ಪುಟ:ಸತ್ಯವತೀ ಚರಿತ್ರೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯು ಪ್ರಕರಣ t 14,* # / 24 1/1/» / , P4 #1 #1 * \ fe# * * * * * * 21, / 4 ಸತ್ಯ-ಅಜ್ಜ ಮ್ಯಾ, ಸಿಟ್ಟು ಮಾಡಬೇಡ, ಇದೆ, ಬರುತ್ತೇನೆ, ಕಣ್ಣಿಗೆ ನಿದ್ದೆ ಹತ್ತದೆ ಇದೆ. ನಿಮ್ಮ ಕಾಲದ ಸುದ್ದಿ ಇನ್ನೇನಾದರೂ ಇದ್ದರೆ ಹೇಳು. ನೀನು ನಿನ್ನ ಗಂಡನೊಂದಿಗೆ ಕಾಶೀಯಾತ್ರೆಗೆ ಹೋದೆಯಷ್ಟೆ, ದಾರಿಯಲ್ಲಿ ಏನೇನು ನೋಡಿದೆ? ಪಾರ್ವ-ಆಕಾಲದ ಕಥೆಯನ್ನು ಹೇಳಿದರೆ ಈಗ ನೀವೆಲ್ಲರೂ ಹಾಸ್ಯ ಮಾಡಿಕೊಂಡು ನಗುತ್ತೀರಿ. ಪೂರ್ವದಲ್ಲಿ ಕಾಶಿಗೆ ಹೆರಟವರೂ ಕಾಡಿಗೆ ಹೋದವರೂ ಒಂದೇ ಎಂದು ಹೇಳುತ್ತಿದ್ದರು. ಆಗ ಪುನಃ ಹಿಂದಿರುಗಿ ಬರುವ ವರೆಗೂ ಅವರು ಬದುಕಿದಾರೆಂಬ ಆಸೆ ಮನೆಯಲ್ಲಿ ಒಬ್ಬರಿಗೂ ಇರುತ್ತಿರಲಿಲ್ಲ. ಈಗ ಎರಡು ತಿಂಗಳೊಳಗಾಗಿಯೇ ಕಾಶಿಗೆ ಹೋಗಿ ಬಂದೆವೆಂದು ಧಡಬಡನೆ ಬರು ತಾರೆ, ನಿಜವಾಗಿ ಹೋಗುತ್ತಾರೆಯೋ ಇಲ್ಲ ವೋ ಗೊತ್ತಿಲ್ಲ, ಸತ್ಯ-ಅಜ್ಜಮ್ಮಾ, ನೀನೇಕೆ ಕಾಶಿಗೆ ಹೋಗಿದ್ದೆ? ಪಾರ್ವ-ನನ್ನ ಬಾಲ್ಯದಲ್ಲಿ ನನ್ನ ಸವತಿಯ ಕಾಟವನ್ನು ಎಷ್ಟೆಂದು ಹೇಳಲಿ? ಅವಳು ದೆವ್ವವಾಗಿ ನನ್ನನ್ನು ಹಿಡಿದುಕೊಂಡು ನಾನು ಎಷ್ಟು ಔಷಧ ಗಳನ್ನು ತೆಗೆದುಕೊಂಡರೂ ಎಷ್ಟು ಪುಣ್ಯ ತೀರ್ಥಗಳಲ್ಲಿ ಸ್ಥಾನಮಾಡಿದರೂ ನನ್ನನ್ನು ಬಿಟ್ಟು ಕದಲದೆ ಇದ್ದಳು, ರಂಗೋಲಿ ಹಾಕಿ ಕುಳ್ಳಿರಿಸಿದಾಗ ಕಾಶಿಗೆ ಹೋದರೆ ಬಿಟ್ಟು ಹೋಗುತ್ತೇನೆಂದು ಹೇಳಿದಳು. ಆಗ ನಮ್ಮ ಮನೆಯವರು ನನ್ನನ್ನು ಕಾಶಿಗೆ ಕರೆದುಕೊಂಡುಹೋದರು. ಸತ್ಯ-ಅಜ್ಜ ಮ್ಯಾ, ದಾರಿಯಲ್ಲಿ ಜಗನ್ನಾಥವನ್ನು ನೋಡಿದೆಯಾ ? ಪಾರ್ವ-ಅಯ್ಯೋ ಜಗನ್ನಾಥವನ್ನೇ ನೋಡದಿದ್ದರೆ ಇನ್ನೆ (ನಿದೆ ! ದೇವರ ಪ್ರಸಾದವಿನ್ನೂ ನನ್ನ ಹತ್ತಿರ ಕೊಂಚವಿದೆ. ನಾಳೆ ಮಡಿಯುಟ್ಟು ಕೊಂಡು ಬಂದಾಗ ಜಗನ್ನಾಥದ ಬುಟ್ಟಿಯಿಂದ ಅದನ್ನು ತೆಗೆದು ಕೊಡುವೆನು, ಅಲ್ಲಿ ಪ್ರಸಾದಕೊಡುವವರು ನಾಯಿಂದರು, ನಾವು ಅದನ್ನು ಕಣ್ಣಿಗೆ ಒತ್ತಿಕೊಂಡು ತಿನ್ನಬೇಕು. ಹಾಗೆ ತಿನ್ನದೆ ಆ ಕ್ಷೌರಕರು ಕೊಡುವ ಪ್ರಸಾದ ನಮಗೆ ಬೇಡ ವೆಂದರೆ ಒಡನೆಯೇ ಕಣ್ಣುಗಳು ಹೋಗುವುವು. ಸತ್ಯ-ಅಜ್ಜಮ್ಮ, ಜಗನ್ನಾಥಸ್ವಾಮಿಗೆ ಕೈಯೂ ಕಾಲೂ ಇಲ್ಲವೆಂದು ಹೇಳುತ್ತಾರಲ್ಲ, ಅದು ನಿಜವೋ ? ಪಾರ್ವ- ಅದಕ್ಕೆ ಒಂದು ಕಾರಣವುಂಟು, ಹೇಳುತ್ತೇನೆ ಕೇಳು. ಆತನ ಹೆಸರು ಮರೆತುಹೋಯಿತು. ಯಾರೋ ಇರಲಿ, ಒಬ್ಬ ದೊಡ್ಡ ಅರಸನು.