ಪುಟ:ಸತ್ಯವತೀ ಚರಿತ್ರೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸತ್ಯ ವಚರಿತ್ರೆ ರೋಗಗಳು ಬಾರದೆ ಮನೆಯವರೆಲ್ಲರೂ ಆರೋಗ್ಯವಾಗಿರುತ್ತಾರೆ. ಆ ಊರಿನ ವರೆಲ್ಲ ರೂ ಇದನ್ನು ನೋಡಿ ಆಶ್ಚರ್ಯಪಡುವರು. ಆಕೆಯ ಯೋಗ್ಯತೆಗೆ ತಕ್ಕ ಹಾಗೆಯೇ ಸೊಸೆಯ ಬಹು ಗುಣವತಿಯಾಗಿಯ ವಿದ್ಯಾವತಿಯಾಗಿಯ ಇದ್ದಾಳೆ, ಆ ಹುಡುಗಿಯ ಹೆಸರು ಜಾ ಸಕ , ಆಕೆ ಅಷ್ಟು ರೂಪವತಿ ಯಲ್ಲ, ಆದರೂ ಗುಣವತಿ, ಗಂಡಸಿಗೆ ಅವಳಲ್ಲಿ ಬಹು ಪ್ರೀತಿ, ಆ ದಂಪತಿಗಳ ಪರಸ್ಪರಾನುರಾಗವನ್ನು ನೋಡಿದವರೆಲ್ಲರೂ ಗಂಡ ಹೆಂಡರು ಒಂದು ದೇಹವೆಂಬ ಮಾತು ಇವರ ಹತ್ತಿರ ಸಾರ್ಥಕವಾಯಿತೆಂದು ಮೆಚ್ಚಿ ಕೊಳ್ಳುತ್ತಾರೆ. ಲೋಕ ದಿಲ್ಲಿ ಅನೇಕ ಮಢರು ತಮ್ಮ ಕೈ ಹಿಡಿದ ಹೆಂಡತಿ ಯರಿಗೆ ಎಷ್ಟು ಸುಗುಣಗಳಿದ್ದ ರೂ ಮೇಲಣಚರ್ಮ ತಮ್ಮ ಕಣ್ಣಿಗೆ ಇಂಪಾಗಿಲ್ಲ ವೆಂದು ಅವರನ್ನು ಅನಾದರಿಸಿ ನರಕವೆಂಬ ಬಾವಿಗೆ ಮೊದಲನೆಯ ಹಂತವೆನಿಸಿದ... - ಯವನ ಮದಾಂಧರ ಕಣ್ಣು ಗಳಿಗೆ ಭ್ರಮೆಯನ್ನುಂಟುಮಾಡಿ ಸವಿಮಾತುಗಳೆಂಬ ಪಾಶದಿಂದ ಅವರನ್ನು ಸೆಳೆದು ನರಕದಲ್ಲಿ ತಳ್ಳುವುದಕ್ಕಾಗಿ ಅವತರಿಸಿ ವ್ಯಭಿಚಾರವೇ ಕುಲವೃತ್ತಿಯಾಗಿ ಉಳ್ಳ ..... ಅಪಮೃತ್ಯುದೇವತೆಯರ ಬಲೆಗೆ ಸಿಕ್ಕಿಕೊಂಡು ಮನೆಯನ್ನೂ ಶರೀರವನ್ನೂ ಸೂರೆ ಗೊಟ್ಟು ಸರ್ವಸ್ವವನ್ನೂ ನಾಶಮಾಡಿಕೊಂಡು ನಿಂದೆಗೆ ಗುರಿಯಾಗುವರು. ಅಂತಹ ಬುದ್ಧಿ ಹೀನರು ಈ ದಂಪತಿಗಳ ಚರಿತ್ರೆಯನ್ನು ಕೇಳಿದರೂ ನೋಡಿದರೂ ಬುದ್ದಿ ಕಲಿತು ಕೊಳ್ಳಬಹುದು, ಅತ್ತೆಗೆ ಜಾನಕಮ್ಮನೆಂದರೆ ಎರಡನೆಯ ಪ್ರಾಣ; ಪ್ರತಿ ವಿಷಯದಲ್ಲಿಯ ಅವರಿಬ್ಬರದೂ ಒಂದೇ ಮಾತು. ಲೋಕದಲ್ಲಿರುವ ಮೂಢಸ್ತ್ರೀ ಯರಂತೆ ಅತ್ತೆ ಸೊಸೆಯರು ಸೇರಿದಾಗ ಬೆಕ್ಕ ಇಲಿಯ ಸೇರಿದಹಾಗೆ ಕಾಣ ರು, ಲಕ್ಷ್ಮಿ ಯ ಸರಸ್ವತಿಯ ಕಲೆತಹಾಗೆ ಎಷ್ಟೋ ಆನಂದವುಂಟಾಗುತ್ತದೆ. ಆ ಮನೆಯ ಸೊಸೆತನವೆಂಬ ಮಾತು ಕರ್ಣಕಠೋರವಾಗಿರದೆ ಕಿವಿಗೆ ಅಮೃತವೆರೆ ದಂತಿರುವುದು, ದೇಹ ಬೇರೆಯಾಗಿದ್ದರೂ ಸತ್ಯವತಿಯ ಜಾನಕಮ್ಮ ನೂ ಒಂದೇ ಪ್ರಾಣವೆಂದು ಹೇಳುವಂತೆ ಅನ್ನೋನ್ಯವಾಗಿರುವರು. ಅವರಿಬ್ಬರಿಗೂ ಇರುವ ಗುಣವನ್ನು ಕಣ್ಣಾರೆ ನೋಡಿ ಸುಖಾನುಭವ ಮಾಡಬೇಕಲ್ಲದೆ ತಿಳಿಸಿದರೆ ಅದು ಸುಳ್ಳಾಗಿ ತೋರುವುದು, ಹಿಟ್ಟಿನಲ್ಲಿ ಹೆಣ್ಣು ಬೊಂಬೆಮಾಡಿ ಮಣೆಯ ಮೇಲಿಟ್ಟರೆ ಅದೂ ಸುಮ್ಮನಿರದೆ ಹುಡುಗಿಯಂತೆ ಅಣ್ಣೆಕಲ್ಲಾಡಿತು, ಎಂಬ ಗಾದೆ ಯಾವಯು ಗದುದೋ ? ಎಂದು ಇವರನ್ನು ನೋಡಿದವರಿಗೆಲ್ಲಾ ತೋರುವುದು, ಓರಗೆಯವರಲ್ಲಿ ಓರಗೆಯವರೂ ತಮ್ಮಂತೆ ಗುಣವಂತರಾದವರಲ್ಲಿ ಗುಣವಂತರೂ ಸ್ನೇಹಿಸುವರೆಂಬ ಮಾತು ಇವರನ್ನು ನೋಡಿದರೆ ಸಿದ್ಧಾಂತವಾಗುವುದು, ಸತ್ಯವತಿಯ ಜಾನ