೯೪ ಸತ್ಯವತೀ ಚರಿತ್ರೆ 1wws/\
- \r\n\r: # x/ 1 # \ \ry
- # # \ \ \ \
- * # /\” # ' + + * # \r\ \ \ */*/ 6,
Y? ಚೆನ್ನಾಗಿ ಅಳುವುದಕ್ಕೂ ಅವಳಿಗೆ ತಿಳಿಯದು, ಅವಳ ತಂದೆ ಶೈತ್ರಿಯನು. ಆತನು ನಿತ್ಯಕರ್ಮಗಳೆಲ್ಲಾ ಮುಗಿದಮೇಲೆ ಅಪರಾಹ್ನ ತಿರುಗಿದ ಹೊರತು ಊಟಮಾಡತಕ್ಕೆ ವನಲ್ಲ, ಗಂಡನು ಸತ್ತು ಹೋದಾಗ ಆ ಹುಡುಗಿ ಬೀದಿಯಲ್ಲಿ ಆಡುತಿದ್ದಳು. ಆಗ ಅವಳನ್ನು ಎತ್ತಿಕೊಂಡು ಒಳಗೆ ಹೋಗಿ ಅಮ್ಮಾ, ನೀನು ಸಹಗಮನಮಾಡಿದರೆ ಯಾವಾಗಲೂ ಸ್ವರ್ಗದಲ್ಲಿ ಗಂಡನೊಂದಿಗೆ ಸುಖಸಡಬಹುದು, ಮತ್ತು ಗಂಡನ ವಂಶದವರನ್ನೂ ನಿನ್ನ ತಂದೆಯ ಕುಲದವರನ್ನೂ ಉದ್ಧಾರಮಾಡಬಹುದು ; ಎಂದು ತಂದೆ ಹೇಳಿದನು. ಆಗ ಆ ಹುಡುಗಿ ಸಹಗಮನವೆಂದರೇನೋ ಅದನ್ನು ತಿಳಿಯದೆ ಆಗಲೆಂದು ಒಪ್ಪಿಕೊಂಡಳು. ಕೂಡಲೆ ಆ ಹುಡುಗಿಗೆ ಮೈ ತುಂಬಾ ಒಡವೆಗಳನ್ನು ಇಡಿಸಿ, ಒಳ್ಳೆ ಸೀರೆಯನ್ನು ಉಡಿಸಿ, ಹೊಸ ಮದುವಣಗಿತ್ತಿಯಂತೆ ಸಿಂಗರಿಸಿ ಬಾಜಾ ಬಜಂತ್ರಿ ಮುಂತಾದುವುಗಳಿಂದ ಶವದೊಂದಿಗೆ ಮೆರವಣಿಗೆ ಮಾಡಿಸುತ್ತಾ ದೂರವಾಗಿರುವ ಗೋದಾವರೀತೀರಕ್ಕೆ ತೆಗೆದುಕೊಂಡು ಹೋದರು. ಅದನ್ನು ನೋ ಡುವುದಕ್ಕಾಗಿ ಊರಿಂದ ಸಾವಿರಾರು ಮಂದಿಗಳು ಹೋದರು, ಅರಿಸಿನಕುಂಕುಮ ತೆಗೆದುಕೊಳ್ಳುವುದಕ್ಕಾಗಿ ಊರಲ್ಲಿದ್ದ ಮುತ್ತೈದೆಯರೆಲ್ಲ ರೂಹೋದರು, ಮೊತ್ತ ಮೊದಲು ಬ್ರಾಹ್ಮಣರು ಗಂಡನ ತಲೆಯನ್ನು ಆ ಹುಡುಗಿಯ ತೊಡೆಯ ಮೇಲೆ ಇರಿಸಿ ಮಂತ್ರ ಹೇಳುತ್ತಾ ಏನೇನೋ ಕರ್ಮಗಳನ್ನು ಮಾಡಿಸಿದರು. ಆಮೇಲೆ ಆ ಹುಡುಗಿಯ ತಂದೆ ಅವಳ ನಗೆಗಳನ್ನೆಲ್ಲಾ ತೆಗೆಯಿಸಿ ಬ್ರಾಹ್ಮಣರಿಗೆಲ್ಲರಿಗೂ ಹಂಚಿ ಕೊಟ್ಟನು. ಸತ್ಯ-ಮುತ್ತೈದೆಯರಿಗೆ ಯಾವಾಗ ಅರಸಿನ ಕುಂಕುಮ ಕೊಟ್ಟರು ? ಪಾರ್ವ- ಬಹುಕಾಲವಾದುದರಿಂದ ಅದು ನನಗೆ ಮರೆತು ಹೋಯಿತು. ಅಷ್ಟರೊಳಗೆಯೇ ಕೊಟ್ಟಿರಬಹುದು, ಜನ್ಮಾಂತರಗಳಲ್ಲಿಯ ಮುತ್ತೈದೆತನ ಬರು ವುದೆಂದು ಆಗ ಅರಿಸಿನ ಕುಂಕುಮಗಳನ್ನು ನಾನೂ ತೆಗೆದುಕೊಂಡೆನು. ಬ್ರಾಹ್ಮ ಇರು ಚಿತೆಯ ಮೇಲೆ ಆ ಹುಡುಗಿಯನ್ನು ಗಂಡನ ಮಗ್ಗುಲಲ್ಲಿ ಮಲಗಿಸಿ ಸುಮ್ಮನೆ ಮಂತ್ರ ಹೇಳುತ್ತಿದ್ದರು. ಆಗ ವಾದ್ಯದ ಶಬ್ದ ತಾನೇ ತಾನಾಗಿ ಹರಡಿಕೊಂಡು ಬೇರೆ ಯಾವ ಶಬ್ದವೂ ಕಿವಿಗೆ ಕೇಳದಂತೆ ಮಾಡಿದ್ದಿತು. ಆಗೆ ತಂದೆಯೇ ಇರಬ ಹುದು, ನಾಲ್ಕು ಕಡೆಯ ಬೆಂಕಿ ಹೊತ್ತಿಸುವಾಗ್ಗೆ ನಾನು ಹೇಳಲಾರೆನು; ಈಗಲೂ ಅದು ಕಣ್ಣಿಗೆ ಕಟ್ಟಿದಂತಿದೆ, ನನ್ನ ಮೈಯೆಲ್ಲಾ ನಡುಗುತ್ತದೆ. ಸತ್ಯ- ಈಗ ಕೇಳಿದರೆ ನಮಗೇ ಇಷ್ಟು ವ್ಯಸನವಾಗುತ್ತದೆ, ಹತ್ತಿರವಿ ದ್ದು ಅದನ್ನೆಲ್ಲಾ ನೋಡಿದ ನಿನಗೆ ಆಗ ಎಷ್ಟು ವ್ಯಸನವಾಯಿತೋ ಇಂತಹ ಕ್ರೂರ ಕೃತ್ಯಗಳನ್ನು ನಿಲ್ಲಿಸಿದ ದೊರೆಗಳನ್ನು ನೀನು ಬಯ್ಯಬಹುದೇ.