ಪುಟ:ಸತ್ಯವತೀ ಚರಿತ್ರೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ೪೩

  1. ?

ಅವಸರ ಪಡದೆ ಇದ್ದರೆ ಇದೇ ದಿವ್ಯ ಸುಂದರ ವಿಗ್ರಹವಾಗುತ್ತಿದ್ದಿತು. ಎಂದು ಹೇಳಿದನು. ಆಗ ಆ ಅರಸು ಕುಪಿತನಾಗಿ ಶಿರಚ್ಛೇದನ ಮಾಡಿಸುತ್ತೇನೆಂದು ಹೇಳಿ ಹೊರಡುವಾಗ್ಗೆ ಆ ಮುದುಕನು ಅಯ್ಯಾ ಕೋಪಮಾಡಬೇಡ, ಈ ವಿಗ್ರಹವೇ ಜಗ ನಾ ಥಸ್ವಾಮಿಯಾಗುವುದು, ಎಲ್ಲರೂ ಇದನ್ನೇ ಪೂಜಿಸುವರು ಎಂದು ನುಡಿದು ಮೇಲೆ ನೆಗೆದು ಕಲ್ಲುಗಳ ಸಂದಿನಲ್ಲಿ ನುಸಿದು ಮಾಯವಾದನು. ಸತ್ಯ-ಮನುಷ್ಯನು ಕಲ್ಲುಗಳ ಸಂದಿನಲ್ಲಿ ಹೇಗೆ ನುಸಿದುಕೊಂಡು ಸೆದನು? ಪಾರ್ವ.--ಆತನು ಸಾಧಾರಣ ಮನುಷ್ಯನೆಂದೆಣಸು ಮೆಯೋ? ಪರಮೇ ಶ್ವರನೇ ಆ ಮುದುಕನಹಾಗೆ ಬಂದು ಹಾಗೆ ಮಾಡಿದನು, ಆದುದರಿಂದಲೇ ಜಗ ನಾ ಥದಲ್ಲಿ ದೇವರಿಗೆ ಅಷ್ಟು ಮಹಿಮೆ. ಆ ದೇವರ ತೇರಿನ ಕೆಳಗೆ ಬಿದ್ದು ಸತ್ತರೆ ಎಷ್ಟೋ ಪುಣ್ಯವಂತೆ. ದಿಕ್ಕು ಕೊಟ್ಟು ಬಂದ ಕುಂಪಣಿಯವರು ಈಗ ಯಾರನ್ನೂ ಸಾಯಲೀಸರು ಕ್ರೈಸ್ತರು ಪ್ರಬಲಿಸಿದ ಕಾರಣ ಈಗ ಎಲ್ಲಿನೋಡಿದರೂ ಹೊಲೆ ಯರ ಗುಂಪೇ ಬರುತ್ತಿದೆ. ಅವರು ಯಾವಾಗಲೋ ವರ್ಣಸಂಕರ ಮಾಡಿಬಿಡುತ್ತಾರೆ. - ಸತ್ಯ.-ಅಜ್ಜಮ್ಮಾ, ಸರ್ಕಾರದವರನ್ನು ನಿಷ್ಕಾರಣವಾಗಿ ಏಕೆ ಬಯ್ಯುವೆ? ೨ ರರು ನಮಗೇನು ಅಪಕಾರವನ್ನು ಮಾಡಿರುತ್ತಾರೆ. ಈಗ ನೋಡು ರಸ್ತೆಗಳನ್ನು ಹಾಕಿಸಿ, ಕಾಲುವೆಗಳನ್ನು ತೆಗೆಯಿಸಿ ದೇಶವೆಲ್ಲಾ ಎಷ್ಟು ಸೊಗಸಾಗಿ ಕಾಣು ವಂತೆ ಮಾಡಿದ್ದಾರೆ. ಪಾರ್ವ- ಅದಕ್ಕೆ ಬೆಂಕಿಹಾಕಿತು; ಅದಕ್ಕೆ ಅತ್ತರು, ಜಾತಿ ಕೆಡಿಸಿದಮೇಲೆ ಇವೆಲ್ಲಾ ಏಕೆ? ಸಹಗಮನದ ಹೆಸರನ್ನೇ ತೊಡೆದು ಬಿಟ್ಟರಲ್ಲ. - ಸತ್ಯ-ನೀವು ಎಂದಾದರೂ ಸಹಗಮನಮಾಡುತ್ತಿದ್ದಾಗ ನೋಡಿದ್ದೀಯಾ? ಪಾರ್ವ-ಒಂದುಸಾರಿ ಮಾತ್ರ ನೋಡಿದೇನೆ. ಆಗ ನನಗೆ ಇಪ್ಪತ್ತು ವರುಷ ವಯ ಸ್ಸು, ಆದರೂ ನಮ್ಮವರು ಹೋಗುವಾಗ್ಗೆ ಈ ದಿಕ್ಕು ಕೆಟ್ಟ ಕುಂಪಣಿಯವರು ಸಹಗಮನವನ್ನು ನಿಲ್ಲಿಸಿಬಿಟ್ಟರು. ಆ ವರ್ಷವೇ ಅದು ನಿಂತು ಹೋಯಿತೆಂದು ಎಲ್ಲರೂ ಆಶ್ಚರ್ಯಪಡುತ್ತಿದ್ದರು. - ಸತ್ಯ-ನೀನು ನೋಡಿರುವುದನ್ನು ನನಗೆ ಹೇಳುತ್ತೀಯಾ ? ಪರ್ವ--ನಮ್ಮ ನೆಂಟನೇ ಒಬ್ಬನು ಎಪ್ಪತ್ತು ವರುಷದವನು ಸತ್ತು ಹೋ ದನು. ಆತನ ಮೂರನೆಯ ಮದುವೆಯ ಹೆಂಡತಿ ಇನ್ನೂ ದೊಡ್ಡವಳಾಗಿರಲ್ಲ. ಆಗ ಅವಳಿಗೆ ಸುಮಾರು ಏಳುವರುಷ, ಆದಕಾರಣ ಗಂಡನು ಸತ್ತುಹೋದರೆ