. ಮು೦ಗೊ೦ಡಾಗ್ರಹಾರದಲ್ಲಿ ದ್ದಾಗಲೇ ಸತ್ಯವತಿ ಗರ್ಭಿಣಿಯಾಗಿದ್ದುದರಿಂದ ತವರುಮನೆಯವರು ಆಕೆಯನ್ನು ಬಾಣಂತಿತನಕ್ಕಾಗಿ ಕರೆದು ಕೊಂಡು ಹೋದರು. ಆ ಪೆದ್ದಾಪುರದಲ್ಲಿ ರಾಘವ ಯ್ಯನ ಮನೆಯ ಮಹಡಿಯ ಮೇಲೆ ನಿಂತುಕೊಂಡು ನೋಡಿದರೆ ಪೀರರ ಪಂಜಾ ಹತ್ತಿರದಲ್ಲೇ ಕಾಣುತ್ತಿದ್ದಿತು. ಸತ್ಯವತಿ ತಾನು ಆ ಪಂಜಾವಿನ ಕಥೆಯನ್ನು ಕೇಳಿದಾಗ ಮವತ್ತು ಮೂರು ಕೋಟಿ ದೇವತೆಗಳೂ ಸ್ಪಳದೇವತೆಗಳೂ ಸಾಲದೆ ಹಿಂದುಗಳಿಗೆ ತುರುಕರ ದೇವತೆಗಳೂ ಬೇಕಾದವರಾಗಿರುವರೇ ಎಂದು ಆಶ್ಚರ್ಯ ಪಡುತ್ತಿದ್ದಳು. ಸತ್ಯವತಿಯ ತಾಯಾದ ಶ್ಯಾಮಲಾಂಬೆ ಬಾಲ್ಯದಿಂದಲೂ ಪಟ್ಟಣವಾಸದಲ್ಲಿ ಪಳಗಿದವಳಾದುದರಿಂದಲೂ ಓದಿದವಳಾದುದರಿಂದಲೂ ತನ್ನ ಓರಗೆಯವರಿಗಿರುವ ಹುಚ್ಚು ಆಚಾರಗಳೂ ಮರ್ಖತೆಯ ಅವಳಿಗಿರಲಿಲ್ಲ, ಅವಳು ಉಪವಾಸಮಾಡಿ ದೇಹಕ್ಕೆ ವಿರೋಧಮಾಡಿಕೊಳ್ಳತಕ್ಕವಳಲ್ಲ, ಮನೆಯನ್ನು ಶುಚಿಯಾಗಿಟ್ಟು ಕೊ ಳ್ಳುವುದರಲ್ಲಿಯ : ಕಾಲಕ್ಕೆ ಸರಿಯಾಗಿ ಅಡಿಗೆ ಮಾಡಿ ಬಡಿಸುವುದರಲ್ಲಿಯ ಅವ ಳಿಗೆ ಆಸೆ ಬಹಳ. ಆದುದರಿಂದ ಹಗಲೂ ರಾತ್ರಿಯ ನಿತ್ಯವೂ ಒಂದೇವೇಳೆಗೆ ಭೋಜನವಾಗುತ್ತದೆ. ಆದಕಾರಣ ಸಾಧಾರಣವಾಗಿ ಧನವಂತರಿಗೆ ಬರುವ