ಪುಟ:ಸತ್ಯವತೀ ಚರಿತ್ರೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ , , , , , , - - - - - - - - - - - - - - ( ಕಮ್ಮನೂ ಇಬ್ಬರೂ ಸಮಾನಗುಣವತಿಯರೇ ಎಂದು ಹೇಳಬಹುದು, ಆದರೂ ವಿದ್ಯಾ ಬುದ್ದಿ ಗಳಲ್ಲಿ ಜಾನಕಮ್ಮನು ಸತ್ಯವತಿಯನ್ನು ನೋಡಿ ಕಲಿತುಕೊಳ್ಳಬೇಕಾದ ಅಂಶಗಳು ಅನೇಕಗಳು, ಸತ್ಯವತಿ ತನ್ನ ತವರು ಮನೆಯಲ್ಲಿದ್ದಾಗಲೇ ಚಾನಕಮ್ಮನು ನಡತೆಯ ವಿಷಯವನ್ನೂ ವಿದ್ಯಾವಿಷಯವನ್ನೂ ಮತ್ತು ಬೇರೆಬೇರೆ ಸಂಗತಿ ಗಳನ್ನೂ ಕಲಿತುಕೊಂಡು ಎಷ್ಟೋ ಅಭಿವೃದ್ಧಿ ಸ್ಥಿತಿಗೆ ಬಂದಳು. ಓದುವುದಕ್ಕೆ ಬಾರದ ಹೆಂಗಸರಂತೆ ಅವರು ಯಾವಾಗಲೂ ತರರ ಮೇಲೆ ದೋಷಾರೋಪಣೆ ಮಾಡುತ್ತಾ ಕಾಲಹರಣ ಮಾಡರು. ಕೆಲಸ ಕಾರ್ಯಗಳಾದಮೇಲೆ ಅವಕಾಶವಾದಾಗ ಪತಿವ್ರತಿ ಪರ ಚರಿತ್ರೆಗೆ ಳನ್ನು ಓದುತ್ತಲೋ ಲೋಕೋಪಕಾರಕ ವಾದ ವಿಷಯದಲ್ಲಿ ಪ್ರಸಂಗಿಸುತ್ತಲೋ ಹೊತ್ತು ಕಳೆಯುತ್ತಿರುವರು. ಕುಟುಂಬದಲ್ಲಿ ಅತ್ತೆಯ ಸೊಸೆಯ ಗಂಡನೂ ಹೆಂಡತಿಯ ಹೀಗೆ ಪರಸ್ಪರ ಸ್ನೇಹಿತರಾಗಿದ್ದರೆ ಆ ಮನೆಯೇ ಭೂಲೋಕದಲ್ಲಿ ಸ್ವರವೆಂದು ಹೇಳಬಹುದು, ಅವರ ಮನೆಯಲ್ಲಿ ರಾಘವೈಯ್ಯನ ಮುತ್ತಜ್ಜಿಯೊ ಬೃಳೇ ಈ ಗುಂಪಿಗೆ ಸೇರದವಳು. ಆಕೆಗೆ ಈಗ ಪ್ರಾಯಶಃ ಎಪ್ಪತ್ತು ವರುಷ ವಯಸ್ಸು, ರಾಘವೈಯ್ಯನ ಅಜ್ಜನು ಆಕೆಯನ್ನು ಮುಪ್ಪಿನಲ್ಲಿ ಮದುವೆಮಾಡಿ ಕೊಂಡು ಕೆಲವು ದಿನಗಳಲ್ಲಿಯೇ ಸತ್ತುಹೋದನು. ಅವಳಿಗೆ ಸಂತಾನವಿಲ್ಲ. ಆಕೆಯ ಹೆಸರು ಪಾರ್ವತಮ್ಮ, ಹೊತ್ತು ಹೋಗದಿದ್ದರೆ ಜಾನಕಮ್ಮನೂ ಸತ್ಯವ ತಿಯ ಅಜ್ಜ ಮ್ಯಾ ಎಂದು ಕೂಗಿ ಆಕೆಯಿಂದ ಪೂರ್ವಕಾಲದ ಕಥೆಗಳನ್ನು ಹೇಳಿ ಸಿ ಕೇಳುತ್ತಾ ವಿನೋದವಾಗಿ ಹೊತ್ತು ಕಳೆಯುವುದುಂಟು. ಆಕೆಗೆ ಈ ಕಾಲದ ವರ ನಡತೆಗಳೂ ವಸ್ತುಗಳ ಎಲ್ಲಾ ಹೊಸದು. ಹೀಗಿರಲಾಗಿ ಒಂದು ದಿನ ಚಂದ್ರಗ್ರಹಣ ಹಿಡಿಯಿತು. ಪಾರ್ವತಮ್ಮನು ಹಿಡಿದ ಸ್ಮಾ ನಮಾಡಿಕೊಂಡು ಬಂದು ಒದ್ದೆ ಯ ಸೀರೆಯನ್ನು ಬಿಚ್ಚಿ ಹಾಕಿ ಒಣಗಿದ ಸೀರೆಯನ್ನು ಉಟ್ಟು ಕೊಂಡು ಹಿಂಡಿದ ಸೀರೆಯನ್ನು ಗಳದಮೇಲೆ ಆರಿಹಾಕುವುದಕ್ಕಾಗಿ ದೊಡ್ಡಿಗೆ ಬಂದಳು. ಆಗ ಅಲ್ಲಿ ಸತ್ಯವತಿಯ ಜಾನಕಮ್ಮನೂ ಚಂದ್ರನನ್ನು ಬೆರಳಿನಿಂದ ತೋರಿಸುತ್ತಾ ಗ್ರಹಣದ ವಿಷಯವಾಗಿ ಏನೋ ಮಾತುಗಳಾಡುತ್ತಿದ್ದರು. ಪಾರ್ವತಮ್ಮನು ಅದನ್ನು ನೋಡಿ ಮಗಿನಮೇಲೆ ಬೆರಳಿಟ್ಟುಕೊಂಡು ಭಯ ಪಟ್ಟು ಮಾತನಾಡದೆ ನಿಂತಳು. ಸತ್ಯವತಿ...ಅಜ್ಞಾ, ಇದೇನು ಹೀಗೆ ಬೆರಗಾಗಿ ನಿಂತಿದ್ದೀಯೆ ?