ಪುಟ:ಸುವರ್ಣಸುಂದರಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊರಡಿಯ ಪ್ರಕಾಶವು ಬಹಳವಾಗಿದೆ ! ಸುವರ್ಣದ ರಾಶಿಯಲ್ಲವೂ ಮತ್ತಷ್ಟು ಹೆಚ್ಚಾಗಿ ಧಳಧಳಿಸುತ್ತಿದೆ ! ಒಂದೊಂದು ಮಲೆಯ ಲ್ಲಿಯೂ ಬೆಳಕು ಬಿದ್ದು ಪ್ರಕಾಶಮಾನವಾಗಿದೆ 1 ಈತನು ನಕ್ಕರೆ ಕೂಡಲೆ ಉರಿಯುವ ಕೊಳ್ಳಿಯಂತೆ ಪ್ರಕಾಶವು ಮತ್ತಷ್ಟು ಹೆಚ್ಚು ವುದು | ಇದನ್ನು ನೋಡಿ ಸುವರ್ಣಶೇಖರನು ದಿಮೆ ಹಿಡಿದವ ನಾದನು ಬಾಗಿಲನ್ನು ಗಟ್ಟಿಯಾಗಿ ಹಾಕಿ ಬೀಗಹಾಕಿದ್ದೇನೆ. ಮನುಷ್ಯನಿಗೆ ಎಷ್ಟು ಮಾತ್ರಕ್ಕೂ ಬಾಗಿಲನ್ನು ತಳ್ಳಿ ಒಳಗೆ ಬರು ವುದಕ್ಕೆ ಸಾಧ್ಯವಾಗುವಂತಿಲ್ಲ ಹೀಗಿರುವಾಗ ಬಂದಿರುವ ಈ ಮಹಾತ್ಮನು ದೇವಾಂಶ ಸಂಭೂತನೇ ಆಗಿರಬೇಕು ಈತನು ಇಷ್ಟೊಂದು ಶಾಂತಚಿತ್ತನಾಗಿಯೂ, ಹಸನ್ಮುಖಿಯಾಗಿಯೂ ಇರುವಾಗ ಈತನೇನೂ ನನಗೆ ಕೇಡನ್ನು ಖಂಡಿತವಾಗಿ ಮಾಡ ಲಾರನೆಂದು ಸುವರ್ಣಶೇಖರನ ಕಡೆಗೆ ಧೈರ್ಯ ತಂದುಕೊಂಡನು ಕೊರಡಿಯ ನಾಲ್ಕೂ ಕಡೆಗೂ ನೋಡುತ್ತ ಮಂದಹಾಸ ಯುಕ್ತನಾಗಿರುವ ಆ ದೈವಾಂಶ ಪರುಷನು ಇವನನ್ನು ಕುರಿತು, « ಏನಯ್ಯಾ, ಸುವರ್ಣಶೇಖರನೆ, ನೀನು ಒಳ್ಳೆಯ ಐಶ್ವರ್ಯ ವಂತನು ನಿನ್ನಂತೆ ಇಷ್ಟೊಂದು ಐಶ್ವರ್ಯವನ್ನು ಶೇಖರಿಸಿ ಇಟ್ಟುಕೊಂಡಿರುವ ಪುರುಷನು ಇನ್ನೊ ಬ್ಬನಿರಲಾರನು ಎಂದನು. ಅದಕ್ಕೆ ಸುವರ್ಣಶೇಖರಸು- ಎನೂ ಶೇಖರಿಸಿದೇನೆ, ಆದರೂ ಅದೇನೂ ಬಹಳವಲ್ಲ ಅದನ್ನು ಕೂಡಿಡು ವದಕ್ಕೆ ನನ್ನ ಜೀವ ಮಾನವೆಲ್ಲಾ ಹಿಡಿದಿದೆ ಏನೋ ಒಂದು ಸಾವಿರ ವರ್ಷವಾ ದರೂ ಬದುಕಿದ್ದರ ಇದ್ದುದರಲ್ಲಿ ಸ್ವಲ್ಪ ಐಶ್ವರ್ಯ ಸಂಪಾದನೆ ಮಾಡಬಹುದು, ಎಂದು ಅಸಮಾಧಾನದಿಂದ ಉತ್ತರಕೊಟ್ಟನು. « ಓಹೋ ! ಹಾಗಾದರೆ ನಿನಗೆ ಇನ್ನೂ ತೃಪ್ತಿಯಿಲ್ಲ,” ಎಂದು ಆತನು ಆಶ್ಚರ್ಯಪಡಲು , ತೃಪ್ತಿಯೆಲ್ಲಿಯದು ? ಸರಿ,” ಎಂದು